Web Stories
Desha Dootha
ePaper
| LIVE |ಅಂತಾರಾಷ್ಟ್ರೀಯ|ರಾಷ್ಟ್ರೀಯ|ರಾಜ್ಯ |ಕಲ್ಯಾಣ ಕರ್ನಾಟಕ|ಕೊಪ್ಪಳ|ಯಲಬುರ್ಗಾ|ಕುಕನೂರು|ಕುಷ್ಟಗಿ|ಗಂಗಾವತಿ |ಕಾರಟಗಿ |ಕನಕಗಿರಿ| ಕೊಪ್ಪಳ ಸ್ಥಳೀಯ|ಸುತ್ತ-ಮುತ್ತ|Feature|ಪಾಲಿಟಿಕ್ಸ್|ಕ್ಷೇತ್ರವಾರು |
| LIVE |ಅಂತಾರಾಷ್ಟ್ರೀಯ|ರಾಷ್ಟ್ರೀಯ|ರಾಜ್ಯ |ಕಲ್ಯಾಣ ಕರ್ನಾಟಕ|ಕೊಪ್ಪಳ
ಯಲಬುರ್ಗಾಕುಕನೂರುಕುಷ್ಟಗಿಗಂಗಾವತಿ ಕಾರಟಗಿ ಕನಕಗಿರಿ ಕೊಪ್ಪಳ ಸ್ಥಳೀಯಸುತ್ತ-ಮುತ್ತFeatureಪಾಲಿಟಿಕ್ಸ್ಕ್ಷೇತ್ರವಾರುಲೇಖನ

ಶಾಸಕರ ಸ್ವ ಗ್ರಾಮಕ್ಕೆ ಮಣೆ ಹಾಕಿದ ವಿಮಾ ಕಂಪನಿ,ಅಧಿಕಾರಿಗಳು..!

ಡಿ.ಡಿ.ನ್ಯೂಸ್ ಯಲಬುರ್ಗಾ

Advertisement

ತಳಕಲ್‌ ಗ್ರಾಮವನ್ನು ಮಾತ್ರ ಲೆಕ್ಕಕ್ಕೆ ತೆಗೆದುಕೊಂಡ  ಕೃಷಿ ನಿರ್ದೇಶಕ

ಯಲಬುರ್ಗಾ ಪಟ್ಟಣ ಸೇರಿ ಇನ್ನಿತರ ಗ್ರಾಮಗಳಿಗೆ ಬಾರದ ಬೆಳೆ ವಿಮೆ. 

ಶಾಟ್ ಫಾಲ್ ವರದಿಯಿಂದ ಅಧಿಕಾರಿಗಳ ಎಡವಟ್ಟು ಬಯಲು

ಯಲಬುರ್ಗಾ: ಕ್ಷೇತ್ರದಲ್ಲಿ ಅಪಾರ ಪ್ರಮಾಣ ಹಾನಿ ಸಂಭವಿಸಿದರು ಸಹ, ಕೇವಲ ತಳಕಲ್ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕೈಗೊಂಡ ಬೆಳೆ ಕಟಾವು ಸಮೀಕ್ಷೆ (ಸಿಸಿಇ)ಯಲ್ಲಿ ಹೆಚ್ಚು ನಷ್ಟ ತೋರಿಸುವ ಮೂಲಕ ವಿಮಾ ಕಂಪನಿಯವರು,ಅಧಿಕಾರಿಗಳು ಶಾಸಕ ಬಸವರಾಜ ರಾಯರೆಡ್ಡಿ ಯವರ ಸ್ವ ಗ್ರಾಮಕ್ಕೆ ಮಣೆ ಹಾಕಿರುವುದು ಬೆಳಕಿಗೆ ಬಂದಿದೆ. 

