ಕ್ಷೇತ್ರದ ಶಾಸಕ ಬಸವರಾಜ ರಾಯರಡ್ಡಿ ವಿಧಾನ ಸಭೆಯಲ್ಲಿ ಯಲಬುರ್ಗಾ ಮಾನ ಮರ್ಯಾದೆ ಹರಾಜು.
ನೀವು ಕ್ಷೇತ್ರದಲ್ಲಿ ಉಳಿದುಕೊಂಡು ನೋಡಿ ಆಮೇಲೆ ಗೊತ್ತಾಗಲಿದೆ.
ಅಭಿವೃದ್ಧಿ ಹರಿಕಾರರ ಕಣ್ಣಿಗೆ ಯಲಬುರ್ಗಾದಲ್ಲಿ ಶೂನ್ಯ ಸಾಧನೆ.?
ಯಲಬುರ್ಗಾ: ಪಟ್ಟಣದ ಕೇಂದ್ರ ಸ್ಥಾನದಲ್ಲಿ ಇಡ್ಲಿ ದೋಸೆ ಸಿಗಲ್ಲವಂತೆ, ಅಷ್ಟು ನಮ್ಮದು ಹಿಂದುಳಿದ ಪ್ರದೇಶವಾಗಿದೆಯಂತೆ. ಆಗಂತ ನಾವು ಹೇಳುತ್ತಿಲ್ಲ. ವಿಧಾನ ಸಭಾ ಅಧಿವೇಶನ ವೇಳೆ ಕ್ಷೇತ್ರದ ಶಾಸಕ ಬಸವರಾಜ ರಾಯರಡ್ಡಿ ಅವರೇ ಯಲಬುರ್ಗಾ ಕ್ಷೇತ್ರದ ಮಾನ ಮರ್ಯಾದೆಯನ್ನು ಹರಾಜು ಹಾಕಿದ್ದಾರೆ.
ಹೌದು...! ಯಲಬುರ್ಗಾ ಕ್ಷೇತ್ರದ ಪ್ರತಿ ಹಳ್ಳಿಗಳಿಗೂ ಹೋದರೇ ಎಲ್ಲಾ ಹಳ್ಳಿಗಳಲ್ಲಿ ಇಡ್ಲಿ ದೋಸೆ ಹಾಗೂ ಇನ್ನಿತರ ತಿಂಡಿ ತಿನಿಸುಗಳು ಸಿಗುತ್ತವೆ. ಎಂತಹ ಕುಗ್ರಾಮಕ್ಕೂ ಹೋದರು ಸಹ ತಿಂಡಿ ತಿನಿಸು ಸಿಗುವ ಈ ಕಾಲದಲ್ಲಿ ಯಲಬುರ್ಗಾ ಪಟ್ಟಣವನ್ನು ಕುಗ್ರಾಮಕ್ಕಿಂತ ಕೀಳು ಮಟ್ಟಕ್ಕೆ ತಂದರು ರಾಯರಡ್ಡಿ ಅವರು ಎಂಬ ಪ್ರಶ್ನೆ ಕ್ಷೇತ್ರದ ಮತದಾರರನ್ನು ಕಾಡುತ್ತಿದೆ.
ಕ್ಷೇತ್ರದಿಂದ ಏಳೆಂಟು ಬಾರಿ ಗೆಲವು ಸಾಧಿಸಿದ ರಾಯರಡ್ಡಿ ಮಾತ್ರ ಒಂದು ದಿನಾನು ಕ್ಷೇತ್ರದಲ್ಲಿ ಉಳಿದುಕೊಳ್ಳದೇ ಬೆಂಗಳೂರಿನಲ್ಲಿರುತ್ತಾರೆ. ಈಗಿರುವಾಗ ಯಲಬುರ್ಗಾದಲ್ಲಿ ಏನು ಉಪಹಾರ ಸಿಗುತ್ತದೆ ಎಂಬುದು ಎಲ್ಲಿಂದ ಗೊತ್ತಾಗಬೇಕು.
ಜೆಡಿಎಸ್ ಪಕ್ಷದ ಜಿಲ್ಲಾ ವಕ್ತಾರ ಮಲ್ಲನಗೌಡ ಕೋನನಗೌಡ್ರ ಅವರು 'ಯಲಬುರ್ಗಾ ದಲ್ಲಿ ಇಡ್ಲಿ ದೋಸೆ ಸಿಗದ ಹಾಗೇ ಅಭಿವೃದ್ಧಿ ಪಡಿಸಿದ ಹಾಗೂ ತಮ್ಮ ಪರಮ ಆಪ್ತ ಹುನಗುಂದದ ಜರ್ಸಿ ಆಕಳಿಗೆ ಅಭಿನಂದನೆಗಳು' ಎಂದು ರಚಿಸಿಕೊಂಡ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಸದ್ಯ ವೈರಲ್ ಆಗುತ್ತಿದೆ.
