ಒಂದು ವರೆ ತಿಂಗಳು ಕಳೆದ ಮೇಲೆ ಕ್ಷೇತ್ರಕ್ಕೆ ಆಗಮನ
ಬೆಂಗಳೂರಿನಲ್ಲಿ ವಾಸ್ತವ್ಯಕ್ಕೆ ಸೀಮಿತವಾದ ಶಾಸಕ.
ವಿದ್ಯುತ್ ಕಂಬಳ ಅಳವಡಿಕೆಗೆ ತತ್ತರಗೊಂಡ ಅನ್ನದಾತರು
ಯಲಬುರ್ಗಾ: ಕ್ಷೇತ್ರಕ್ಕೆ ಅತಿಥಿ ಯಂತೆ ಆಗೊಮ್ಮೆ ಈಗೊಮ್ಮೆ ಬಂದು ಹೋಗುವ, ಶಾಸಕ ಬಸವರಾಜ ರಾಯರಡ್ಡಿ ಬರುತ್ತಿದ್ದಾರೆ ದಯಮಾಡಿ ದಾರಿ ಬಿಡಿ ಪ್ಲೀಸ್...!
ಕ್ಷೇತ್ರಾದ್ಯಂತ ಮಳೆ ಕೊರತೆಯಿಂದಾಗಿ ಬಿತ್ತನೆಗೆ ಹಿನ್ನೆಡೆಯಾಗಿರುವುದು ಒಂದೇಡೆಯಾದರೇ, ರೈತರ ಜಮೀನುಗಳಲ್ಲಿ ಬೇಕಾ ಬಿಟ್ಟಿಯಾಗಿ ವಿದ್ಯುತ್ ಬೃಹತ್ ಕಂಬಗಳ ಅಳವಡಿಕೆಗೆ ಸಂಬಂಧಿಸಿದಂತೆ ಮೇಲಿಂದ ಮೇಲೆ ವ್ಯಾಜ್ಯಗಳು ಉಲ್ಬಣಗೊಳ್ಳುತ್ತಿವೆ. ಈ ಬಗ್ಗೆ ಅನ್ನದಾತರು ಕ್ಷೇತ್ರದ ಶಾಸಕನಿಗೆ ತಮ್ಮ ಅಳಲು ತೋಡಿಕೊಳ್ಳಬೇಕು ಎಂದು ಯಲಬುರ್ಗಾ ಪಟ್ಟಣಕ್ಕೆ ಆಗಮಿಸಿದರು ಸಹ ರಾಯರಡ್ಡಿ ಮಾತ್ರ ರೈತರಿಗೆ ಕಣ್ಮರೆಯಾಗಿದ್ದಾರೆ.
ಕಳೆದ ಮೇ 16 ಮತ್ತು 17 ರಂದು ಕ್ಷೇತ್ರಕ್ಕೆ ಬಂದು ಹೋಗಿ, ಇಂದಿಗೆ ಒಂದುವರೆ ತಿಂಗಳು ಕಳೆದ ಮೇಲೆ ಕ್ಷೇತ್ರಕ್ಕೆ ರಾಯರಡ್ಡಿ ಆಗಮಿಸುತ್ತಿದ್ದಾರೆ. ಆದರೆ, ಶಾಸಕರ ಕಛೇರಿಯಲ್ಲಿ ಅನ್ನದಾತರ ಕೈ ಸಿಗುವುದು ಅನುಮಾನ. ಜು. 1 ರಿಂದ ಜು. 3 ರವರೆಗೆ ಪ್ರವಾಸ ಕೈಗೊಂಡ ಶಾಸಕ ರಾಯರಡ್ಡಿ ಎರಡು ರಾತ್ರಿ ಹೊಸಪೇಟೆಯಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ. ಇನ್ನೂ ಮೂರು ದಿನ ಹಗಲು ವೇಳೆ ಕ್ಷೇತ್ರದಲ್ಲಿ ಉಲ್ಬಣಗೊಂಡ ಪವನ ವಿದ್ಯುತ್ ಕಂಬಗಳ ಅಳವಡಿಕೆಗೆ ಸಂಬಂಧಿಸಿದಂತೆ ಮಧ್ಯವರ್ತಿ ಹಾಗೂ ತಮ್ಮ ಹಿಂಬಾಲಕರಿಂದ ಆಗುತ್ತಿರುವ ಅನ್ಯಾಯವನ್ನು ತಡೆಯಲಿದ್ದಾರೆಂಬುದನ್ನು ಕಾದು ನೋಡಬೇಕಿದೆ.