ಹೌದು...! ಕ್ಷೇತ್ರಾದ್ಯಂತ ಕಳೆದ 2025 ಸೆಪ್ಟೆಂಬರ್-ಅಕ್ಟೋಬರ್  ನಲ್ಲಿ ಅತ್ಯಧಿಕ ಮಳೆಯಾಗಿ ಅಪಾರ ಪ್ರಮಾಣ ನಷ್ಟ ಅನುಭವಿಸಿದ ಕ್ಷೇತ್ರದ ಅನ್ನದಾತರಿಗೆ ಸಮ ಪ್ರಮಾಣದಲ್ಲಿ ಬೆಳೆ ವಿಮೆ ಬರುವಂತೆ ನೋಡಿಕೊಳ್ಳುವುದನ್ನು ಬಿಟ್ಟು ಕ್ಷೇತ್ರದ ಶಾಸಕ ಬಸವರಾಜ ರಾಯರೆಡ್ಡಿ ಯವರ ಸ್ವ ಗ್ರಾಮ ತಳಕಲ್‌ಗೆ ಶಾಸಕರ ಹಿಂಬಾಲಕರಿಗೆ ನೆರವಾಗಲು  ಶೇ.85.54 ನಷ್ಟ ತೋರಿಸುವ ಮೂಲಕ ಕ್ಷೇತ್ರದ ಅರ್ಹ ಅನ್ನದಾತರಿಗೆ ಸಹಾಯಕ ಕೃಷಿ ನಿರ್ದೇಶಕ ಪ್ರಮೋದ ತುಂಬಳ, ವಿಮಾ ಕಂಪನಿಯವರಯ ವಂಚಿಸಿದ್ದಾರೆ. 

ನಿಯಮ ಉಲ್ಲಂಘನೆ: 2025-26ನೇ ಸಾಲಿನ ಮುಂಗಾರು ಹಂಗಾಮೀನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ /ಬಿಮಾ (ವಿಮಾ) ಯೋಜನೆ ಅಡಿಯಲ್ಲಿ ಬೆಳೆ ಕಟಾವು ಪ್ರಯೋಗಗಳ ಯೋಜನಾ ಪಟ್ಟಿಯನ್ನು ಮಾನ್ಯ ಜಿಲ್ಲಾಧಿಕಾರಿಗಳು ಈಗಾಗಲೇ ಬಿಡುಗಡೆಗೊಳಿಸಿ, ಸುತ್ತೋಲೆಯನ್ನು ಹೊರಡಿಸಲಾಗಿರುತ್ತದೆ. ಸದರಿ ಸುತ್ತೋಲೆಯಲ್ಲಿ ಯಾವುದೇ ಕಾರಣಕ್ಕೋ ಪ್ರಯೋಗಗಳು ನಷ್ಟಗೊಳ್ಳದಂತೆ ಬೆಳೆ ಕಟಾವು ಪ್ರಯೋಗಗಳನ್ನು ನಿಯಾಮಾನುಸಾರ ಕೈಗೊಳ್ಳುವಂತೆ ಪ್ರತಿ ಪ್ರಯೋಗಕ್ಕೆ ಕಡ್ಡಾಯವಾಗಿ 1+4 ಸರ್ವೇ ನಂಬರ ಸೇರ್ಪಡೆ ಮಾಡುವಂತೆ ಹಾಗೂ ಇಳುವರಿಯನ್ನು ಸರಿಯಾಗಿ ದಾಖಲಿಸುವಂತೆ ಮೂಲ ಕಾರ್ಯಕರ್ತರಿಗೆ ಈಗಾಗಲೇ ತರಬೇತಿಯಲ್ಲಿ ತಿಳಿಸಲಾಗಿದ್ದರೂ ಸಹ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ, ಕ್ಷೇತ್ರದ ಎಲ್ಲಾ ಗ್ರಾಮಗಳನ್ನು ಬಿಟ್ಟು ಕೇವಲ ತಳಕಲ್ ಗ್ರಾಮದಲ್ಲಿ ಕೈಗೊಂಡ ಸಿಸಿಇ  ಪ್ರಯೋಗ ಗಳಲ್ಲಿ ಭಾಗಿಯಾಗಿ, ನಿಯಮ ಉಲ್ಲಂಘಿಸಿದ್ದಾರೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. news_1780584010_0_811.webpಸಬೂಬ: ಕ್ಷೇತ್ರಾದ್ಯಂತ ಬೆಳೆ ವಿಮೆಗೆ ಸಂಬಂಧಿಸಿದಂತೆ ಒಂದಲ್ಲಾ ಒಂದು ಅವಾಂತರ ಸೃಷ್ಟಿಯಾಗುತ್ತಿವೆ. ಆದರೆ, ಇದಕ್ಕೆ ಸಂಬಂಧ ಪಟ್ಟ ಹಾಗೇ ರೈತರ ಮುಖಂಡರು, ಮಾಧ್ಯಮ ದವರು ಕೇಳಿದಲ್ಲಿ ತಮಗೂ ಬೆಳೆ ವಿಮೆಗೆ ಯಾವುದೇ ಸಂಬಂಧವಿರುವುದಿಲ್ಲವೆಂದು ಸಹಾಯಕ ಕೃಷಿ ನಿರ್ದೇಶಕ ಇಲ್ಲ ಸಲ್ಲಸ ಸಬೂಬ ನೀಡಲು ಮುಂದಾಗಿದ್ದಾರೆ. ಆದರೆ, ತಾವೇ ಸ್ವತಃ ಸಿಸಿಇ ಯಲ್ಲಿ ಭಾಗವಹಿಸಿರುವುದನ್ನು ನೋಡಿದರೇ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಅನುಮಾನಕ್ಕೆ ಕಾರಣವಾದ ಶೇಕಡಾವಾರು.