ನೀವು ಕ್ಷೇತ್ರದ ಉಳಿದುಕೊಳ್ಳಿ ಮೊದಲು: ಕ್ಷೇತ್ರಕ್ಕೆ ಅಥಿತಿ ಯಂತೆ ಬಂದು ಹೋಗುವ ಶಾಸಕ ರಾಯರಡ್ಡಿ ಗೆ ಯಲಬುರ್ಗಾ ಪಟ್ಟಣದಲ್ಲಿ ಏನೆಲ್ಲಾ ಸಿಗಲಿದೆ ಎಂಬುದು ಹೇಗೆ ಗೊತ್ತಾಗಲಿದೆ.? ಕಳೆದ 35 ವರ್ಷಗಳಿಂದ ಗೆಲುವು ತಂದು ಕೊಟ್ಟ ಕ್ಷೇತ್ರದಲ್ಲಿ ಒಂದು ದಿನ ಸಹ ಯಲಬುರ್ಗಾ ಪಟ್ಟಣ ಅಥವಾ ಕ್ಷೇತ್ರದ ಯಾವುದೇ ಹಳ್ಳಿಯಲ್ಲಿ ಉಳಿದುಕೊಂಡಿಲ್ಲ. ಕ್ಷೇತ್ರಕ್ಕೆ ಆಗಮಿಸದಾಗ ಹೊಸಪೇಟೆಯ ಮಲ್ಲಿಗೆ ತ್ರಿ ಸ್ಟಾರ್ ಹೊಟೇಲ್‌ನಲ್ಲಿರುವ ನಿಮಗೆ ಯಲಬುರ್ಗಾದಲ್ಲಿ ಏನು ಸಿಗಲಿದೆ ಎಂಬುದು ನಿಮಗೆ ಹೇಗೆ ಗೊತ್ತಾಗಬೇಕು. ಯಲಬುರ್ಗಾದಲ್ಲಿನ ಇಡ್ಲಿ ದೋಸೆ ಸವಿಯಲು ನೀವು ಮೊದಲು ಯಲಬುರ್ಗಾದಲ್ಲಿ ಉಳಿದುಕೊಳ್ಳಿ.
ಯಲಬುರ್ಗಾ ಪಟ್ಟಣವನ್ನು ಏಕೆ ಅವಮಾನಿಸುವಿರೀ.? ಯಲಬುರ್ಗಾ ಪಟ್ಟಣ ಸೇರಿ ಕ್ಷೇತ್ರದಲ್ಲಿ ಯಾವುದೇ ದೊಡ್ಡ ಹೊಟೇಲ್ ಹಾಗೂ ಉಪಹಾರದ ಅಂಗಡಿಗಳಿಲ್ಲ. ಯಲಬುರ್ಗಾ ತೀರಾ ಹಿಂದುಳಿದ ಪ್ರದೇಶವೆಂದು ಹೇಳುತ್ತಿದ್ದೀರಿ. ಅದೇ ನಿಮ್ಮ ಬ್ಯಾನರ್ ಹಾಗೂ ಇನ್ನಿತರ ಕಾರ್ಯಕ್ರಮಗಳಲ್ಲಿ ಯಲಬುರ್ಗಾ ಕ್ಷೇತ್ರ ಅಭಿವೃದ್ಧಿಯಲ್ಲಿ ಉನ್ನತ ಸ್ಥಾನದಲ್ಲಿದೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತೀರಿ. ನೀವು ನಿಜ ಅಭಿವೃದ್ಧಿ ಪಡಿಸಿದ್ದೆ ಆದರೆ ಯಾಕೆ ಇಡ್ಲಿ ದೋಸೆ ಸಿಗುತ್ತಿರಲಿಲ್ಲ. ಯಾವಾಗಲೂ ತ್ರಿ ಸ್ಟಾರ್ ಹೊಟೇಲ್ ನಲ್ಲಿನ ತಿಂಡಿ ತಿನಿಸು ತಿನ್ನಲು ಕ್ಷೇತ್ರದ ಅಂಗಡಿಕಾರರು ಹಾಗೂ ಸಾರ್ವಜನಿಕರು ನಿಮ್ಮಷ್ಟು ಶ್ರೀಮತಂರಲ್ಲ. ಹೃದಯ ಶ್ರೀಮಂತರಿರುವ ಕ್ಷೇತ್ರದ ಮತದಾರ ಪ್ರಭುಗಳು ಕ್ಷೇತ್ರದಲ್ಲಿರುವ ಅಂಗಡಿ ಮುಗ್ಗಟ್ಟು ಗಳಲ್ಲಿಯೇ ಸಿಗುವ ಉಪಹಾರ ಸವಿದು ಅಂಗಡಿ ಮಾಲೀಕರನ್ನು ಉದ್ಧಾರ ಮಾಡುತ್ತಿದ್ದಾರೆ. ಆದರೆ, ನೀವು ಕ್ಷೇತ್ರದಲ್ಲಿರುವ ಹೊಟೇಲ್ ಅಂಗಡಿಗಳನ್ನ ಹಾಗೂ ಅದರ ಮಾಲೀಕರನ್ನು ವಿಧಾನ ಸಭಾ ಅಧಿವೇಶನದಲ್ಲಿ ಅವಮಾನಿಸಿದ್ದೀರಿ.