ಕ್ಷೇತ್ರದ ಶಾಸಕ ಬಸವರಾಜ ರಾಯರಡ್ಡಿ ಅವರು ಮಾಜಿ ಸಿಎಂ ಸಿದ್ದರಾಮಯ್ಯ ನವರ ಆಡಳಿತ ಅವಧಿಯಲ್ಲಿ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಹುದ್ದೆಯ ಅಧಿಕಾರದಲ್ಲಿರುವ ಸಂದರ್ಭದಲ್ಲಿ ಮೇ 16 ಮತ್ತು 17 ರಂದು ಯಲಬುರ್ಗಾ ಪಟ್ಟಣದ ಶಾಸಕರ ಕಛೇರಿಯಲ್ಲಿ ಸಾರ್ವಜನಿಕರ ಭೇಟಿಗೆ ಅವಕಾಶ ಕಲ್ಪಿಸಿದ್ದರು. ಅದಾದ ಬಳಿಕ ಒಂದುವರೆ ತಿಂಗಳು ಕಳೆದ ಮೇಲೆ ಕ್ಷೇತ್ರಕ್ಕೆ ಆಗಮಿಸಲಿದ್ದಾರೆ. ಶಾಸಕರ ಕೆಲ ಹಿಂಬಾಲಕರು ಪವನ ವಿದ್ಯುತ್ (ವಿಂಡ್ ಪವರ) ಕಂಪನಿಗಳ ಜೊತೆಗೆ ಮಧ್ಯ ವರ್ತಿಗಳಾಗಿದ್ದುಕೊಂಡು ತಮ್ಮ ಲಾಭಕ್ಕಾಗಿ ಕಡಿಮೆ ಹಣಕ್ಕೆ ರೈತರ ಜಮೀನನ್ನು ಕಂಪನಿಗೆ ಒಪ್ಪಂದ (ಅಗ್ರಿಮೆಂಟ್) ಮಾಡಿಸಿಕೊಡುತ್ತಿದ್ದಾರೆ. ಅಲ್ಲದೇ ಹೆಚ್ಚಿನ ಹಣಕ್ಕಾಗಿ ಕಂಪನಿಯವರ ಜೊತೆಗೆ ಬೇಡಿಕೆಯನ್ನಿಡುವಂತೆ ರೈತರಿಂದ ಒತ್ತಡ ಹಾಕಿಸುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ಇನ್ನೂ ಈ ಕುರಿತು ರೈತರು ಠಾಣೆಯ ಮೆಟ್ಟಿಲೆರಿದರೇ ಪೊಲೀಸ್ ಅಧಿಕಾರಿಗಳು ಅನ್ನದಾತರ ಸಂಕಷ್ಟಕ್ಕೆ ಸ್ಪಂದಿಸದೇ ಅನ್ನದಾತರ ಮೇಲೆ ದೌರ್ಜನ್ಯ ವೆಸಗಲು ಮುಂದಾಗಿರುವ ಪ್ರಕರಣಗಳು ದಿನದಿಂದ ದಿನಕ್ಕೆ ಬೆಳಕಿಗೆ ಬಂದಿವೆ.
