ಸರ್ಕಾರಿ ಪ್ರೌಢಶಾಲೆಗೆ ೧ಎಕರೆ ೩೦ ಗುಂಟೆ ಜಮೀನು ದಾನ
ಕೊಪ್ಪಳ ಬೇವಿನಹಳ್ಳಿ ಗ್ರಾಮದ ಮುನಿರಾಬಾದ್ - ಸಮೀಪದ ಬೇವಿನಹಳ್ಳಿಯ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ಸಂಸ್ಥೆಯು ಗ್ರಾಮದಲ್ಲಿ ಶಿಕ್ಷಣಾಭಿವೃದ್ಧಿ ಪಡಿಸುವ ಉದ್ದೇಶದಿಂದ ಬೇವಿನಹಳ್ಳಿ ಸರ್ಕಾರಿ ಪ್ರೌಡಶಾಲೆಗೆ ೧ ಎಕರೆ ೩೦ ಗುಂಟೆ ಜಮೀನನ್ನು ಬೇವಿನಹಳ್ಳಿಯ ಹಿರೇಮಠ ಕುಟುಂಬದಿಂದ ಖರೀದಿ ಮಾಡಿ ಗ್ರಾಮಸ್ಥರಿಗೆ ಹಸ್ತಾಂತರಿಸಿದೆ.
2024-25ನೇ ಸಾಲಿನಲ್ಲಿ ಪ್ರಾರಂಭವಾದ ಪ್ರೌಢ ಶಾಲೆ ಕಟ್ಟಡಕ್ಕೆ ಜಾಗದ ಅವಶ್ಯಕತೆ ಅರಿತ ಗ್ರಾಮಸ್ಥರು ಕಿರ್ಲೊಸ್ಕರ ಕಾರ್ಖಾನೆಗೆ ಮನವಿ ಮಾಡಿದರು. ಮನವಿಗೆ ಸ್ಪಂದನೆ ಮಾಡಿದ ಸಂಸ್ಥೆಯು ಒಂದು ಎಕರೆ 30ಗುಂಟೆ ಜಮೀನನ್ನು ಉಚಿತವಾಗಿ ನೀಡಿತು.
ಈ ಕುರಿತು ಕಂಪನಿಯ ಮಾನವ ಸಂಪನ್ಮೂಲ ಮತ್ತು ಸಾಮಾನ್ಯ ಆಡಳಿತ ವಿಭಾಗದ ಉಪಾಧ್ಯಕ್ಷರಾದ ಶ್ರೀ ಶಿವಯ್ಯ ಬಿ ಸ್ವಾಮಿ ಮಾತನಾಡಿ ಬೇವಿನಹಳ್ಳಿ ಗ್ರಾಮದಲ್ಲಿ ಹೀಗಾಗಲೇ ಧಾರ್ಮಿಕ ಕೇಂದ್ರಗಳನ್ನು, ಶಾಲಾ ಕಟ್ಟಡಗಳನ್ನು, ಆಸ್ಪತ್ರೆ ಕಟ್ಟಡಗಳನ್ನು ರಸ್ತೆ ಕಾಮಗಾರಿಗಳನ್ನು ಸೇರಿದಂತೆ ಗ್ರಾಮದ ಹಲವು ಅಭಿವೃದ್ಧಿ ಕೆಲಸ ಮಾಡಿದೆ.
ಒಟ್ಟಾರೆ ಗ್ರಾಮದ ಸರ್ವತೋಮುಖ ಅಭಿವೃದ್ಧಿ ನಾವು ಸಿದ್ದರಿದ್ದೇವೆ. ವಿಶೇಷವಾಗಿ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕಗಳ ಅಭಿವೃದ್ದಿಗಾಗಿ, ಈ ಭಾಗದ ಶಿಕ್ಷಣವನ್ನು ಬಲಪಡಿಸುವ ಉದ್ದೇಶದಿಂದ ಹಾಗೂ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡುವ ದೃಷ್ಟಿಯಿಂದ ಸರ್ಕಾರಿ ಸಂಸ್ಥೆಗಳ ಅಬಿವೃದ್ಧಿಗೆ ಬೆಂಬಲ ನೀಡುವಲ್ಲಿ ಕೆಎಫ್‌ಐಎಲ್ ಸಂಸ್ಥೆಯು ಸಾಮಾಜಿಕ ಜವಾಬ್ದಾರಿಯನ್ನು ಹೊಂದಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಮಾನವ ಸಂಪನ್ಮೂಲ ವಿಭಾಗ ಹಿರಿಯ ಪ್ರಧಾನ ವ್ಯವಸ್ಥಾಪಕರಾದ ಕಿರಣ್ ಶೇಜೆಕರ್ ಇವರು ಶಿಕ್ಷಣಾಭಿವೃಧ್ದಿ, ಗ್ರಾಮೀಣ ಉನ್ನತಿಕರಣ, ಶಾಶ್ವತ ಸಮುದಾಯ ಮತ್ತು ಸುಸ್ಥಿರ ಕಲ್ಯಾಣ ಕಾರ್ಯಕ್ರಮಗಳತ್ತ ಕಿರ್ಲೊಸ್ಕರ ಸಂಸ್ಥೆಯ ಬದ್ದತೆಯನ್ನು ಹೊಂದಿದೆ ಎಂದು ಹೇಳಿದರು.