ಕ್ಷೇತ್ರದ ಮುಗ್ಧ ಮತದಾರ ನಿಮಗೆ ಪದೇ ಪದೇ ಗೆಲವು ತಂದು ಕೊಟ್ಟಿರುವುದು ನೀವು ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲೆಂದು ಆದರೆ, ನೀವು ಮಾತ್ರ ಕೇವಲ ಭ್ರಮಾ ಲೋಕದಲ್ಲಿ ಅಭಿವೃದ್ಧಿ ಪಡಿಸಿದ್ದೇನೆಂದು ಹೇಳಿಕೊಳ್ಳುತ್ತಾ? ಕ್ಷೇತ್ರದಲ್ಲಿರುವ ಮತದಾರರನ್ನು ಹಾಗೂ ಹೊಟೇಲ್ ಅಂಗಡಿ ಮಾಲೀಕರನ್ನು ಅವಮಾನಿಸುವಲ್ಲಿ ಮುಂದಾಗಿದ್ದೀರಿ. ನಿಮಗೆ ಕ್ಷೇತ್ರದ ಬಗ್ಗೆ ಹಾಗೂ ಕ್ಷೇತ್ರದ ಜನರ ಬಗ್ಗೆ ಅಷ್ಟೊಂದು ಕಾಳಜಿ ಇದ್ದಿದ್ದರೇ ಯಲಬುರ್ಗಾ ಪಟ್ಟಣದಲ್ಲಿಯೇ ಎಲ್ಲಾ ಸರ್ಕಾರಿ ಕಟ್ಟಡಗಳನ್ನು ನಿರ್ಮಾಣ ಮಾಡುವ ಮೂಲಕ ಅಭಿವೃದ್ಧಿ ಪಡಿಸಿ ತೋರಿಸಬೇಕಿತ್ತು. ಅದನ್ನು ಬಿಟ್ಟು ಈ ರೀತಿ ಯಲಬುರ್ಗಾ ವನ್ನು ಅವಮಾನಿಸುವುದು ಸರಿಯಲ್ಲ. ಯಲಬುರ್ಗಾದಲ್ಲಿ ಇಡ್ಲಿ ದೋಸೆ ಸಿಗುವುದಿಲ್ಲ ಅಂತಾ ನೀವೇ ಹೇಳಿದ್ದೀರಿ. ಇಡ್ಲಿ ದೋಸೆ ಸಿಗದ ಕ್ಷೇತ್ರ ನಿಮಗ್ಯಾಕೆ ಬೇಕು. ಒಂದು ಸಾರಿಯಾದರೂ ಯಲಬುರ್ಗಾ ಬಿಟ್ಟು ಬೇರೆ ಕ್ಷೇತ್ರದಲ್ಲಿ ಒಂದೇ ಒಂದು ಸಾರಿ ಗೆದ್ದು ತೋರಿಸಿ ಅವಾಗ ಯಲಬುರ್ಗಾದಲ್ಲಿ ಇಡ್ಲಿ ದೋಸೆ ಸಿಗುವುದಿಲ್ಲ ಎಂಬುದನ್ನು ಕ್ಷೇತ್ರದ ಜನ ಒಪ್ಪಿಕೊಳ್ಳುತ್ತಾರೆ.
ಯಲಬುರ್ಗಾ ಕ್ಷೇತ್ರದಲ್ಲಿ ಒಂದು ದಿನಾ ಆದರೂ ಶಾಸಕ ಬಸವರಾಜ ರಾಯರಡ್ಡಿ ಉಳಿದುಕೊಳ್ಳಲಿ. ಹೈಟೆಕ್ ರಾಜಕಾರಣಿಗೆ ಹೈಟೆಕ್ ಹೋಟೆಲ್ ಗಳೇ ಬೇಕು. ಯಲಬುರ್ಗಾದಲ್ಲಿರುವ ಸಣ್ಣ ಪುಟ್ಟ ಹೋಟೆಲ್ ಗಳನ್ನು ವಿಧಾನ ಸಭೆಯ ಅಧಿವೇಶನದಲ್ಲಿ ಅವಮಾನಿಸಿರುವುದು ಸರಿಯಲ್ಲ. ರಾಯರಡ್ಡಿ ಹೈಟೆಕ್ ರಾಜಕಾರಣಿಯಾಗಲು ಕ್ಷೇತ್ರದ ಮತದಾರರ ಆಶೀರ್ವಾದವೇ ಕಾರಣ. ಅವರನ್ನು ಸಹ ಅವಮಾನ ಮಾಡುವುದು ಎಷ್ಟು ಸರಿ.
ಮಲ್ಲನಗೌಡ ಕೋನನಗೌಡ್ರ, ಜೆಡಿಎಸ್ ಜಿಲ್ಲಾ ವಕ್ತಾರ.
