Web Stories
Desha Dootha
ePaper
| LIVE |ಅಂತಾರಾಷ್ಟ್ರೀಯ|ರಾಷ್ಟ್ರೀಯ|ರಾಜ್ಯ |ಕಲ್ಯಾಣ ಕರ್ನಾಟಕ|ಕೊಪ್ಪಳ|ಯಲಬುರ್ಗಾ|ಕುಕನೂರು|ಕುಷ್ಟಗಿ|ಗಂಗಾವತಿ |ಕಾರಟಗಿ |ಕನಕಗಿರಿ| ಕೊಪ್ಪಳ ಸ್ಥಳೀಯ|ಸುತ್ತ-ಮುತ್ತ|Feature|ಪಾಲಿಟಿಕ್ಸ್|ಕ್ಷೇತ್ರವಾರು |
| LIVE |ಅಂತಾರಾಷ್ಟ್ರೀಯ|ರಾಷ್ಟ್ರೀಯ|ರಾಜ್ಯ |ಕಲ್ಯಾಣ ಕರ್ನಾಟಕ|ಕೊಪ್ಪಳ
ಯಲಬುರ್ಗಾಕುಕನೂರುಕುಷ್ಟಗಿಗಂಗಾವತಿ ಕಾರಟಗಿ ಕನಕಗಿರಿ ಕೊಪ್ಪಳ ಸ್ಥಳೀಯಸುತ್ತ-ಮುತ್ತFeatureಪಾಲಿಟಿಕ್ಸ್ಕ್ಷೇತ್ರವಾರುಲೇಖನ

ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದ ಜಾತ್ರಾ ಮಹೋತ್ಸವ

ಡಿ.ಡಿ. ನ್ಯೂಸ್ ಕೊಪ್ಪಳ

Advertisement

ಭಕ್ತರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿ: ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ 

ಕೊಪ್ಪಳ ಜಿಲ್ಲೆ ಸುಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಹುಲಿಗಿ ಗ್ರಾಮದ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದ 2026ರ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿಗಳಾದ ಡಾ. ಸುರೇಶ ಬಿ. ಇಟ್ನಾಳ ಅವರು ಸಂಬAಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಮೇ 10 ರಿಂದ ಮೇ 14 ರವರೆಗೆ ಜಾತ್ರೆಗೆ ಆಗಮಿಸುವ ಭಕ್ತರಿಗೆ ಸೂಕ್ತ ಕುಡಿಯುವ ನೀರಿನ ವ್ಯವಸ್ಥೆಯನ್ನು ಹಾಗೂ ಮಹಾರಥೋತ್ಸವದ ನಂತರ ಒಂದು ತಿಂಗಳ ಕಾಲ ನಡೆಯುವ ಜಾತ್ರೆಗೆ ದೇವಸ್ಥಾನದಿಂದ 4 ಟ್ಯಾಂಕರ್‌ಗಳು, ಬಾಡಿಗೆ ರೂಪದಲ್ಲಿ 40, ಒಟ್ಟು 40 ಟ್ಯಾಂಕರ್‌ಗಳ ಮುಖಾಂತರ ಇನ್ನೂ ಹೆಚ್ಚಿನ ನೀರಿನ ಸೌಲಭ್ಯವನ್ನು ಒದಗಿಸಲು ಅನುಕೂಲವಾಗುವಂತೆ ಮುಖ್ಯ 'ಜನಸಂದಣಿ ಇರುವ ಪ್ರದೇಶದಲ್ಲಿ ಸಿಸ್ಟನ್‌ಗಳನ್ನು ಮಾಡಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಇತ್ತೀಚೆಗೆ ನಡೆದ ಸಭೆಯಲ್ಲಿ ನಿರ್ಣಯಿಸಲಾಗಿದೆ.news_1776871830_0_747.webpಅಲ್ಲದೇ ಬಾಡಿಗೆ ರೂಪದಲ್ಲಿ ಬ್ಯಾರಲ್‌ಗಳ ವ್ಯವಸ್ಥೆ ಮಾಡಿಕೊಂಡು, ವಾಹನ ನಿಲುಗಡೆ ಪ್ರದೇಶಗಳಲ್ಲಿ, ಶಿವಪುರ ರಸ್ತೆ, ಗವಿಮಠದ ಹತ್ತಿರ, ಹಳೇ ಮತ್ತು ಹೊಸ ತುಂಗಭದ್ರಾ ಪ್ರೌಢಶಾಲೆ ಮೈದಾನ, ಪ್ರಾಥಮಿಕ ಶಾಲೆ ಮೈದಾನ, ಕೋರಮಂಡಲ್ ಇಂಟರ್‌ನ್ಯಾಶನಲ್ ಫರ್ಟಿಲೈಸರ್ ಪ್ಯಾಕ್ಟರಿ ಮೈದಾನ, ನಂದಿ ಸರ್ಕಲ್, ಹೊಸ ಅಂಬೇಡ್ಕರ್ ಕಾಲೋನಿ ಮುಂದೆ, ರೈಲ್ವೆ ಗೇಟ್ ಹತ್ತಿರ, ರೈಲ್ವೇ ಸ್ಟೇಷನ್ ಸರ್ಕಲ್ ಹತ್ತಿರ ಹಾಗೂ ಸತ್ಯನಾರಾಯಣ ದೊನ್ನಿ ಬಿಲ್ಡಿಂಗ್ ಹತ್ತಿರ, ದೇವಸ್ಥಾನದ ಮತ್ತು ದೇವರ ದರ್ಶನಕ್ಕೆ ಕ್ಯೂಲೈನ್‌ನಲ್ಲಿ ಹೋಗುವ ಭಕ್ತರಿಗೆ ಅವಶ್ಯಕತೆಗನುಗುಣವಾಗಿ ಟ್ಯಾಂಕರ್‌ಗಳನ್ನು ನಿಯೋಜಿಸಿಕೊಂಡು ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಸಹ ನಿರ್ಣಯಿಸಲಾಗಿದ್ದು, ನೀರಿನ ಪೈಪ್ ಲೈನ್ ಲೀಕೇಜ್ ಆಗದಂತೆ ನಿರ್ವಹಣೆ ಮಾಡಲು ನಾನ್-ಪೋರ್ಟಬಲ್ ನೀರು ಬಂದಲ್ಲಿ ಅದನ್ನು ಭಕ್ತರ ಬಳಕೆಗೆ ನೀಡಬಾರದು. ನೀರಿನ ಗುಣಮಟ್ಟವನ್ನು ಪ್ರತಿನಿತ್ಯ ಪರೀಕ್ಷಿಸಿ ಶುದ್ಧ ನೀರು ಮಾತ್ರ ಭಕ್ತರಿಗೆ ಬಳಕೆ ಮಾಡಲು ಹಾಗೂ ಕಲುಷಿತ ನೀರಿನಿಂದ ಯಾವುದೇ ರೀತಿಯ ಇನ್‌ಫೆಕ್ಷನ್ ಆಗದಂತೆ ಹ್ಯಾಲೋಜನ್ ಮಾತ್ರೆಯನ್ನು ನೀರಿನಲ್ಲಿ ಬಳಸಲು ಹಾಗೂ ಇದರ ಬಗ್ಗೆ ಪ್ರಮಾಣ ಪತ್ರ ಒದಗಿಸಲು ಹುಲಿಗಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು.