ಮೆಕ್ಕೆಜೋಳ ಬೆಳೆ

ಯಲಬುರ್ಗಾ -16.07 
ಮಾಟಲದಿನ್ನಿ -66.08
ಗುನ್ನಾಳ     -21.91
ಚಿಕ್ಕಮ್ಯಾಗೇರಿ -16.18
ಬೇವೂರು   -121.34. 
ಗಾಣದಾಳ  -27.71 
ಹಿರೇವಂಕಲಕುಂಟಾ -36.92
ಮಸಬಹಂಚಿನಾಳ -26.53

ಹೆಸರು ಬೆಳೆ.

ಯಲಬುರ್ಗಾ -8.87
ವಣಗೇರಿ    -12.14
ಚಿಕ್ಕಮ್ಯಾಗೇರಿ -4.23
ಬೇವೂರು   -9.81
ಗೆದಗೇರಿ    -10-87 

ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ಅತೀ ಹೆಚ್ಚು ತೂಕು ತೋರಿಸುವ ಮೂಲಕ ಶಾಟ್ ಫಾಲ್ ನ ವರದಿಯಿಂದಾಗಿ ಅರ್ಹ ಅನ್ನದಾತರಿಗೆ ವಿಮೆ ಬಾರದಂತಾಗಿದೆ‌.

ಮೆಕ್ಕೆಜೋಳ ಬೆಳೆ

ತಳಕಲ್ +85.54
ರಾಜೂರು +66.02
ಬಂಡಿ    +59.46
ಮುಧೋಳ +34.31
ಮುರಡಿ  +64.01
ವಜ್ರಬಂಡಿ +45.83
ಸಂಕನೂರ  +38.71 

