ಸೂರ್ಯೋದಯ ಜ್ಞಾನ ವಿಕಾಸ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮ.
ಕುಕನೂರು: ಹಣ, ಆಸ್ತಿ ಸಂಪತ್ತಿಗೆ ಮನುಷ್ಯನಿಗೆ ಜ್ಞಾನದ ಸಂಪತ್ತು ಬಹಳ ಮುಖ್ಯ ಎಂದು ಶ್ರೀ ಅನ್ನದಾನೇಶ್ವರ ಮಠದ ಡಾ. ಮಹಾದೇವ ದೇವರು ಅಭಿಪ್ರಾಯ ಪಟ್ಟರು.
ಪಟ್ಟಣದ ಕುಕನೂರ A-2 ವಲಯದ ಕಾರ್ಯ ಕ್ಷೇತ್ರದ ಸೂರ್ಯೋದಯ ಜ್ಞಾನ ವಿಕಾಸ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಂಗಳವಾರ ಮಾತನಾಡಿದರು. ಇಂದಿನ ಜಂಜಾಟ ಜೀವನದಲ್ಲಿ ಎಲ್ಲರೂ ಹಣ, ಆಸ್ತಿ, ಅಂತಸ್ತು ಸಂಪಾದಿಸುವ ಬರದಲ್ಲಿದ್ದಾರೆ. ಅದರ ಜೊತೆಗೆ ಜ್ಞಾನದ ಸಂಪತ್ತು ಬಹಳ ಮುಖ್ಯವಾಗಿದೆ. ತಾಯಂದಿರು ತಮ್ಮ ದುಡಿಮೆಯ ಸಂಪಾದನೆ ಯಲ್ಲಿ ಕೂಡಿಡುವ ಹಣವು ಆಪ್ತಃ ಕಾಲದ ಸಂದರ್ಭದಲ್ಲಿ ಉಪಯೋಗಕ್ಕೆ ಬರಲಿದೆ. ತಮ್ಮ ದುಡಿಮೆಯ ಜೊತೆಗೆ ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣ ಕೊಡಿಸುವ ಕಡೆಗೆ ಗಮನ ಹರಿಸಬೇಕು. ಬಡವರ ಕಲ್ಯಾಣಕ್ಕಾಗಿ ಸಾಲ ಹಾಗೂ ಧನ ಸಹಾಯ ಮತ್ತು ದೇವಸ್ಥಾನಗಳ ಜೀರ್ಣೋದ್ಧಾರ ಸೇರಿದಂತೆ ಶಿಕ್ಷಣದ ಸಲುವಾಗಿ ಶಾಲಾ-ಕಾಲೇಜುಗಳಿಗೆ ಅನುದಾನ ಒದಗಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.
ಜ್ಞಾನ ವಿಕಾಸ ಸಮನ್ವಯಧಿಕಾರಿ ರೇಖಾ ಮೂಲಿಮನಿ, ವಲಯದ ಮೇಲ್ವಿಚಾರಕ ಶ್ರೀಶೈಲ ಮಾತನಾಡಿದರು. ಕೇಂದ್ರದ ಅಧ್ಯಕ್ಷೆ ಶಮಷಾದ್ ಬೇಗಂ, ಸೇವಾ ಪ್ರತಿನಿಧಿ ಗೀತಾ ಸೇರಿದಂತೆ ಇತರರು ಇದ್ದರು.
