Web Stories
Desha Dootha
ePaper
| LIVE |ಅಂತಾರಾಷ್ಟ್ರೀಯ|ರಾಷ್ಟ್ರೀಯ|ರಾಜ್ಯ |ಕಲ್ಯಾಣ ಕರ್ನಾಟಕ|ಕೊಪ್ಪಳ|ಯಲಬುರ್ಗಾ|ಕುಕನೂರು|ಕುಷ್ಟಗಿ|ಗಂಗಾವತಿ |ಕಾರಟಗಿ |ಕನಕಗಿರಿ| ಕೊಪ್ಪಳ ಸ್ಥಳೀಯ|ಸುತ್ತ-ಮುತ್ತ|Feature|ಪಾಲಿಟಿಕ್ಸ್|ಕ್ಷೇತ್ರವಾರು |
| LIVE |ಅಂತಾರಾಷ್ಟ್ರೀಯ|ರಾಷ್ಟ್ರೀಯ|ರಾಜ್ಯ |ಕಲ್ಯಾಣ ಕರ್ನಾಟಕ|ಕೊಪ್ಪಳ
ಯಲಬುರ್ಗಾಕುಕನೂರುಕುಷ್ಟಗಿಗಂಗಾವತಿ ಕಾರಟಗಿ ಕನಕಗಿರಿ ಕೊಪ್ಪಳ ಸ್ಥಳೀಯಸುತ್ತ-ಮುತ್ತFeatureಪಾಲಿಟಿಕ್ಸ್ಕ್ಷೇತ್ರವಾರುಲೇಖನ

ತಂಗಡಗಿ ಗೆ ಕೋಕ್..? ರಾಯರೆಡ್ಡಿಗೆ ಶಾಕ್..? ಹಿಟ್ನಾಳಗೆ ಲಕ್...!

ಡಿ.ಡಿ. ನ್ಯೂಸ್ ಕೊಪ್ಪಳ

Advertisement

ಸಿದ್ದರಾಮಯ್ಯನ ಮಾನಸ ಪುತ್ರ ಕೆ.ರಾಘವೇಂದ್ರ ಹಿಟ್ನಾಳ ಗೆ ಒಲಿದು ಬರಲಿದೆ ಅದೃಷ್ಟ.

ಖರ್ಗೆ ಪರ ಬ್ಯಾಟಿಂಗ್ ಬಿಸಿದ ರಾಯರೆಡ್ಡಿಗೆ ತಟ್ಟಲಿದೆ ಬಿಸಿ.

ಕುಟುಂಬ ರಾಜಕಾರಣ ವಿರೋಧಿ ಎಂದು ಪರೋಕ್ಷವಾಗಿ ಹಿಟ್ನಾಳ ಕುಟುಂಬಕ್ಕೆ ಅವಮಾನ ಮಾಡಿದ ರಾಯರೆಡ್ಡಿಗೆ ಅಚ್ಚರಿ.?

ಕೊಪ್ಪಳ : ಸದ್ಯ ರಾಜ್ಯ ರಾಜಕಾರಣದಲ್ಲಿ ಬದಲಾವಣೆ ಪರ್ವ ಜೋರಾಗಿದೆ. ಈಗಾಗಲೇ ಸುಧೀರ್ಘ ಅವಧಿಯ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವುದರಿಂದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಗೆ ಮುಖ್ಯಮಂತ್ರಿ ಪಟ್ಟ ಬಹುತೇಕ ಖಚಿತವಾಗಿದೆ. ಆದಕಾರಣ ಸಚಿವ ಶಿವರಾಜ ತಂಗಡಗಿಗೆ ಕೋಕ್..! ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿಗೆ ಶಾಕ್..‌‌? ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳಗೆ ಲಕ್ ಒಲಿದು ಬರುವ ಎಲ್ಲಾ ಲಕ್ಷಣಗಳು ಗೋಚರಿಸಲಿವೆ.?

