ತಾಲೂಕಿನ ಚಿಕ್ಕಮ್ಯಾಗೇರಿ ಗ್ರಾಮದ ನಿವೃತ್ತ ಮುಖ್ಯ ಶಿಕ್ಷಕ ವೀರಭದ್ರಪ್ಪ ಎಸ್. ಬೆಣಕಲ್ ಗುರುಗಳ ಸೇವಾ ನಿವೃತ್ತಿಯ ಸಲುವಾಗಿ ಹಮ್ಮಿಕೊಂಡಿದ್ದ ಗೌರವ ಸಮರ್ಪಣಾ ಸಮಾರಂಭ ಹಾಗೂ ವಜ್ರಬಂಡಿಯ ಅಭಿನವ ಗವಿಶ್ರೀ ನಾಟ್ಯ ಸಂಘದಿಂದ ಅಭಿನಯಿಸಲ್ಪಟ್ಟ 'ತಾಯಿಯ ಮಡಿಲು' ನಾಟಕ ಪ್ರದರ್ಶನ ಕ್ಕೆ ಚಾಲನೆ ನೀಡಿ, ಬುಧವಾರ ಮಾತನಾಡಿದರು. ಗುರು ನಮಗೆ ಅರಿವು ಮೂಡಿಸುವ ಮೂಲಕ ತಮಗಿಂತ ಶಿಷ್ಯರು ಉನ್ನತ ಹುದ್ದೆ ಅಥವಾ ಸ್ಥಾನದಲ್ಲಿ ಇರಬೇಕೆಂಬ ಮಹಾದಾಸೆಯನ್ನು ಹೊಂದಿರುತ್ತಾರೆ. ಅವರ ಆಸೆಯಂತೆ ಎಲ್ಲಾ ವಿದ್ಯಾರ್ಥಿಗಳು ಉತ್ತಮವಾದ ವಿದ್ಯಾಭ್ಯಾಸ ಮಾಡುವ ಮೂಲಕ ಗುರುವಿನ ಆಸೆಯನ್ನು ಈಡೇರಿಸಬೇಕು. ಬೆಣಕಲ್ ಗುರುಗಳಿಂದ ಕಲಿತಂಥ ಸಾವಿರಾರು ವಿದ್ಯಾರ್ಥಿಗಳು ಉನ್ನತ ಸ್ಥಾನದಲ್ಲಿರುವುದು ನಿಜಕ್ಕೂ ಸಂತಸ. ಇಂತಹ ಗುರುವಿನ ಋಣ ತೀರಿಸುವ ಸಲುವಾಗಿ ಬಂಡಿ,ಚಿಕ್ಕಮ್ಯಾಗೇರಿ,ಬಳಗೇರಿ ಗ್ರಾಮಗಳ ಶಿಷ್ಯಂದಿರ ಬಳಗದಿಂದ ವಿ.ಎಸ್.ಬೆಣಕಲ್ ಗುರುಗಳಿಗೆ ಗೌರವ ಸಮರ್ಪಿಸುವುದರ ಜೊತೆಗೆ ಉತ್ತಮ ಜೀವನಾಧಿರತ ನಾಟಕ ಪ್ರದರ್ಶನ ಹಮ್ಮಿಕೊಂಡಿರುವುದು ಸಂತಸದ ಸಂಗತಿ ಎಂದರು.
