Web Stories
Desha Dootha
ePaper
| LIVE |ಅಂತಾರಾಷ್ಟ್ರೀಯ|ರಾಷ್ಟ್ರೀಯ|ರಾಜ್ಯ |ಕಲ್ಯಾಣ ಕರ್ನಾಟಕ|ಕೊಪ್ಪಳ|ಯಲಬುರ್ಗಾ|ಕುಕನೂರು|ಕುಷ್ಟಗಿ|ಗಂಗಾವತಿ |ಕಾರಟಗಿ |ಕನಕಗಿರಿ| ಕೊಪ್ಪಳ ಸ್ಥಳೀಯ|ಸುತ್ತ-ಮುತ್ತ|Feature|ಪಾಲಿಟಿಕ್ಸ್|ಕ್ಷೇತ್ರವಾರು |
| LIVE |ಅಂತಾರಾಷ್ಟ್ರೀಯ|ರಾಷ್ಟ್ರೀಯ|ರಾಜ್ಯ |ಕಲ್ಯಾಣ ಕರ್ನಾಟಕ|ಕೊಪ್ಪಳ
ಯಲಬುರ್ಗಾಕುಕನೂರುಕುಷ್ಟಗಿಗಂಗಾವತಿ ಕಾರಟಗಿ ಕನಕಗಿರಿ ಕೊಪ್ಪಳ ಸ್ಥಳೀಯಸುತ್ತ-ಮುತ್ತFeatureಪಾಲಿಟಿಕ್ಸ್ಕ್ಷೇತ್ರವಾರುಲೇಖನ

2123 ರ ಪತ್ರಕ್ಕೆ ಸಹಿ ಹಾಕಿದ ರಾಯರಡ್ಡಿ..!

ಡಿ.ಡಿ. ನ್ಯೂಸ್ ಕೊಪ್ಪಳ

Advertisement

ಅಧಿಕೃತ ಪತ್ರದಲ್ಲಿ ಸಹಿ ಮಾಡಿದ ರಾಯಲ್ 

ಪದವಿ‌ ಪೂರ್ವ ಕಾಲೇಜಿನ‌ ಸಿಡಿಸಿ ಸಮಿತಿಗೆ ಶಿಫಾರಸು ಪತ್ರ

2123-24ನೇ ಶೈಕ್ಷಣಿಕ ವರ್ಷದ ಪತ್ರಕ್ಕೆ‌ ರುಜು

ಕೊಪ್ಪಳ: ಅಭಿವೃದ್ಧಿ ಹರಿಕಾರ ಹಾಗೂ ಶಿಕ್ಷಣದ ಬಗ್ಗೆ ಅಪಾರ ಕಾಳಜಿ ಹೊಂದಿದ ಹಾಗೂ ಕಾನೂನು ದಿವ್ಯ ಅನುಭವಿ ಎಂದು ಸ್ವಯಂ ಘೋಷಿಸಿತ ಯಲಬುರ್ಗಾ ಕ್ಷೇತ್ರದ ಶಾಸಕ ಬಸವರಾಜ ರಾಯರಡ್ಡಿ ಯವರು 2123 ರ ಪತ್ರಕ್ಕೆ ಸಹಿ ಹಾಕುವ ಮೂಲಕ ಸುದ್ದಿಯಲ್ಲಿದ್ದಾರೆ. 

ಹೌದು...! ನಾವು ಸದ್ಯ ಹೇಳಲು ಹೊರಟಿರುವ ಈ ಸುದ್ದಿಗೆ ಸಂಬಂಧಿಸಿದಂತೆ 2123 ನೇ ಇಸ್ವಿಯಲ್ಲಿ ಸುದ್ದಿಯನ್ನು ಬಿತ್ತರಿಸುತ್ತಿರುವ ಪತ್ರಿಕೆಯಾಗಲಿ ಅಥವಾ ಸುದ್ದಿಯನ್ನು ಓದುತ್ತಿರುವ ನೀವಾಗಲಿ ಈ ಭೂಮಿ ಮೇಲೆ‌ ಇರುವುದಿಲ್ಲ. ಆದರೂ ಸಹ ಯಲಬುರ್ಗಾ ಕ್ಷೇತ್ರದ ಹಿರಿಯ ಶಾಸಕ ದಿವ್ಯ ಅನುಭವಿ ಆದ ಬಸವರಾಜ ರಾಯರಡ್ಡಿ ಅವರು 2123-24ನೇ ಸಾಲಿ‌ನ ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿದ ಪತ್ರ ಒಂದಕ್ಕೆ ಸಹಿ ಹಾಕಿರುವುದು ಅಚ್ಚರಿಗೆ ಕಾರಣವಾಗಿದೆ. 