ರಾಜ್ಯ ರಾಜಕಾರಣದಲ್ಲಿ ಅತ್ಯಂತ ಬದಲಾವಣೆ ಎದ್ದು ಕಾಣುತ್ತಿರುವ ಹಿನ್ನೆಲೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ನವರ ಮಾನಸ ಪುತ್ರನೆಂದ ಹೆಸರಾದ ಕೊಪ್ಪಳ ಕ್ಷೇತ್ರದ ಶಾಸಕ ಕೆ.ರಾಘವೇಂದ್ರ ಹಿಟ್ನಾಳಗೆ ಸಚಿವ ಸ್ಥಾನ ದೊರೆಯಲಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.news_1780125239_0_360.webpಅದೃಷ್ಟ ರಾಜಕಾರಣಿ ಎಂದೇ ಕೊಪ್ಪಳ ಜಿಲ್ಲೆಯಲ್ಲಿ ಹೆಸರಾದ ಸಚಿವ ಶಿವರಾಜ ತಂಗಡಗಿ ಅವರು ಹಿಟ್ನಾಳ ಕುಟುಂಬದ ಸದಸ್ಯರಿಂದಂತೆ. ಕೊಪ್ಪಳ ಮಾಜಿ ಶಾಸಕ ಕೆ.ಬಸವರಾಜ ಹಿಟ್ನಾಳ ರ ಮಾತನ್ನು ಚಾಚು ತಪ್ಪದೆ ಪಾಲಿಸುತ್ತಿರುವ ಸಚಿವ ತಂಗಡಗಿ ತಾವು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ, ಜಿಲ್ಲೆಗೆ ಒದಗಬೇಕಾದ ಸಚಿವ ಸ್ಥಾನವನ್ನು ಈ ಬಾರಿ ಕೆ.ರಾಘವೇಂದ್ರ ಹಿಟ್ನಾಳ ಗೆ ಒದಗಿಸಿ ಕೊಡುವಲ್ಲಿ ಪ್ರಮುಖ ಪ್ರಾತ್ರ ವಹಿಸಲಿದ್ದಾರೆ.?

ಕಳೆದ ಕೆಲವು ದಶಕಗಳ ಹಿಂದೆ ಹೆಚ್‌.ಜಿ.ರಾಮುಲು ಕೈಯಲ್ಲಿದ್ದಂತ ಕಾಂಗ್ರೆಸ್ ಪಕ್ಷ ಕಳೆದ 2 ದಶಕಗಳಿಂದ ಹಿಟ್ನಾಳ ರ ಒಡೆತನದಲ್ಲಿದೆ ಎಂದರು ತಪ್ಪಾಗದು. ಜಿಲ್ಲೆಯಲ್ಲಿ ಹಿಟ್ನಾಳರ ಕುಟುಂಬದ ಪ್ರಾಬಲ್ಯ ಹೆಚ್ಚಿದ್ದು, ಆದ ಕಾರಣ ಸತತ ಹ್ಯಾಟ್ರಿಕ್ ಗೆಲುವು ಸಾಧಿಸಿದ ಕೊಪ್ಪಳ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಗೆ ಈ ಬಾರಿ ಸರಾಗವಾಗಿ ಅದೃಷ್ಟ ಒಲಿದು ಬರಲಿದೆ ಎಂದು ಸದ್ಯ ರಾಜಕೀಯ ವಲಯದಲ್ಲಿನ ಬಿಸಿ ಬಿಸಿ ಸುದ್ದಿ.news_1780125397_0_207.webpರಾಯರೆಡ್ಡಿ ವರ್ತನೆ ಸಚಿವ ಸ್ಥಾನಕ್ಕೆ ಮುಳುವಾಗಲಿದೆಯಾ?

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಅಸಾಧ್ಯವೆಂದು ಸದಾ ಸುದ್ದಿ ಯಲ್ಲಿರುವ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅವರು ಇತ್ತೀಚೆಗೆ ಮುಖ್ಯಮಂತ್ರಿ ಬದಲಾವಣೆಯಾದರೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಗಲೆಂದು ಡಿಕೆಶಿ ಬಗ್ಗೆ ಅಸಮಧಾನ ಹೊರ ಹಾಕಿದ ಹಲವು ಪ್ರಸಂಗಗಳನ್ನು ಡಿಕೆಶಿ ಆಪ್ತ ವಲಯ ಗಮನಿಸಿದೆ. ಇನ್ನೂ ಹಿಟ್ನಾಳ ಕುಟುಂಬದವರ ರಾಜಕಾರಣಕ್ಕೆ ಬೇಸತ್ತ ರಾಯರೆಡ್ಡಿ ಕಳೆದ‌ ಲೋಕಸಭಾ ಚುನಾವಣೆಯ ಸಂದರ್ಭದ ಪ್ರತಿ ಸಭೆ ಸಮಾರಂಭಗಳಲ್ಲಿ ನಾನು ಕುಟುಂಬ ರಾಜಕಾರಣ ವಿರೋಧಿ, ಯಾವುದೇ ಕಾರಣಕ್ಕೂ ಕುಟುಂಬ ರಾಜಕಾರಣ ಒಪ್ಪುದಿಲ್ಲವೆಂದು ಪರೋಕ್ಷವಾಗಿ ಹಿಟ್ನಾಳ ಕುಟುಂಬದವರ ಕುಟುಂಬ ರಾಜಕಾರಣವನ್ನು ವಿರೋಧಿಸಿದ್ದಾರೆ. ಇದನ್ನೆಲ್ಲ ಮನಸ್ಸಿನಲ್ಲಿಟ್ಟುಕೊಂಡ ಕೊಪ್ಪಳ ಮಾಜಿ ಶಾಸಕ ಕೆ.ಬಸವರಾಜ ಹಿಟ್ನಾಳ ಅವರು ರಾಯರೆಡ್ಡಿ ಯವರ ಅತಿಯಾದ ವರ್ತನೆಗೆ ಬೇಸತ್ತು ತಮ್ಮ ಪುತ್ರನಿಗೆ ಸಚಿವ ಒದಗಿಸಿಕೊಡುವಲ್ಲಿ ಯಶಸ್ವಿಯಾಗಲಿದ್ದಾರೆ ಎಂಬುದು ಜಿಲ್ಲೆಯ ಕಾಂಗ್ರೆಸ್ ನಾಯಕರ ಅಭಿಪ್ರಾಯ.

