Web Stories
Desha Dootha
ePaper
| LIVE |ಅಂತಾರಾಷ್ಟ್ರೀಯ|ರಾಷ್ಟ್ರೀಯ|ರಾಜ್ಯ |ಕಲ್ಯಾಣ ಕರ್ನಾಟಕ|ಕೊಪ್ಪಳ|ಯಲಬುರ್ಗಾ|ಕುಕನೂರು|ಕುಷ್ಟಗಿ|ಗಂಗಾವತಿ |ಕಾರಟಗಿ |ಕನಕಗಿರಿ| ಕೊಪ್ಪಳ ಸ್ಥಳೀಯ|ಸುತ್ತ-ಮುತ್ತ|Feature|ಪಾಲಿಟಿಕ್ಸ್|ಕ್ಷೇತ್ರವಾರು |
| LIVE |ಅಂತಾರಾಷ್ಟ್ರೀಯ|ರಾಷ್ಟ್ರೀಯ|ರಾಜ್ಯ |ಕಲ್ಯಾಣ ಕರ್ನಾಟಕ|ಕೊಪ್ಪಳ
ಯಲಬುರ್ಗಾಕುಕನೂರುಕುಷ್ಟಗಿಗಂಗಾವತಿ ಕಾರಟಗಿ ಕನಕಗಿರಿ ಕೊಪ್ಪಳ ಸ್ಥಳೀಯಸುತ್ತ-ಮುತ್ತFeatureಪಾಲಿಟಿಕ್ಸ್ಕ್ಷೇತ್ರವಾರುಲೇಖನ

ಮುಂದುವರೆದ ಸಮಾಜದವರಿಗೆ ರಾಯರೆಡ್ಡಿ ಮನ್ನಣೆ.

ಡಿ.ಡಿ. ನ್ಯೂಸ್ : ಯಲಬುರ್ಗಾ

Advertisement

ಒಬ್ಬಬ್ಬರಿಗೆ ಎರಡೆರಡು ಹುದ್ದೆಗಳು.

ಅಹಿಂದ ನಾಯಕರ ಕಡೆಗಣನೆ.

ಯಲಬುರ್ಗಾ ವಿಧಾನ ಸಭಾ ಕ್ಷೇತ್ರದಲ್ಲಿ ಕೇವಲ 5-6 ಸಾವಿರ ಮತಗಳಿರುವ ಮುಂದುವರೆದ ಸಮಾಜದ ವರಿಗೆ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಮನ್ನಣೆ ನೀಡುತ್ತಿದ್ದಾರೆ.news_1780070870_0_578.webpವಿಧಾನ ಸಭಾ ಕ್ಷೇತ್ರದಲ್ಲಿ ಬಹು ಸಂಖ್ಯಾತ ಮತಗಳನ್ನು ಹೊಂದಿದ ಸಮಾಜದವರನ್ನು ಕಡೆಗಣಿಸಿ ಮುಂದುವರೆದ ಬ್ರಾಹ್ಮಣ ಹಾಗೂ ಲಿಂಗಾಯತ (ಜಂಗಮ) ಸಮಾಜದವರಿಗೆ ಓರ್ವರಿಗೆ ಎರಡೇರಡು ಹುದ್ದೆ ನೀಡುವ ಮೂಲಕ ಪಂಚಮಸಾಲಿ, ಕುರುಬ, ಗಾಣಿಗ, ಅಲ್ಪಸಂಖ್ಯಾತ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇನ್ನಿತರ ಸಮಾಜದ ವರನ್ನು ರಾಯರೆಡ್ಡಿ ಕ್ಯಾರೆ ಎನ್ನದೇ ತಮ್ಮನ್ನು ಕಡೆಗಣಿಸಿದ್ದಾರೆಂಬ ಮಾತುಗಳು ಕಾಂಗ್ರೆಸ್ ಹಿರಿಯ ಕಾರ್ಯಕರ್ತರಿಂದ ಕೇಳಿ ಬರುತ್ತಿವೆ. 