ಯಲಬುರ್ಗಾ ತಾಲೂಕಿನ ಚಿಕ್ಕಮ್ಯಾಗೇರಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ 2123-24ನೇ ಸಾಲಿ‌ನ ಶೈಕ್ಷಣಿಕ ವರ್ಷಕ್ಕೆ ಅನ್ವಯವಾಗುವಂತೆ ಈ ಸಂಸ್ಥೆಯ ಕಾಲೇಜು ಅಭಿವೃದ್ಧಿ ಸಮಿತಿಯನ್ನು ಕೆಳಗಿನಂತೆ‌ ರಚಿಸಲಾಗಿದೆ. ಸದ್ರಿ ಸಮಿತಿಯ ಎಸ್.ಬಿ ಖಾತೆಯನ್ನು ಉಪಾಧ್ಯಕ್ಷರ ಹಾಗೂ ಪ್ರಾಚಾರ್ಯರ ಹೆಸರಿನಲ್ಲಿ ನಿರ್ವಹಿಸುವುದು ಎಂದು ತಮ್ಮ ಅಧಿಕೃತ ಪತ್ರವನ್ನು ಕಾಲೇಜಿನ ಪ್ರಾಚಾರ್ಯರಿಗೆ ದಿನಾಂಕ:14-08-2123ರಂದು ಬರೆದಿರುವುದು ವಿಪರ್ಯಾಸವೇ ಸರಿ.

ಗೊಂದಲ: ಕಾಲೇಜು ಅಭಿವೃದ್ಧಿ ಸಮಿತಿಗೆ ಉಪಾಧ್ಯಕ್ಷರಾಗುವ ಭರದಲ್ಲಿ ಅಥವಾ ತಮಗಿಂತ ಮುಂಚೆ ಯಾರಾದರೂ ಅಹಿಂದ ಲೀಡರ್ ಗಳು ಪತ್ರವನ್ನು ತೆಗೆದುಕೊಂಡು ಹೋಗಿ ಕಾಲೇಜಿಗೆ ಕೊಟ್ಟು ಬಿಟ್ಟಾರು ಎಂಬ ತರಾತುರಿಯಲ್ಲಿ ಕಾಂಗ್ರೆಸ್ ನಲ್ಲಿ ಇತ್ತೀಚೆಗೆ ಗುರುತಿಸಿಕೊಂಡ ಚಿಕ್ಕಮ್ಯಾಗೇರಿ ಗ್ರಾಮದ ಹಂಪಯ್ಯಸ್ವಾಮಿ ಹಿರೇಮಠ ಅವರು ಕಾಲೇಜಿಗೆ ತಂದು ಕೊಟ್ಟಿರುವ ಪತ್ರ ಹಲವು ಗೊಂದಲಗಳನ್ನು ಸೃಷ್ಟಿಸಿದೆ.