ಕ್ಷೇತ್ರಕ್ಕೆ ಅಥಿತಿ ಯಂತೆ ಬಂದು ಹೋಗುವ ರಾಯರಡ್ಡಿ ಯವರು ಜನ ಸಾಮಾನ್ಯರ ಕೈಗೆ ಸಿಗುವುದು ಅಪರೂಪ. ಕ್ಷೇತ್ರಕ್ಕೆ ತಿಂಗಳು ಎರಡು ತಿಂಗಳಿಗೊಮ್ಮೆ ಬಂದು ಹೋಗುವ ಶಾಸಕ ರಾಯರಡ್ಡಿ ಯನ್ನು ಕಾಣಲು ಕ್ಷೇತ್ರದ ವಿವಿಧ ಹಳ್ಳಿಗಳಿಂದ ಶಾಸಕರ ಕಛೇರಿ ಗೆ ಆಗಮಿಸಿದ ರೈತರು ಹಾಗೂ ಜನ ಸಾಮಾನ್ಯರು ರಾಯರಡ್ಡಿ ಯವರನ್ನು ಭೇಟಿಯಾಗಲು ಮುಕ್ತ ಅವಕಾಶವಿಲ್ಲವಂತೆ. ಪ್ರತಿ ಗ್ರಾಮದಲ್ಲಿ ತಮ್ಮ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಮೂರ್ನಾಲ್ಕು ಜನರನ್ನು ಮಾತ್ರ ರಾಯರಡ್ಡಿ ಯವರು ಒಳಗಡೆ ಬಿಟ್ಟುಕೊಳ್ಳುತ್ತಾರೆ. ಇನ್ನೂ ತಮ್ಮ ಸಮಸ್ಯೆಯನ್ನೊತ್ತು ತರುವ ಅನ್ನದಾತರು ಹಾಗೂ ಸಾರ್ವಜನಿಕರು ರಾಯರಡ್ಡಿ ಯನ್ನು ಭೇಟಿಯಾಗಲು ಅಥವಾ ಕಾಣಲು ಹಿಂಬಾಲಕರ ಒಪ್ಪಿಗೆ ಬೇಕಂತೆ ಒಂದು ವೇಳೆ ಹಿಂಬಾಲಕರ ಮಾತನ್ನು ಮೀರಿ ಒಳಗಡೆ ಹೋದಲ್ಲಿ ರಾಯರಡ್ಡಿ ಸಿಡಿಮಿಡಿಗೊಂಡಿರುವ ಪ್ರಸಂಗಗಳು ಜರುಗಿವೆಯಂತೆ. ದೇವಸ್ಥಾನ ಜೀರ್ಣೋದ್ಧಾರ ಅಥವಾ ಜಾತ್ರಾ ಮಹೋತ್ಸವಕ್ಕೆ ದೇಣಿಗೆ ಕೇಳಲು ತೆರಳಿದ ಸಂದರ್ಭದಲ್ಲಿ ರಾಯರಡ್ಡಿ ಯವರ ಮುಖ ದರ್ಶನ ಮಾಡಿಸದೇ ಐದು ಸಾವಿರ ಪಟ್ಟಿ ಬರೆಸಲು ಸೂಚಿಸಿದ್ದಾರೆಂದು ಹಿಂಬಾಲಕರು ತಾವೇ ಪಟ್ಟಿ ಕೊಟ್ಟು ಕಳುಹಿಸಿದ ಉದಾಹರಣೆಗಳಿವೆ.
ನಾವು ಶಾಸಕ ಬಸವರಾಜ ರಾಯರಡ್ಡಿ ಯವರನ್ನು ಯಲಬುರ್ಗಾದಲ್ಲಿ ಭೇಟಿಯಾಗಿ ಜಾತ್ರೆಗೆ ಪಟ್ಟಿ ಕೇಳೋಕೆ ಹೋದರ್, ನಮ್ಮನ್ನು ಒಳಗಡೆ ಬಿಡದೇ ನಮ್ಮೂರಿನ ಲೀಡರ್ ಗಳು ಸಾಹೇಬರು ಐದು ಸಾವಿರ ಪಟ್ಟಿ ಹೇಳಿದ್ದಾರೆ ತೆಗೆದುಕೊಂಡು ಹೋಗಿ, ಅಂತಾ ಹೇಳಿದರು. ನಮಗೆ ನಿಮ್ಮ ಐದು ಸಾವಿರ ರೂ. ಬೇಡ ಅಂತ ಬಿಟ್ಟು ಬಂದ್ವಿ. ಇಂತ ಶಾಸಕರನ್ನ ಪಡೆದಿದ್ದು ನಮ್ಮ ದುರಂತ.
ಭೀಮಣ್ಣ ಪೂಜಾರ, ಯಮನೂರಪ್ಪ ಕಡೇಮನಿ, ದುರಗಪ್ಪ ಹೊಸಮನಿ ಇತರರು.