ಓರ್ವರಿಗೇಕೆ ಎರಡೆರಡು ಹುದ್ದೆಗಳು

ಕಳೆದ ಎರಡ್ಮೂರು ದಶಕಗಳಿಂದ ರಾಯರೆಡ್ಡಿ ಯವರ ಜೊತೆಗೆ ಗುರುತಿಸಿಕೊಂಡು ರಾಯರೆಡ್ಡಿಯವರ ಗೆಲುವಿಗೆ ಸತತ ಪ್ರಯತ್ನದಲ್ಲಿರುವ ಪಂಚಮ ಸಾಲಿ, ಕುರುಬ, ಗಾಣಿಗ, ಅಲ್ಪಸಂಖ್ಯಾತ ಸೇರಿದಂತೆ ಇನ್ನಿತರ ಸಮಾಜದ ಮುಖಂಡರನ್ನು ಕಡೆಗಣಿಸಿದ ರಾಯ ರೆಡ್ಡಿ ಅವರು ಇತ್ತೀಚೆಗಷ್ಟೇ ಗುರುತಿಸಿಕೊಂಡ ಬ್ರಾಹ್ಮಣ ಸಮಾಜದ ಸುಧೀರ ಕೊರ್ಲಳ್ಳಿ ಯವರಿಗೆ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ಹಾಗೂ ಯಲಬುರ್ಗಾ ಪಟ್ಟಣದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಿಡಿಸಿ(ಕಾಲೇಜು ಅಭಿವೃದ್ಧಿ ಸಮಿತಿ) ಉಪಾಧ್ಯಕ್ಷ (ಅಧ್ಯಕ್ಷ) ಸ್ಥಾನ ವನ್ನು ನೀಡಿದ್ದಾರೆ.news_1780070983_0_595.webpಇನ್ನೂ ಕಾಂಗ್ರೆಸ್ ವಲಯದಲ್ಲಿ ಇತ್ತೀಚೆಗಷ್ಟೇ ಗುರುತಿಸಿಕೊಂಡ ಚಿಕ್ಕಮ್ಯಾಗೇರಿ ಗ್ರಾಮದ ಹಂಪಯ್ಯಸ್ವಾಮಿ ಹಿರೇಮಠ ಗೆ ಕೆಎಂಎಫ್ ನಾಮ ನಿರ್ದೇಶಕರಾಗಿ ಮತ್ತು ಚಿಕ್ಕಮ್ಯಾಗೇರಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಿಡಿಸಿ(ಕಾಲೇಜು ಅಭಿವೃದ್ಧಿ ಸಮಿತಿ) ಉಪಾಧ್ಯಕ್ಷ (ಅಧ್ಯಕ್ಷ) ಸ್ಥಾನವನ್ನು ನೀಡಿರುವುದು ಮತ್ತು ಬ್ರಾಹ್ಮಣ ಸಮಾಜದ ಅಪ್ಪಣ್ಣ ಜೋಶಿಗೆ ರಾಯಲ್ ಯೂಥ್ ಅಧ್ಯಕ್ಷ ಸ್ಥಾನ ನೀಡಿರುವುದು ಹಿರಿಯ ಕಾರ್ಯಕರ್ತರ, ಯುವ ಕಾಂಗ್ರೆಸಿಗರ ಅಸಮಾಧಾನಕ್ಕೆ ಕಾರಣವಾಗಿದೆ. news_1780073277_0_590.webp

ಲಾಭದಾಯಕ ಹುದ್ದೆಗಳು ಅಹಿಂದ ವರ್ಗಕ್ಕಿಲ್ಲ ಏಕೆ.?

ಪ್ರತಿ ಚುನಾವಣೆಯಲ್ಲಿ ಅಹಿಂದ ನಾಯಕ ಸಿಎಂ ಸಿದ್ದರಾಮಯ್ಯ ಅವರ ಹೆಸರು ಹೇಳಿಕೊಂಡು ಅಹಿಂದ ಮತ ಪಡೆಯುವ ಬಸವರಾಜ ರಾಯರೆಡ್ಡಿ ಮಾತ್ರ 

ಲಾಭದಾಯಕ ಹಾಗೂ ಗೌರವ ಧನ ಇರುವ ಹುದ್ದೆಗಳನ್ನು ಅಹಿಂದ ಸಮಾಜದವರಿಗೆ ನೀಡುತ್ತಿಲ್ಲ. ಬದಲಾಗಿ ಕೇವಲ 5-6 ಸಾವಿರ ಮತಗಳಿರುವ ಬ್ರಾಹ್ಮಣ-ಲಿಂಗಾಯತ (ಜಂಗಮ) ಸಮಾಜದವರಿಗೆ ಲಾಭದಾಯಕ ಹುದ್ದೆಯನ್ನು ನೀಡಿದ್ದಾರೆ. 75-80 ಸಾವಿರ ಮತಗಳನ್ನು ಹೊಂದಿರುವ ಅಹಿಂದ ವರ್ಗದವರಿಗೆ ಲಾಭದಾಯಕ ಮತ್ತು ಗೌರವ ಧನ ಇರುವ ಹುದ್ದೆಗಳನ್ನು ನೀಡಿದಲ್ಲಿ ಅವರು ಆರ್ಥಿಕವಾಗಿ ಸಬಲರಾಗಿ ಮುಂದೊಂದು ದಿನ ದೊಡ್ಡ ಹುದ್ದೆ ಕೇಳುತ್ತಾರೆಂಬ ಮನೋಭಾವ ರಾಯರೆಡ್ಡಿಯವರದ್ದಾಗಿದೆ. ಅದೇ ಕಾರಣಕ್ಕೆ ಕ್ಷೇತ್ರದಲ್ಲಿ ಅತೀ ಹೆಚ್ಚು ಮತಗಳನ್ನು ಹೊಂದಿರುವ ನಾಯಕರನ್ನು ಮೂಲೆಗುಂಪು ಮಾಡುವ ರಾಯರೆಡ್ಡಿಯವರ ಹುನ್ನಾರು ಹೊಸದೇನಲ್ಲ. 