ಕಣ್ಮುಚ್ಚಿ ಸಹಿ ಹಾಕಿದ್ರಾ ರಾಯರಡ್ಡಿ?: ಶಾಸಕ ಬಸವರಾಜ ರಾಯರಡ್ಡಿಯವರು ಯಾರಿಗೂ ಸಹ ಸುಖಾ ಸುಮ್ಮನೇ ಶಿಫಪಾರಸ್ಸು ಪತ್ರ ನೀಡುವುದಿಲ್ಲ ಎಂಬ ಬಲವಾದ ಆರೋಪವಿದೆ. ಇನ್ನೂ ಅವರ ಆಪ್ತ ವಲಯದಲ್ಲಿ ಹಾಗೂ ಒಂದನೇ ಹಂತದ ನಾಯಕರಿಗೆ ಮಾತ್ರ ವರ್ಗಾವಣೆ, ನೇಮಕಾತಿ ಸೇರಿದಂತೆ ಇನ್ನಿತರ ಶಿಫಾರಸ್ಸು ಪತ್ರ ನೀಡಿದರೂ ಸಹ ಅದರಲ್ಲಿ ನಿಯಮಾನುಸಾರ ಮಾಡಲು ಸೂಚಿಸಲಾಗಿದೆ ಎಂದು ಕೈ ಬರಹ ಬರೆದು ಸಹಿ ಹಾಕುತ್ತಾರೆ. ಆದರೆ, ತಮ್ಮ ಆಪ್ತ ವಲಯದಲ್ಲಿ ಗುರುತಿಸಿಕೊಂಡ ಹಂಪಯ್ಯಸ್ವಾಮಿ ಹಿರೇಮಠ ರಿಗೆ ನೀಡಿದ ಶಿಫಾರಸ್ಸು ಪತ್ರಕ್ಕೆ ಕಣ್ಣು ಮುಚ್ಚಿಕೊಂಡು ಸಹಿ ಹಾಕಿದ್ರಾ ರಾಯರಡ್ಡಿ ಎಂದು ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಯಾಗುತ್ತಿದೆ. news_1781084693_0_126.webpಯಾಕೆ ಹಂಪಯ್ಯಸ್ವಾಮಿ ಮೇಲೆ‌ ಇಷ್ಟೊಂದು ಒಲವು:

ಇತ್ತೀಚೆಗಷ್ಟೇ ಕಾಂಗ್ರೆಸ್ ವಲಯದಲ್ಲಿ ಗುರುತಿಸಿಕೊಂಡ ಚಿಕ್ಕಮ್ಯಾಗೇರಿ ಗ್ರಾಮದ ಗ್ರಾ.ಪಂ ಮಾಜಿ ಸದಸ್ಯ ಹಂಪಯ್ಯಸ್ವಾಮಿ ಹಿರೇಮಠ ರ ಮೇಲೆ‌ ರಾಯರಡ್ಡಿಗೆ ಎಲ್ಲಿಲ್ಲದ ಒಲವು ಇದೆ ಎಂದು ಹೇಳಲಾಗುತ್ತಿದೆ. ಅಥವಾ ಮೇಲ ವರ್ಗದವರು ಎಂಬ ಕಾರಣಕ್ಕೆ ರಾಯರಡ್ಡಿಯವರು ಹಂಪಯ್ಯಸ್ವಾಮಿ ಗೆ ಮೂರು-ಮೂರು ಹುದ್ದೆಯನ್ನು ನೀಡಿ, ಹಂಪಯ್ಯಸ್ವಾಮಿ ಯನ್ನು ಬೆಳೆಸಲಾಗುತ್ತಿದೆ ಎಂಬ ಆರೋಪಗಳು ಬಲವಾಗಿ ಕೇಳಿ ಬರುತ್ತಿವೆ. ಈ ವಿಷಯವಾಗಿ ಈಗಾಗಲೇ 'ದೇಶ ದೂತ' ಪತ್ರಿಕೆಯು ಸುದ್ದಿಯನ್ನು ಪ್ರಕಟಿಸಿರುವುದನ್ನು ಇಲ್ಲಿ ಸ್ಮರಿಸಬಹುದು.