ಸೇರಿ ಇನ್ನಿತರ ಗ್ರಾಮಗಳಲ್ಲಿ ಕಡಿಮೆ‌ ತೂಕ ತೋರಿಸಿ, ಅಧಿಕ ಬೆಳೆ ವಿಮೆ ಪಾವತಿಗೆ ವಿಮಾ ಕಂಪನಿಯವರು ಹಾಗೂ ಅಧಿಕಾರಿಗಳೇ ಕಾರಣವಾಗಿದ್ದಾರೆ. news_1780584036_0_847.webpಕಳೆದ ಐದು ವರ್ಷದ ಬೆಳೆ ಕಟಾವು ಸಮೀಕ್ಷೆ (ಸಿಸಿಇ)ಯ ಶಾಟ್ ಫಾಲ್ ವರದಿಯನ್ನು ಗಮನಿಸಿದರೇ ಕ್ಷೇತ್ರದಲ್ಲಿಯೇ ಇಷ್ಟೊಂದು ಅಧಿಕ ಪ್ರತಿಶತ ಬಂದಿಲ್ಲ. ತಳಕಲ್ ಗ್ರಾಮದಲ್ಲಿ ಕೈಗೊಂಡ ಸಿಸಿಇ ಗೆ ಖುದ್ದು ಸಹಾಯಕ ಕೃಷಿ ನಿರ್ದೇಶಕ ಪ್ರಮೋದ ತುಂಬಳ ಹಾಗೂ ಎಒ ಸಿದ್ದರಾಮರೆಡ್ಡಿ ಭೇಟಿ ನೀಡಿರುವುದು ಮತ್ತಷ್ಟು ಅನುಮಾನಕ್ಕೆ ಕಾರಣವಾಗಿದೆ. ಗ್ರಾ.ಪಂ ಮಟ್ಟದ ಸಿಸಿಇ ಗೆ ಈ ಇಬ್ಬರೂ ಅಧಿಕಾರಿಗಳು ಭೇಟಿ ನೀಡುವ ಅವಶ್ಯಕತೆ ಇರುವುದಿಲ್ಲ ಎನ್ನುವುದು ಇಲಾಖೆಯ ಮೇಲಧಿಕಾರಿಗಳ ಮನದಾಳದ ಮಾತು. ಆದಾಗ್ಯೂ ಸಹ ಕ್ಷೇತ್ರದ ಯಲಬುರ್ಗಾ ಪಟ್ಟಣ ಸೇರಿ ಎಲ್ಲಿಯೂ ಸಿಸಿಇ ಗಳಿಗೆ ಭೇಟಿ ನೀಡದ ಕೃಷಿ ಇಲಾಖೆಯ ಅಧಿಕಾರಿಗಳು ಕೇವಲ ತಳಕಲ್ ಗ್ರಾಮದಲ್ಲಿ ಕೈಗೊಂಡ ಸಿಸಿಇ ಯಲ್ಲಿ ಭಾಗಿಯಾಗಿ ಅತೀ ಹೆಚ್ಚು ಅಂದರೆ +85.54 ರಷ್ಟು ನಷ್ಟ(ಹಾನಿ) ತೋರಿಸಿ ಇನ್ನೂಳಿದ ಗ್ರಾಮಗಳ ಅನ್ನದಾತರಿಗೆ ವಿಮಾ ಕಂಪನಿಯವರ ಜೊತೆ ಸೇರಿ ಅಧಿಕಾರಿಗಳೇ ಪಂಗನಾಮ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.

*'ಸಿಸಿಇ ಬಗ್ಗೆ ಈವರೆಗೂ ಅಧಿಕೃತ ಯಾವುದೇ ದೂರು ಬಂದಿಲ್ಲ. ಒಂದು ವೇಳೆ ದೂರು ಬಂದಲ್ಲಿ ಪರಿಶೀಲಿಸಿ, ಕ್ರಮ ಜರುಗಿಸಲಾಗುವುದು. 

| ಸುರೇಶ ಬಿ. ಇಟ್ನಾಳ, ಜಿಲ್ಲಾಧಿಕಾರಿಗಳು. 