ಮೂಲೆ ಗುಂಪಾದ ನಾಯಕರು..? 

ಬಸವರಾಜ ರಾಯರೆಡ್ಡಿ ಕಳೆದ 2023 ರ ವಿಧಾನ ಸಭಾ ಚುನಾವಣೆಯಲ್ಲಿ ಈ ಶಾಸಕರಾಗಲು ಪ್ರಮುಖ ಪಾತ್ರ ವಹಿಸಿದ ಜಿಪಂ ಮಾಜಿ ಸದಸ್ಯ ಈರಪ್ಪ ಕುಡಗುಂಟಿ, ಕುರುಬ ಸಮಾಜದ ವೀರನಗೌಡ ಬಳೂಟಗಿ, ಅವರ ಪುತ್ರ ಅಂದಾನಗೌಡ ಬಳೂಟಗಿ, ಹಾಗೂ ಬೇವೂರಿನ ಗಾಣಿಗ ಸಮಾಜದ ದಿ. ಭೀಮಶೆಪ್ಪ ಹಳ್ಳಿ ಕುಟುಂಬದವರು ಸೇರಿದಂತೆ ಇನ್ನೂ ಕೆಲವರಿಗೆ ಯಾವುದೇ ಹುದ್ದೆ ಅಥವಾ ಸ್ಥಾನಮಾನಗಳನ್ನು ನೀಡದೇ ಮೂಲೆ ಗುಂಪು ಮಾಡಿದ್ದಾರೆ ಎಂದು ಹೇಳಿದರು ತಪ್ಪಾಗಲ್ಲ.

 

Author
Desha Dootha
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪತ್ರಿಕಾ ದಿನಾಚರಣೆ, ಜಿಲ್ಲಾ ಪತ್ರಕರ್ತರ ಸಮಾವೇಶದ ಭಿತ್ತಿಪತ್ರ ಬಿಡುಗಡೆಪ್ರಕಾಶ್ ಹಳ್ಳಿಗುಡಿ ಅವರಿಗೆ ಎಚ್ ಡಿ ಪದವಿ: ಹರ್ಷಹಿರೇಮನ್ನಾಪೂರದಲ್ಲಿ ಶನಿವಾರ ಆರಂಭವಾದ ೧೪ನೇ ಕೊಪ್ಪಳ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಲೇಖಕ ಕಿಶನರಾವ್ ಕುಲಕರ್ಣಿ ಸಮಕಾಲಿನ ಸವಾಲುಗಳು ವಿಷಯವಾಗಿ ಮಾತನಾಡಿದರು.ಊರು ಕೊಳ್ಳೆ ಹೊಡೆದ ನಂತರ, ಕೋಟೆ ಬಾಗಿಲು ಹಾಕಿದರೇನಂತೆ?ಹಣಕ್ಕಿಂತ ಜ್ಞಾನ ಸಂಪತ್ತು ಬಹಳ ಮುಖ್ಯ: ಡಾ. ಮಹಾದೇವ ದೇವರುVB-G RAM G ಯೋಜನೆಯ ಅನುಷ್ಠಾನಿಸುವ ಕುರಿತು ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ತರಬೇತಿಶಾಸಕ ಬಸವರಾಜ ರಾಯರಡ್ಡಿ ಬಂದರು ದಾರಿ ಬಿಡಿ ಪ್ಲೀಸ್..!ಯಲಬುರ್ಗಾ ದಲ್ಲಿ ಇಡ್ಲಿ ದೋಸೆ ಸಿಗವಲ್ಲವಂತೆ...!ರಾಯರಡ್ಡಿಯ ಗೌರವವನ್ನು ನಿರಾಕರಿಸಿದ ಸಿಎಂ ಡಿಕೆಶಿಭಾನಾಪುರದಲ್ಲಿ ಭೀಕರ ರಸ್ತೆ ದುರಂತ: ಡಿವೈಡರ್ ದಾಟಿ ಬಂದ ಲಾರಿ ಡಿಕ್ಕಿ, ಮೃತರ ಸಂಖ್ಯೆ ಐದಕ್ಕೆ ಏರಿಕೆ!