ಯಲಬುರ್ಗಾ: ತಾಲೂಕಿನ ಸಂಗನಾಳ ಗ್ರಾಮದ ವರಾದ ಸರ್ಕಾರಿ ವಸತಿಯುಕ್ತ ಮಾದರಿ ಪ್ರಥಮ ದರ್ಜೆ ಕಾಲೇಜು ತಳಬಾಳದ ಸಹಾಯಕ ಪ್ರಾಧ್ಯಾಪಕರಾದ ಶ್ರೀ ಈರಣ್ಣ ರಾಮಪ್ಪ ಲಗಳೂರ ಅವರಿಗೆ ಪಿಎಚ್‌ಡಿ ಪದವಿ ಪ್ರದಾನ ಮಾಡಲಾಗಿದೆ.
ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ಅರ್ಥಶಾಸ್ತ್ರ ವಿಭಾಗದಲ್ಲಿ “ಆನ್ ಇವ್ಯಾಲ್ಯೂಯೇಷನ್ ಆಫ್ ಮುದ್ರಾ ಯೋಜನಾ ಇನ್ ಕರ್ನಾಟಕ – ಎ ಕೇಸ್ ಸ್ಟಡಿ ಆಫ್ ಗದಗ ಡಿಸ್ಟ್ರಿಕ್ಟ್” ಎಂಬ ವಿಷಯದ ಮೇಲೆ ಅವರು ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ಈ ಗೌರವ ಲಭಿಸಿದೆ.
ಏಪ್ರಿಲ್ 23, 2026ರಂದು ನಡೆದ ವಿಶ್ವವಿದ್ಯಾಲಯದ 75ನೇ ವಾರ್ಷಿಕ ಘಟಕೋತ್ಸವದಲ್ಲಿ ಕುಲಪತಿಗಳು ಹಾಗೂ ರಾಜ್ಯಪಾಲರಾದ ಥಾವರ್ ಚಂದ ಗೆಲೋಟ, ಉನ್ನತ ಶಿಕ್ಷಣ ಸಚಿವರಾದ ಎಂ.ಸಿ. ಸುಧಾಕರ್, ಉಪಕುಲಪತಿಗಳು ಹಾಗೂ ಕುಲ ಸಚಿವರು ಉಪಸ್ಥಿತರಿದ್ದು ಪದವಿ ಪ್ರದಾನ ಮಾಡಿದರು.
ಈ ಸಾಧನೆಗೆ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿ ಬಳಗ ಹರ್ಷ ವ್ಯಕ್ತಪಡಿಸಿದ್ದು, ಸಂಗನಾಳ ಗ್ರಾಮಸ್ಥರು ಅಭಿನಂದನೆಗಳನ್ನು ಸಲ್ಲಿಸಿ ಶುಭಾಶಯ ಕೋರಿದ್ದಾರೆ.