ಸಿಸಿಇ ಯಲ್ಲಿನ ಲೋಪದೋಷಗಳನ್ನು ಪಟ್ಟಿ ಮಾಡಿ, ಸಂಬಂಧಿಸಿದ ಅಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ. ಈ ಬಗ್ಗೆ ಕೃಷಿ ನಿರ್ದೇಶಕರನ್ನ ಕೇಳಿದರೇ ತಮಗೂ ಬೆಳೆ ವಿಮೆಗೆ ಯಾವುದೇ ಸಂಬಂಧವಿಲ್ಲ ಎಂದು ಹೇಳುತ್ತಾರೆ. ಆಗಿದ್ದರೇ, ಕೃಷಿ ನಿರ್ದೇಶಕ ಪ್ರಮೋದ ಹಾಗೂ ಕೃಷಿ ಅಧಿಕಾರಿ ಸಿದ್ದರಾಮರೆಡ್ಡಿ ಅವರು ಯಾಕೆ ಬೆಳೆ ಕಟಾವು ಸಮೀಕ್ಷೆ ಯಲ್ಲಿ ಪಾಲ್ಗೊಂಡರು. ಕಳೆದ ಬಾರಿ ಹತ್ತಿ ನೀರಾವರಿ ಹಾಗೂ ಈ ಬಾರಿ ಮೆಕ್ಕೆಜೋಳ ದ ಫಸಲಿನಲ್ಲಿ ಅತೀ ನಷ್ಟವನ್ನು ತೋರಿಸುವ ಮೂಲಕ ತಳಕಲ್ ಗ್ರಾಮಕ್ಕೆ ಮಾತ್ರ ಹೆಚ್ಚು ಬೆಳೆ ವಿಮೆ‌ ಪಾವತಿಯಾಗುವಂತೆ ಮಾಡಿ, ಉಳಿದ ಅನ್ನದಾತರಿಗೆ ಕೃಷಿ ಇಲಾಖೆಯ ಅನ್ಯಾಯ ಮಾಡಿದೆ. ಅನ್ನದಾತರಿಗೆ ಅನ್ಯಾಯ ಮಾಡಿದ ವಿಮಾ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಬೇಕು. ಈ ಬಗ್ಗೆ ಲೋಕಾಯುಕ್ತರಿಗೆ ದೂರು ನೀಡಲಾಗುವುದು. | ಶರಣಕುಮಾರ್, ಹೋರಾಟಗಾರ. 

Author
Desha Dootha
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪತ್ರಿಕಾ ದಿನಾಚರಣೆ, ಜಿಲ್ಲಾ ಪತ್ರಕರ್ತರ ಸಮಾವೇಶದ ಭಿತ್ತಿಪತ್ರ ಬಿಡುಗಡೆಪ್ರಕಾಶ್ ಹಳ್ಳಿಗುಡಿ ಅವರಿಗೆ ಎಚ್ ಡಿ ಪದವಿ: ಹರ್ಷಹಿರೇಮನ್ನಾಪೂರದಲ್ಲಿ ಶನಿವಾರ ಆರಂಭವಾದ ೧೪ನೇ ಕೊಪ್ಪಳ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಲೇಖಕ ಕಿಶನರಾವ್ ಕುಲಕರ್ಣಿ ಸಮಕಾಲಿನ ಸವಾಲುಗಳು ವಿಷಯವಾಗಿ ಮಾತನಾಡಿದರು.ಊರು ಕೊಳ್ಳೆ ಹೊಡೆದ ನಂತರ, ಕೋಟೆ ಬಾಗಿಲು ಹಾಕಿದರೇನಂತೆ?ಹಣಕ್ಕಿಂತ ಜ್ಞಾನ ಸಂಪತ್ತು ಬಹಳ ಮುಖ್ಯ: ಡಾ. ಮಹಾದೇವ ದೇವರುVB-G RAM G ಯೋಜನೆಯ ಅನುಷ್ಠಾನಿಸುವ ಕುರಿತು ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ತರಬೇತಿಶಾಸಕ ಬಸವರಾಜ ರಾಯರಡ್ಡಿ ಬಂದರು ದಾರಿ ಬಿಡಿ ಪ್ಲೀಸ್..!ಯಲಬುರ್ಗಾ ದಲ್ಲಿ ಇಡ್ಲಿ ದೋಸೆ ಸಿಗವಲ್ಲವಂತೆ...!ರಾಯರಡ್ಡಿಯ ಗೌರವವನ್ನು ನಿರಾಕರಿಸಿದ ಸಿಎಂ ಡಿಕೆಶಿಭಾನಾಪುರದಲ್ಲಿ ಭೀಕರ ರಸ್ತೆ ದುರಂತ: ಡಿವೈಡರ್ ದಾಟಿ ಬಂದ ಲಾರಿ ಡಿಕ್ಕಿ, ಮೃತರ ಸಂಖ್ಯೆ ಐದಕ್ಕೆ ಏರಿಕೆ!