ಡಿ.ಡಿ.ನ್ಯೂಸ್ : ಯಲಬುರ್ಗಾ ಪಟ್ಟಣದ ಎಸ್.ಎ ನಿಂಗೋಜಿ ಬಿ.ಎಡ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿರುವ ಪ್ರಕಾಶ್ ದುರಗಪ್ಪ ಹಳ್ಳಿಗುಡಿ ಇವರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದಾ ಪಿ ಎಚ್ ಡಿ ಪದವಿ ಲಭಿಸಿದೆ.
ಮೂಲತಃ ಪ್ರಕಾಶ್ ಹಳ್ಳಿಗುಡಿ ಅವರು ಕುಕನೂರು ತಾಲೂಕಿನ ನಿಂಗಾಪುರ ಗ್ರಾಮದವರಾಗಿದ್ದು,ಶ್ರೀ ಶಾರದಮ್ಮ ವಿ ಕೂತಬಾಳ ಬಿಬಿಎ, ಬಿಸಿಎ, ಮತ್ತು ಬಿಕಾಮ್ ಪದವಿಗೆ ೩ ವರ್ಷಗಳ ಕಾಲ ಸಹ ಪ್ರಾಧ್ಯಾಪಕರಾಗಿ ಸೇವೆ. ಜಿಎಂಎಂಡಿಆರಎಸ್ ಪಿ ಯು ಕಾಲೇಜ್ ಹಿರೇಸಿಂದೋಗಿ ಹಾಗೂ ಕುಕನೂರಿನಲ್ಲಿ ೫ವರ್ಷ ಕನ್ನಡ ಉಪನ್ಯಾಸಕರಾಗಿ ಸೇವಿ ಸಲ್ಲಿಸಿದ್ದಾರೆ. ಅಲ್ಲದೆ ೬ ವರ್ಷಗಳ ಕಾಲ ಕೊಪ್ಪಳ ನ್ಯಾಯಾಲಯದಲ್ಲಿ ವಕೀಲರಾಗಿ ಸೇವೆ ಇದೆ. ಪ್ರಸ್ತುತ ಯಲಬುರ್ಗಾ ಪಟ್ಟಣದ ಎಸ್,ಎ ನಿಂಗೂಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕನ್ನಡ ವಿಶ್ವವಿದ್ಯಾಲಯದ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಪಿಎಚ್.ಡಿ ಸಂಶೋಧನಾ ವಿದ್ಯಾರ್ಥಿ ಆಗಿ,ಎಸ್.ಪಿ,ಎಂ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಬೆಳಗಾವಿ ಜಿಲ್ಲಾ ರಾಯಬಾಗದಲ್ಲಿ ಪ್ರಾಧ್ಯಾಪಕರಾದ ಡಾ.
ವೈ.ಬಿ ಹಿಮ್ಮಡಿ ಅವರ ಮಾರ್ಗದರ್ಶನದಲ್ಲಿ ಜನಪದ ರಂಗಭೂಮಿ ಅಧ್ಯಯನಗಳ ಸಾತ್ವಿಕ ಸ್ವರೂಪ (Theatrical Futures of Folk Theatre studies) ಎಂಬ ವಿಷಯದಲ್ಲಿ ಸಂಶೋಧನಾ ಕೈಗೊಂಡು ಸಲ್ಲಿಸಿದ ಮಹಾಪ್ರಬಂಧಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪಿ ಎಚ್ ಡಿ (doctor of philosophy) ಪದವಿ ಘೋಷಿಸಲಾಗಿದೆ ಎಂದು ಕನ್ನಡ ವಿಶ್ವವಿದ್ಯಾಲಯ ಹಂಪಿ ವಿದ್ಯಾರಣ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