ಜಿ.ಪಂ ಮಾಜಿ ಸದಸ್ಯ ಈರಪ್ಪ ಕುಡಗುಂಟಿ ಮಾತನಾಡಿ, ಎಲ್ಲಾ ವಿದ್ಯಾರ್ಥಿಗಳ ಬಾಳು ಬೆಳಕಾಗಬೇಕಾದರೇ, ಗುರುಗಳ ಮಾರ್ಗದರ್ಶನ ಬಹಳ ಮುಖ್ಯ. ಎಲ್ಲಾ ರಂಗದಲ್ಲಿ ಅಭಿಮಾನಿ ಬಳಗ ಇರುವುದು ಸಾಮಾನ್ಯ. ಆದರೆ, ವಿ.ಎಸ್.ಬೆಣಕಲ್ ಗುರುಗಳು ತಮ್ಮ ಸೇವಾ ಅವಧಿಯಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ದಾರಿ ದೀಪವಾಗಿ, ಅಪಾರ ಸಂಖ್ಯೆಯಲ್ಲಿ ಶಿಷ್ಯರನ್ನು ಸಂಪಾದಿಸಿರುವುದು ಶ್ಲಾಘನೀಯ. ಉತ್ತಮ ಗುರುಗಳನ್ನು ಹೊಂದುವುದು ಹಾಗೂ ಉತ್ತಮ ಶಿಷ್ಯರನ್ನು ಹೊಂದುವುದು ಸಹ ಒಂದು ಸಾಧನೆಯಾಗಿದೆ. ಅಂತಹ ಸಾಲಿನಲ್ಲಿ ಬೆಣಕಲ್ ಗುರುಗಳು ಇರುವುದನ್ನು ಅವರ ಶಿಷ್ಯರು ಈ ವೇದಿಕೆಯ ಮೂಲಕ ತೋರಿಸಿ ಕೊಟ್ಟಿದ್ದಾರೆ. ಎಲ್ಲಾ ಶಿಷ್ಯರು ಇವರ ಮಾರ್ಗದರ್ಶನದಲ್ಲಿ ಮುನ್ನಡೆಯಿರಿ ಎಂದು ಸಲಹೆ ನೀಡಿದರು.
ವೇ.ಮೂ. ಶರಣಯ್ಯ ಶಾಸ್ತ್ರಿಮಠ ಸಾನ್ನಿಧ್ಯ ವಹಿಸಿದ್ದರು. ನಿವೃತ್ತ ಶಿಕ್ಷಕ ವಿ.ಎಸ್.ಬೆಣಕಲ್ ಅಧ್ಯಕ್ಷತೆ ವಹಿಸಿದ್ದರು. ಅಪರ ಸರ್ಕಾರಿ ವಕೀಲ ಮಲ್ಲನಗೌಡ ಎಸ್. ಪಾಟೀಲ್, ಉಪನ್ಯಾಸಕ ಡಾ. ಮಹಾಂತೇಶ ನೆಲಾಗಣಿ ಮಾತನಾಡಿದರು.
ಮಾಜಿ ಸೈನಿಕ ಶಂಕ್ರಪ್ಪ ಮೆಣಸಿಗೇರಿ, ಕವಿ ಹಾಗೂ ಚನಲಚಿತ್ರ ನಟ ತಿರುಪತಿ ರಾಠೋಡ, ಮುಖ್ಯ ಶಿಕ್ಷಕರಾದ ಬಸವರಾಜ ಮಾಸ್ತಿ, ಸುರೇಶ ವೇದಪಾಠಕ, ಶರಣಪ್ಪ ಚನ್ಯಾಳ, ನೌಕರ ಸಂಘದ ತಾಲೂಕು ಅಧ್ಯಕ್ಷ ಸಿದ್ದಲಿಂಗಪ್ಪ ಶ್ಯಾಗೋಟಿ, ನಿವೃತ್ತ ಶಿಕ್ಷಕ ಸಕ್ರಪ್ಪ ಕುಂಟ್ರು, ಪಂಚಸೇನೆ ರಾಜ್ಯಾಧ್ಯಕ್ಷ ರುದ್ರಗೌಡ ಸೋಲಬಗೌಡ್ರ, ಬಳಗೇರಿ ಶಾಲೆಯ ಎಸ್ಡಿಎಂಸಿ ಅಧ್ಯಕ್ಷರಾದ ಶರಣಪ್ಪ ಬೂದಗುಂಪಾ, ರಾಜಶೇಖರ ಹೂಗಾರ, ಶಿಕ್ಷಕರಾದ ಬಸವರಾಜ ಮೇಟಿ, ಹನುಮಂತಪ್ಪ ನಡುಕಟ್ಟಿನ, ಕೃಷಿ ಅಧಿಕಾರಿ ಪ್ರಕಾಶ ಚವಡಿ, ಚಾಲಕ,ನಿರ್ವಾಹಕ ಶರಣಪ್ಪ ಕರಿಗಾರ, ಮುಖಂಡರಾದ ಬಸವರಾಜ ಅಂಗಡಿ, ಕಾಳೇಶ ಕಮ್ಮಾರ, ಮಾರುತಿ ಚಂಡೂರು, ಬಾಗೇಶ ಬಿಂದ್ಗಿ, ರಾಮಣ್ಣ ವಣಗೇರಿ ಇತತರಿದ್ದರು.