ಅಹಿಂದ ನಾಯಕರ ಕಡೆಗಣನೆ: ಚಿಕ್ಕಮ್ಯಾಗೇರಿ ಗ್ರಾಮದ ಒಂದರಲ್ಲಿಯೇ ಅಹಿಂದ ವರ್ಗ ಬಹಳ ಬಲಿಷ್ಠವಾಗಿದೆ. ರಾಯರಡ್ಡಿಯವರ ಪ್ರತಿ ಚುನಾವಣೆಯಲ್ಲಿ ಅತೀ ಹೆಚ್ಚು ಬಹುಮತ ನೀಡುವ ಮೂಲಕ ಗೆಲುವಿಗೆ ಅಹಿಂದ ನಾಯಕರು ಕಾರಣವಾಗಿದ್ದಾರೆ. ರಾಯರಡ್ಡಿಯವರ ಪ್ರತಿ ಕಾರ್ಯಕ್ರಮ ಹಾಗೂ ಸಭೆ ಸಮಾರಂಭಗಳೂ ಸೇರಿದಂತೆ ಪ್ರತಿ ಮನೆಯ ಬಾಗಿಲಿಗೆ ಹೋಗಿ ರಾಯರಡ್ಡಿಯವರ ಸಾಧನೆಗಳನ್ನು ಹೇಳಿ, ಜನರನ್ನು ಸೇರಿಸುವಲ್ಲಿ ಅಹಿಂದ ವರ್ಗ ದುಡಿಯುತ್ತಿದೆ. ಆದರೆ, ಅಂತಹ ನಿಷ್ಠಾವಂತ ಕಾರ್ಯಕರ್ತರನ್ನ ಅಥವಾ ಅಭಿಮಾನಿಗಳನ್ನು ರಾಯರಡ್ಡಿಯವರು ಕಡೆಗಣಿಸಿ, ನಿನ್ನೆ-ಮೊನ್ನೆಯಷ್ಟೇ ಗುರುತಿಸಿಕೊಂಡ ಗ್ರಾ.ಪಂ ಮಾಜಿ ಸದಸ್ಯ ಹಂಪಯ್ಯಸ್ವಾಮಿಗೆ ಮೂರು ಮೂರು ಹುದ್ದೆ ನೀಡಿ, ಅಹಿಂದ ವರ್ಗ ಕಡೆಗಣಿಸಿದ ತಮ್ಮ ನಾಯಕ ರಾಯರಡ್ಡಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. 

ತಾವು 2023 ರಲ್ಲಿ ಶಾಸಕರಾದ ತಕ್ಷಣವೇ ಚಿಕ್ಕಮ್ಯಾಗೇರಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಿಡಿಸಿ ಗೆ ಉಪಾಧ್ಯಕ್ಷರನ್ನು ಶಿಫಾರಸ್ಸು ಮಾಡಲು 14-08-2023 ರಲ್ಲಿ ನೀಡಿದ ಪತ್ರವು ಮೂರು ವರ್ಷ ಕಳೆದ ಮೇಲೆ 2123-24 ನೇ ಶೈಕ್ಷಣಿಕ ವರ್ಷಕ್ಕೆ ನೀಡಿದ ಪತ್ರ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ. ಶಾಸಕರ ಹಿಂಬಾಲಕರಿಗೆ ಆಸೆ ಇರುವುದು ಸಹಜ. ಆದರೆ, ಹಂಪಯ್ಯಸ್ವಾಮಿ ಅವರು ಒಬ್ಬರೇ‌ ಮೂರು ಮೂರು ಹುದ್ದೆಯನ್ನು ಅಲಂಕರಿಸಿದ್ದರು ಸಹ ಇನ್ನೂ ಅಧಿಕಾರದ ದಾಹ ತೀರಿಲ್ಲವೆಂಬಂತೆ ಜಿಪಂ ವ್ಯಾಪ್ತಿಯಲ್ಲಿ ಕೈಗೊಂಡ ಪ್ರತಿ ಕಾಮಗಾರಿಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದರು ಮಾತ್ರ ರಾಯರೆಡ್ಡಿ ಅವರು ಚಕಾರ ಎತ್ತದೆ. ಸುಮ್ಮನೆ ಇರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ. ಚುನಾವಣೆ ಪೂರ್ವದಲ್ಲಿ ಬೇಕಾದ ಅಹಿಂದ ನಾಯಕರು ಅಧಿಕಾರಕ್ಕೆ ಮಾತ್ರ ತಾವು ರಾಯರೆಡ್ಡಿಯವರಿಗೆ ಬೇಡವಾಗಿದ್ದೀವಿ ಎಂದು ಅಸಮಧಾನ ಹೊರ ಹಾಕಿದ್ದಾರೆ. ನಾನೇನು ಮನೆಗೆ ಹುಡುಕಿಕೊಂಡು ಹೋಗಿ ಅವರಿಗೆ ಹುದ್ದೆ ನೀಡಲಿ ಎಂದು ಹೇಳುವ ರಾಯರೆಡ್ಡಿಗೆ ಮತ ಹಾಕಿಸುವಾಗ ಮಾತ್ರ ಅಹಿಂದ ನಾಯಕರು‌ ಬೇಕು. ರಾಯರೆಡ್ಡಿಯನ್ನು ಅಹಿಂದ ವರ್ಗದ ನಾಯಕರು ಮುಂದೆ‌ ಹೋಗಿ ಮಾತನಾಡಿಸಲು ಪ್ರಯತ್ನ ಪಟ್ಟರೇ ಹಂಪಯ್ಯಸ್ವಾಮಿ ಯವರು ಸಾಹೇಬರು ಬ್ಯೂಸಿ ಇದ್ದಾರೆ. ಏನೇ ಇದ್ದರೂ ನನ್ನ ಮುಂದೆ ತಿಳಿಸಿ, ನಾನು ಸಾಹೇಬರಿಗೆ ಹೇಳಿ ಬಗೆಹರಿಸುತ್ತೇನೆಂದು ಅಹಿಂದ ನಾಯಕರನ್ನು ಕಡೆಗಣಿಸುವಲ್ಲಿ ರಾಯರೆಡ್ಡಿಯವರು ಮುಂಚೂಣಿಯಲ್ಲಿದ್ದಾರೆ ಎಂದು ಹೆಸರು ಹೇಳಲು ಇಚ್ಛೆಯಿಸದ ಅಹಿಂದ ನಾಯಕ‌ ಪತ್ರಿಕೆಯೊಂದಿಗೆ ತಮ್ಮ ಅಳಲನ್ನು ತೋಡಿಕೊಂಡಿದ್ದಾನೆ.‌