ಈ ಇದೇ ಸಂದರ್ಭದಲ್ಲಿ ಶ್ರೀ ಶಶಿಕಾಂತ ಬಿರದಾರ, ಉಪಪ್ರದಾನ ವ್ಯವಸ್ಥಾಪಕರು-ಮಾನವ ಸಂಪನ್ಮೂಲ ಹಾಗೂ ಶ್ರೀ ಉದ್ದವ್ ಕುಲಕರ್ಣಿ, ವ್ಯವಸ್ಥಾಪಕರು-ಸಿಎಸ್‌ಆರ್ ಉಪಸ್ಥಿತರಿದ್ದರು. ಗ್ರಾಮದ ಹಿರಿಯರಾದ ಶ್ರೀ ಬೀಮಣ್ಣ ಮೂಲಿಮನಿ, ಎಸ್ ಬಿ ಬಸವರಾಜ, ಮಾರ್ಕಂಡಪ್ಪ ಅಜಗರ್, ಯಂಕನಗೌಡ ಪಾಟೀಲ್, ಮುದ್ದಪ್ಪ ಗೊಂದಿಹೊಸಳ್ಳಿ, ನಾಗರಾಜ ಬಿ, ಬಸವರಾಜ ಮಡ್ಡಿ, ಮಾರುತಿ ಬಿ, ಬಸವರಾಜ್ ಬಿ, ಪಂಪಣ್ಣ ಎಸ್, ಶಿವಮೂರ್ತಿ ಎಂ ಮತ್ತು ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕೋಟ್ 1
ಕೆಎಫ್‌ಐಎಲ್ ಸಂಸ್ಥೆಯು ತನ್ನ ಕಾರ್ಯಚರಣೆ ಪ್ರದೇಶಗಳಲ್ಲಿ ಶಿಕ್ಷಣ ಆರೋಗ್ಯ, ಪರಿಸರ ಸಂರಕ್ಷಣೆ, ಗ್ರಾಮೀಣಾಬಿವೃದ್ಧಿ ಹಾಗೂ
ಸಮುದಾಯ ಕಲ್ಯಾಣ ಕಾರ್ಯಕ್ರಮಗಳ ಮೂಲಕ ಸಮಾಜಾಬಿವೃದ್ಧಿಗೆ ನಿರಂತರವಾಗಿ ಕೊಡುಗೆ ನೀಡುತ್ತಿದೆ.
ಇಂದು ಪ್ರೌಢ ಶಾಲೆಗೆ ಉಚಿತಯಾಗಿ ಜಮೀನು ನೀಡಿದ ಕಿರ್ಲೊಸ್ಕರ ಕಾರ್ಖಾನೆಗೆ ಧನ್ಯವಾದಗಳು.
-ಮುದ್ದಪ್ಪ ಜಿ ಬೇವಿನಹಳ್ಳಿ, ಗ್ರಾಮಸ್ಥ
ಕೋಟ್ -2
ಬೇವಿನಹಳ್ಳಿ ಗ್ರಾಮಕ್ಕೆ ಸರಕಾರಿ ಪ್ರೌಢ ಶಾಲಾ ಮಂಜೂರು ಆಗಲು ಕಾರ್ಖಾನೆ ಸಹ ಶ್ರಮವಹಿಸಿತ್ತು. ಮಕ್ಕಳ ಉಜ್ವಲ ಭವಿಷ್ಯದ ದೃಷ್ಟಿಯಿಂದ ನಮ್ಮ ಕಾರ್ಖಾನೆ ಪ್ರೌಢ ಶಾಲೆಗೆ ಉಚಿತವಾಗಿ 1ಎಕರೆ 30ಗುಂಟೆ ಜಮೀನು ನೀಡಿದ್ದೇವೆ. ಈ ಹಿಂದೆ ಪ್ರಾಥಮಿಕ ಶಾಲೆಗೆ 2ಎಕರೆ ಕೊಟ್ಟಿದ್ದನ್ನು ಸ್ಮರಿಸಬಹುದು.
ಇನ್ಮುಂದೆ ಗ್ರಾಮಸ್ಥರು ಶಿಕ್ಷಣಕ್ಕೆ ಇನ್ನು ಹೆಚ್ಚಿನ ಗಮನ ನೀಡಿ ಮುಂಬರುವ ವರ್ಷದಲ್ಲಿ ಪ್ರೌಢ ಶಾಲಾ ಫಲಿತಾಂಶ ಉತ್ತಮವಾಗಿ ಬರಲು ಕಾಳಜಿ ವಹಿಸಬೇಕು ಎಂದರು.
ಪಿ. ನಾರಾಯಣ ಮುಖ್ಯಸ್ಥರು ಮಾನವ ಸಂಪನ್ಮೂಲ ಮತ್ತು ಸಾರ್ವಜನಿಕ ಆಡಳಿತ ವಿಭಾಗ, ಕಿರ್ಲೊಸ್ಕರ ಸಂಸ್ಥೆ ಬೇವಿನಹಳ್ಳಿ
ಬೇವಿನಹಳ್ಳಿಯ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿಮಿಟೆಡ್ ಸಂಸ್ಥೆಯು ಸರ್ಕಾರಿ ಪ್ರೌಡಶಾಲೆಗೆ ೧ ಎಕರೆ ೩೦ ಗುಂಟೆ ಜಮೀನನ್ನು ಖರೀದಿಸಿ ಬ್ಯಾಂಕ್ ಚೆಕ್ ಅನ್ನು ಗ್ರಾಮಸ್ಥರಿಗೆ ಹಸ್ತಾಂತರಿಸಿತು.