ಸಂಭಾವ್ಯ ಪಟ್ಟಿಯಲ್ಲಿ ರಾಯರೆಡ್ಡಿ ಹೆಸರು: 

ಈಗಾಗಲೇ ಡಿಕೆಶಿಗೆ ಮುಖ್ಯಮಂತ್ರಿ ಪಟ್ಟ ಖಚಿತವಾಗಿದೆ. ಡಿಕೆಶಿ ನೇತೃತ್ವದ ಸರ್ಕಾರದ ಸಚಿವರ ಸಂಭಾವ್ಯ ಪಟ್ಟಿಯಲ್ಲಿ ಯಲಬುರ್ಗಾ ಕ್ಷೇತ್ರದ ಶಾಸಕ ಬಸವರಾಜ ರಾಯರೆಡ್ಡಿ ಅವರ ಹೆಸರು ಕೇಳಿ ಬರುತ್ತಿದೆ. ಆದರೂ ಅದು ಆಟಕ್ಕುಂಟ ಲೆಕ್ಕಕ್ಕಿಲ್ಲ ಎಂಬುದು ಹೈ ಕಮಾಂಡ್ ನಿರ್ಧಾರವಾಗಿದೆ ಎಂದು ಹಿರಿಯ ಕಾಂಗ್ರೆಸ್‌ನ ನಾಯಕರ ಅಭಿಪ್ರಾಯವಾಗಿದೆ. news_1780125441_0_413.webpಬಿಡು ಬಿಟ್ಟ ಹಿಟ್ನಾಳ ಕುಟುಂಬ: 

ಕೊಪ್ಪಳ ವಿಧಾನ ಸಭಾ ಕ್ಷೇತ್ರದಿಂದ ಸತತ ಮೂರು ಬಾರಿ ಗೆಲವು ಸಾಧಿಸಿದ ಕೆ.ರಾಘವೇಂದ್ರ ಹಿಟ್ನಾಳ ಗೆ ಈ ಬಾರಿ ಸಚಿವ ಸ್ಥಾನ ದೊರೆಯುವ ಎಲ್ಲಾ ಲಕ್ಷಣಗಳು ಎದ್ದು ಕಾಣುತ್ತಿವೆ. ಶಾಸಕರ ಸಹೋದರ ಸಂಸದ ಕೆ.ರಾಜಶೇಖರ ಹಿಟ್ನಾಳ ಅವರು ನಿನ್ನೆ ದೆಹಲಿಯಲ್ಲಿ ಸಿದ್ದರಾಮಯ್ಯನವರನ್ನು ಭೇಟಿಯಾಗಿ ಆಶೀರ್ವಾದ ಪಡೆಯುವ ಮೂಲಕ ತಮ್ಮ ಸಹೋದರನಿಗೆ ಸಚಿವ ಸ್ಥಾನ ನೀಡಬೇಕೆಂಬ ಒತ್ತಾಸೆ ತೋರಿದ್ದಾರೆ. ಇನ್ನೂ ತಮಗೆ ಸಚಿವ ಸ್ಥಾನ ಕೊಡಬೇಕೆಂದು ತಮ್ಮ ಅಪಾರ ಬೆಂಬಲಿಗರೊಂದಿಗೆ ರಾಘವೇಂದ್ರ ಹಿಟ್ನಾಳ ಬೆಂಗಳೂರಿನಲ್ಲಿ ಬಿಡು ಬಿಟ್ಟಿದ್ದಾರೆಂದು ಮೂಲಗಳು ತಿಳಿಸಿವೆ. 