ನೀರಿನ ಅರವಟ್ಟಿಗೆಗಳ ವ್ಯವಸ್ಥೆಗಾಗಿ ಸಿಬ್ಬಂದಿಗಳನ್ನು ನಿಯೋಜನೆ ಮಾಡಿಕೊಂಡು, ದೇವಸ್ಥಾನದಿಂದ ಭಕ್ತರಿಗೆ ಅನುಕೂಲವಾಗುವ ಕಡೆಗಳಲ್ಲಿ ವ್ಯವಸ್ಥಿತವಾಗಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಒಟ್ಟಾರೆ ಹುಲಿಗಿ ಗ್ರಾಮದ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದ 2026ರ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತರಿಗೆ ಯಾವುದೇ ರೀತಿಯ ಕುಡಿಯುವ ನೀರಿನ ಸಮಸ್ಯೆಗಳಾಗದಂತೆ ನೋಂಡಿಕೊಳ್ಳುವಂತೆ ಶ್ರೀ ಹುಲಿಗೆಮ್ಮ ದೇವಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳು, ಹುಲಿಗಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರರಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.

 

Author
Desha Dootha
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪತ್ರಿಕಾ ದಿನಾಚರಣೆ, ಜಿಲ್ಲಾ ಪತ್ರಕರ್ತರ ಸಮಾವೇಶದ ಭಿತ್ತಿಪತ್ರ ಬಿಡುಗಡೆಪ್ರಕಾಶ್ ಹಳ್ಳಿಗುಡಿ ಅವರಿಗೆ ಎಚ್ ಡಿ ಪದವಿ: ಹರ್ಷಹಿರೇಮನ್ನಾಪೂರದಲ್ಲಿ ಶನಿವಾರ ಆರಂಭವಾದ ೧೪ನೇ ಕೊಪ್ಪಳ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಲೇಖಕ ಕಿಶನರಾವ್ ಕುಲಕರ್ಣಿ ಸಮಕಾಲಿನ ಸವಾಲುಗಳು ವಿಷಯವಾಗಿ ಮಾತನಾಡಿದರು.ಊರು ಕೊಳ್ಳೆ ಹೊಡೆದ ನಂತರ, ಕೋಟೆ ಬಾಗಿಲು ಹಾಕಿದರೇನಂತೆ?ಹಣಕ್ಕಿಂತ ಜ್ಞಾನ ಸಂಪತ್ತು ಬಹಳ ಮುಖ್ಯ: ಡಾ. ಮಹಾದೇವ ದೇವರುVB-G RAM G ಯೋಜನೆಯ ಅನುಷ್ಠಾನಿಸುವ ಕುರಿತು ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ತರಬೇತಿಶಾಸಕ ಬಸವರಾಜ ರಾಯರಡ್ಡಿ ಬಂದರು ದಾರಿ ಬಿಡಿ ಪ್ಲೀಸ್..!ಯಲಬುರ್ಗಾ ದಲ್ಲಿ ಇಡ್ಲಿ ದೋಸೆ ಸಿಗವಲ್ಲವಂತೆ...!ರಾಯರಡ್ಡಿಯ ಗೌರವವನ್ನು ನಿರಾಕರಿಸಿದ ಸಿಎಂ ಡಿಕೆಶಿಭಾನಾಪುರದಲ್ಲಿ ಭೀಕರ ರಸ್ತೆ ದುರಂತ: ಡಿವೈಡರ್ ದಾಟಿ ಬಂದ ಲಾರಿ ಡಿಕ್ಕಿ, ಮೃತರ ಸಂಖ್ಯೆ ಐದಕ್ಕೆ ಏರಿಕೆ!