ಕೊಪ್ಪಳ: ಕ್ಷೇತ್ರದ ಶಾಸಕ ಕೆ ರಾಘವೇಂದ್ರ ಹಿಟ್ನಾಳ್ ಅವರಿಗೆ ಸಚಿವ ಸಂಪುಟದಲ್ಲಿ ಕ್ಯಾಬಿನೆಟ್ ದರ್ಜೆಯ ಸ್ಥಾನ ಸಿಗಲಿ ಎಂದು ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರು ಪೀಠ ಕಲಬುರ್ಗಿ ವಿಭಾಗದ ಶ್ರೀ ಶಿವಸಿದ್ದೇಶ್ವರ ಮಹಾಸ್ವಾಮಿಗಳು ಕಾಂಗ್ರೆಸ್ ಪಕ್ಷದ ವರಿಷ್ಠರಿಗೆ ಆಗ್ರಹಿಸಿದ್ದಾರೆ.
ಕಲ್ಯಾಣ ಕರ್ನಾಟಕದ 40ಕ್ಷೇತ್ರಗಳ ಪೈಕಿ ಕುರುಬ ಸಮಾಜದಿಂದ ಆಯ್ಕೆಯಾದ ಏಕೈಕ ಶಾಸಕ ಕೊಪ್ಪಳ ಕ್ಷೇತ್ರದ ಕೆ ರಾಘವೇಂದ್ರ ಹಿಟ್ನಾಳ್ ಅವರು. ಅವರು ಸತತವಾಗಿ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿ ಜನ ಮನ್ನಣೆ ಪಡೆದ ಜನಪ್ರಿಯ ಶಾಸಕರಾಗಿ, ಸಿದ್ದರಾಮಯ್ಯ ಅವರ ಮನಸು ಪುತ್ರರಾಗಿ ಆ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಬೇರೆ ಸಮುದಾಯದ ಕೆಲವು ಶಾಸಕರುಗಳು ಕೇವಲ ಒಂದೆರಡು ಬಾರಿ ಆಯ್ಕೆಯಾದರೆ ಅಂತವರಿಗೆ ಸಚಿವ ಗಿರಿಯನ್ನ ಕೊಟ್ಟಿದ್ದಾರೆ. ರಾಜ್ಯದ ಅತ್ಯಂತ ಹಿಂದುಳಿದ ಭಾಗವಾಗಿರುವ ಕಲ್ಯಾಣ ಕರ್ನಾಟಕದಲ್ಲಿ ಹಿಂದುಳಿದ ಸಮಾಜವಾಗಿರುವ ಕುರುಬ ಸಮಾಜಕ್ಕೆ ಇರುವ ಏಕೈಕ ಶಾಸಕನೆಂದರೆ ಅದು ರಾಘವೇಂದ್ರ ಹಿಟ್ನಾಳ್ ಅವರು. ಅವರಿಗೆ ಮೊದಲನೇ ಪಟ್ಟಿಯಲ್ಲಿ ಸಚಿವ ಸ್ಥಾನ ಕೊಡದೆ ಇರೋದು ಈ ಭಾಗದ ಕುರುಬ ಸಮುದಾಯವನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಇದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಭಾಗದಲ್ಲಿ ಎರಡು ಬಾರಿ ಜಿಲ್ಲಾ ಪಂಚಾಯತಿ ಸದಸ್ಯರಾಗಿ ಅಧ್ಯಕ್ಷರಾಗಿ, ಮೂರು ಬಾರಿ ಕೊಪ್ಪಳ ಕ್ಷೇತ್ರದ ಶಾಸಕರಾಗಿ ಸೋಲಿಲ್ಲದ ಸರದಾರರಾಗಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೊಪ್ಪಳವನ್ನು ಕಾಂಗ್ರೆಸ್ ಭದ್ರಕೋಟೆ ಮಾಡಿದ ಹಿಟ್ನಾಳ್ ಕುಟುಂಬದ ಸನ್ಮಾನ್ಯ ರಾಘವೇಂದ್ರ ಹಿಟ್ನಾಳ ಅವರನ್ನು ಎರಡನೇ ಪಟ್ಟಿಯಲ್ಲಿ ಸಚಿವರನ್ನಾಗಿ ಮಾಡಲೇಬೇಕು. ಮಾಡದಿದ್ದ ಪಕ್ಷದಲ್ಲಿ ಮುಂದಿನ ದಿನಮಾನದಲ್ಲಿ ಕೊಪ್ಪಳ ಕ್ಷೇತ್ರವಷ್ಟೇ ಅಲ್ಲದೆ ಇಡೀ ಕಲ್ಯಾಣ ಕರ್ನಾಟಕದ ಕುರುಬ ಸಮುದಾಯ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುತ್ತದೆ ಎಂದು ಈ ಮೂಲಕ ಕಾಂಗ್ರೆಸ್ ಪಕ್ಷದ ವರುಷ್ಟರಿಗೆ ಹಾಗೂ ರಾಜ್ಯದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕುರುಬ ಸಮುದಾಯದ ಪರವಾಗಿ ಆಗ್ರಹ ಮಾಡುತ್ತೇನೆ.
ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರು ಪೀಠ ಕಲಬುರ್ಗಿ ವಿಭಾಗದ ಶ್ರೀ ಶಿವಸಿದ್ದೇಶ್ವರ ಮಹಾಸ್ವಾಮಿಗಳು