Author
Desha Dootha
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪತ್ರಿಕಾ ದಿನಾಚರಣೆ, ಜಿಲ್ಲಾ ಪತ್ರಕರ್ತರ ಸಮಾವೇಶದ ಭಿತ್ತಿಪತ್ರ ಬಿಡುಗಡೆಪ್ರಕಾಶ್ ಹಳ್ಳಿಗುಡಿ ಅವರಿಗೆ ಎಚ್ ಡಿ ಪದವಿ: ಹರ್ಷಹಿರೇಮನ್ನಾಪೂರದಲ್ಲಿ ಶನಿವಾರ ಆರಂಭವಾದ ೧೪ನೇ ಕೊಪ್ಪಳ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಲೇಖಕ ಕಿಶನರಾವ್ ಕುಲಕರ್ಣಿ ಸಮಕಾಲಿನ ಸವಾಲುಗಳು ವಿಷಯವಾಗಿ ಮಾತನಾಡಿದರು.ಊರು ಕೊಳ್ಳೆ ಹೊಡೆದ ನಂತರ, ಕೋಟೆ ಬಾಗಿಲು ಹಾಕಿದರೇನಂತೆ?ಹಣಕ್ಕಿಂತ ಜ್ಞಾನ ಸಂಪತ್ತು ಬಹಳ ಮುಖ್ಯ: ಡಾ. ಮಹಾದೇವ ದೇವರುVB-G RAM G ಯೋಜನೆಯ ಅನುಷ್ಠಾನಿಸುವ ಕುರಿತು ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ತರಬೇತಿಶಾಸಕ ಬಸವರಾಜ ರಾಯರಡ್ಡಿ ಬಂದರು ದಾರಿ ಬಿಡಿ ಪ್ಲೀಸ್..!ಯಲಬುರ್ಗಾ ದಲ್ಲಿ ಇಡ್ಲಿ ದೋಸೆ ಸಿಗವಲ್ಲವಂತೆ...!ರಾಯರಡ್ಡಿಯ ಗೌರವವನ್ನು ನಿರಾಕರಿಸಿದ ಸಿಎಂ ಡಿಕೆಶಿಭಾನಾಪುರದಲ್ಲಿ ಭೀಕರ ರಸ್ತೆ ದುರಂತ: ಡಿವೈಡರ್ ದಾಟಿ ಬಂದ ಲಾರಿ ಡಿಕ್ಕಿ, ಮೃತರ ಸಂಖ್ಯೆ ಐದಕ್ಕೆ ಏರಿಕೆ!