ರಾಯರೆಡ್ಡಿ ಪ್ರವಾಸ ಕಾರ್ಯಕ್ರಮ ರದ್ದು: 

ಯಲಬುರ್ಗಾ ಕ್ಷೇತ್ರಕ್ಕೆ ತಿಂಗಳಿಗೊಮ್ಮೆ ಅತಿಥಿ ಯಂತೆ ಬಂದು ಹೋಗುವ ಶಾಸಕ ಬಸವರಾಜ ರಾಯರೆಡ್ಡಿ ಅವರು ಮೇ. 29 ರಿಂದ ಜೂನ್ 1 ರವರೆಗೆ ಕ್ಷೇತ್ರದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ರಾಜ್ಯ ರಾಜಕಾರಣದಲ್ಲಿ ದಿಢೀರ್ ಬದಲಾವಣೆಯಾದ ಹಿನ್ನೆಲೆಯಲ್ಲಿ ರಾಯರೆಡ್ಡಿಯವರು ತಮ್ಮ ಎಲ್ಲಾ ಕಾರ್ಯಕ್ರಮಗಳನ್ನು ಯಾವುದೇ ಮುನ್ಸೂಚನೆ ನೀಡದೇ ರದ್ದುಗೊಳಿಸಿ, ತಮಗೆ ಸಚಿವ ಸ್ಥಾನ ನೀಡಬೇಕೆಂದು ವಾಸಸ್ಥಳ(ಬೆಂಗಳೂರು)ದಲ್ಲಿಯೇ ಇರುವುದು ಮತ್ತಷ್ಟು ಅಚ್ಚರಿಗೆ ಕಾರಣವಾಗಿದೆ.

ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿ ರಾಯರೆಡ್ಡಿ?

ಡಿಕೆಶಿ ಯವರ ಆಪ್ತ ವಲಯದಲ್ಲಿ ಅಷ್ಟೇನು ಗುರುತಿಸಿಕೊಳ್ಳದ 

ರಾಯರೆಡ್ಡಿಗೆ ಯಾವುದೇ ಸ್ಥಾನಮಾನಗಳು ದೊರೆಯುವುದಿಲ್ಲ. ಮತ್ತು ಈಗಿರುವ ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಸ್ಥಾನದಿಂದ ವಂಚಿತರಾಗುತ್ತಾರೆಂಬ ಮಾತುಗಳು ಕೈ ಪಾಳೆಯಲ್ಲಿ ಕೇಳಿ ಬರುತ್ತಿವೆ.

Author
Desha Dootha
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪತ್ರಿಕಾ ದಿನಾಚರಣೆ, ಜಿಲ್ಲಾ ಪತ್ರಕರ್ತರ ಸಮಾವೇಶದ ಭಿತ್ತಿಪತ್ರ ಬಿಡುಗಡೆಪ್ರಕಾಶ್ ಹಳ್ಳಿಗುಡಿ ಅವರಿಗೆ ಎಚ್ ಡಿ ಪದವಿ: ಹರ್ಷಹಿರೇಮನ್ನಾಪೂರದಲ್ಲಿ ಶನಿವಾರ ಆರಂಭವಾದ ೧೪ನೇ ಕೊಪ್ಪಳ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಲೇಖಕ ಕಿಶನರಾವ್ ಕುಲಕರ್ಣಿ ಸಮಕಾಲಿನ ಸವಾಲುಗಳು ವಿಷಯವಾಗಿ ಮಾತನಾಡಿದರು.ಊರು ಕೊಳ್ಳೆ ಹೊಡೆದ ನಂತರ, ಕೋಟೆ ಬಾಗಿಲು ಹಾಕಿದರೇನಂತೆ?ಹಣಕ್ಕಿಂತ ಜ್ಞಾನ ಸಂಪತ್ತು ಬಹಳ ಮುಖ್ಯ: ಡಾ. ಮಹಾದೇವ ದೇವರುVB-G RAM G ಯೋಜನೆಯ ಅನುಷ್ಠಾನಿಸುವ ಕುರಿತು ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ತರಬೇತಿಶಾಸಕ ಬಸವರಾಜ ರಾಯರಡ್ಡಿ ಬಂದರು ದಾರಿ ಬಿಡಿ ಪ್ಲೀಸ್..!ಯಲಬುರ್ಗಾ ದಲ್ಲಿ ಇಡ್ಲಿ ದೋಸೆ ಸಿಗವಲ್ಲವಂತೆ...!ರಾಯರಡ್ಡಿಯ ಗೌರವವನ್ನು ನಿರಾಕರಿಸಿದ ಸಿಎಂ ಡಿಕೆಶಿಭಾನಾಪುರದಲ್ಲಿ ಭೀಕರ ರಸ್ತೆ ದುರಂತ: ಡಿವೈಡರ್ ದಾಟಿ ಬಂದ ಲಾರಿ ಡಿಕ್ಕಿ, ಮೃತರ ಸಂಖ್ಯೆ ಐದಕ್ಕೆ ಏರಿಕೆ!