ಯಲಬುರ್ಗಾ ಮಕ್ಕಳಲ್ಲಿ ಹುದುಗಿರುವ ಪ್ರತಿಭೆ ಹೊರತರಲು ಇಂತಹ ಬೇಸಿಗೆ ಶಿಬಿರಗಳು ಸಹಕಾರಿಯಾಗಲಿವೆ ಎಂದು ಜನನಿ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ ಹಾಗೂ ಹೇಮಾದ್ರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಬೇಸಿಗೆ ಶಿಬಿರ ಸಮರೂಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,ಶಿಬಿರದಲ್ಲಿ ಪಡೆದ ತರಬೇತಿ ಮಕ್ಕಳ ಜೀವನದ ಮೇಲೆ ಸಾಕಷ್ಟು ಪರಿಣಾಮ ಬೀರಲಿದೆ. ಮಕ್ಕಳ ಬೇಸಿಗೆ ಶಿಬಿರ ಆಯೋಜನೆಯಲ್ಲಿ ಬಾಲ ಭವನ ಸೊಸೈಟಿ, ಯುನಿಸೆಫ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಮುಖ ಪಾತ್ರ ವಹಿಸಿದೆ.ಶಿಬಿರದ ಯಶಸ್ಸು ಮತ್ತು ಮಕ್ಕಳ ಕಲಿಕೆಯನ್ನು ಪ್ರದರ್ಶಿಸುವ ಪ್ರಮುಖ ಕಾರ್ಯಕ್ರಮವಾಗಿದೆ. ಇದು ಸಾಂಸ್ಕೃತಿಕ ಪ್ರದರ್ಶನಗಳು, ಕಲಾಕೃತಿಗಳ ಪ್ರದರ್ಶನ, ಪ್ರಮಾಣಪತ್ರ ವಿತರಣೆ ಮತ್ತು ಭವಿಷ್ಯದ ಪ್ರೇರಣೆಯ ಮಾತುಗಳನ್ನು ಒಳಗೊಂಡಿರುತ್ತದೆ ಎಂದು ತಿಳಿಸಿದರು.
ಪ್ರಮುಖರಾದ ಶಿವಪ್ಪ ವಾದಿ,ಹಾಗೂ ನಿವೃತ್ತ ಮುಖ್ಯೋಪಾಧ್ಯಾಯರಾದ ಅಶೋಕ್ ಮಾಲಿಪಾಟೀಲ್ ಮಾತನಾಡಿ,ಮಕ್ಕಳಲ್ಲಿ ಅಡಗಿರುವ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಹೊರತರುವಲ್ಲಿ ಬೇಸಿಗೆ ಶಿಬಿರಗಳು ಪ್ರಮುಖ ಪಾತ್ರವಹಿಸುತ್ತವೆ.ಬೇಸಿಗೆ ಶಿಬಿರಗಳಲ್ಲಿ ಭಾಗವಹಿಸುವುದರಿಂದ ಮಕ್ಕಳು ಸಂತೋಷಪಡುವುದರ ಜೊತೆಗೆ ತಮ್ಮಲ್ಲಿರುವ ಪ್ರತಿಭೆಗಳನ್ನು ಅನಾವರಣಗೊಳಿಸಬಹುದು. ಜನನಿ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ ಸಂಸ್ಥೆ ಮಕ್ಕಳ ಶಿಕ್ಷಣಕ್ಕಾಗಿ ಹಲವು ವಿಭಿನ್ನ ಕಾರ್ಯಕ್ರಮವನ್ನು, ತರಬೇತಿ ಹಾಗೂ ಉಚಿತ ಕ್ರೀಡಾ ಶಿಬಿರ ನಡೆಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ.ಬೇಸಿಗೆ ರಜೆ ಅವಧಿಯಲ್ಲಿ ಮಕ್ಕಳು ಇಂತಹ ಶಿಬಿರಗಳಲ್ಲಿ ಭಾಗವಹಿಸುವುದರಿಂದ ಕ್ರೀಡಾಸ್ಫೂರ್ತಿ ಬೆಳೆಯುತ್ತದೆ. ನಾಯಕತ್ವ ಗುಣ, ಮಾರ್ಗದರ್ಶನ ಸಾಮರ್ಥ್ಯ ಹಾಗೂ ಶಿಸ್ತು ಬೆಳೆಯಲು ಕ್ರೀಡೆ ಸಹಕಾರಿ’ ಎಂದು ಹೇಳಿದರು.
ಕಾರ್ಯಕ್ರಮ ಉದ್ದೇಶಿಸಿ ಪ್ರಾಚಾರ್ಯ ಯಶ್ವಂತ್ ಕಾಂಬ್ಳೆಕರ್ ಹಾಗೂ ನಿವೃತ್ತ ಪ್ರಾಚಾರ್ಯ ಎಂ ಎನ್ ಜನಾದ್ರಿ ಮಕ್ಕಳಿಗೆ ಮಾರ್ಗದರ್ಶನ ನೀಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಾಣೇಶ್ ವಲ್ಮಕೊಂಡಿ, ಆಡಳಿತ ಅಧಿಕಾರಿ ಲೋಕೇಶ್ ಲಮಾಣಿ,ಮುಖ್ಯೋಪಾಧ್ಯಾಯ ಅಕ್ಷಯಕುಮಾರ ಪತ್ತಾರ, ಶಿಕ್ಷಕರಾದ ನಾಸೀರ್ ಹುಸೇನ, ಮಹಾಂತೇಶ್ ಮಂಗಳೂರು, ರತ್ನ ಡಿ.ಹೆಚ್,ಗೀತಾ ಜೋಗಿನ,ವಿಜಯಾ ಕುಂಬಾರ,ಅಮೃತ ಹೊಸಳ್ಳಿ ಸೇರಿದಂತೆ ಇತರರು ಇದ್ದರು.
