ರೆಡ್ಡಿ ಕೋಟಾದಡಿ ರಾಯರೆಡ್ಚಿಗೆ ಸಚಿವ ಸ್ಥಾನ ಕೈ ತಪ್ಪುವ ಸಾಧ್ಯತೆ.?
ಕೊಪ್ಪಳ: ಮೊದಲ ಪಟ್ಟಿಯಲ್ಲಿ ಜಿಲ್ಲೆಗೆ ದೊರೆಯದ ಸಚಿವ ಸ್ಥಾನ, ಎರಡನೇ ಪಟ್ಟಿಯಲ್ಲಿ ಮಾಜಿ ಸಚಿವ ಶಿವರಾಜ ತಂಗಡಗಿ, ಕೊಪ್ಪಳ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಮತ್ತು ಯಲಬುರ್ಗಾ ಕ್ಷೇತ್ರದ ಶಾಸಕ ಬಸವರಾಜ ರಾಯರೆಡ್ಡಿ ಯವರ ಹೆಸರು ಬಲವಾಗಿ ಕೇಳಿ ಬರುತ್ತಿವೆ.
ಹಿರಿತನ ಹಾಗೂ ಅನುಭವದ ಆಧಾರದ ಮೇಲೆ ಬಸವರಾಜ ರಾಯರೆಡ್ಡಿ ಅವರು ತಮಗೆ ಸಚಿವ ಸ್ಥಾನ ದೊರೆಯಲಿದೆ ಎಂಬ ಆಸೆಯಿಂದ ಅತೀ ಉತ್ಸುಕದಲ್ಲಿದ್ದಾರೆ. ಆದರೆ, ತಂಗಡಗಿ ಮತ್ತು ಹಿಟ್ನಾಳ ರ ಹೊಂದಾಣಿಕೆಗೆ ಹೋಲಿಕೆ ಮಾಡಿದರೇ ರಾಯರೆಡ್ಡಿಗೆ ಮತ್ತಷ್ಟು ಬಿಕ್ಕಟ್ಟು ಕಾಣತೊಡಗಿದೆ.
ರೆಡ್ಡಿ ಸಮಾಜದ ಪೈಪೋಟಿ: ಗದಗ ಕ್ಷೇತ್ರದ ನಿರ್ಗಮಿತ ಸಚಿವ ಹೆಚ್.ಕೆ.ಪಾಟೀಲ್, ನವಲಗುಂದ ಶಾಸಕ ಎನ್. ಎಚ್. ಕೋನರೆಡ್ಡಿ, ಸಿಂಧನೂರು ಕ್ಷೇತ್ರದ ಶಾಸಕ ಹಂಪನಗೌಡ ಬಾದರ್ಲಿ, ಯಲಬುರ್ಗಾ ಕ್ಷೇತ್ರದ ಶಾಸಕ ಬಸವರಾಜ ರಾಯರೆಡ್ಡಿ ಅವರು ರೆಡ್ಡಿ ಸಮಾಜ ಹಾಗೂ ಉತ್ತರ ಕರ್ನಾಟಕ ಭಾಗಕ್ಕೆ ಮತ್ತೊಂದು ಸಚಿವ ಸ್ಥಾನ ನೀಡಬೇಕೆಂದು ತೀವ್ರ ಪೈಪೋಟಿ ನಡೆಸಿದ್ದಾರೆ ಎನ್ನಲಾಗಿದೆ.
ರಾಮಲಿಂಗಾ ರೆಡ್ಡಿ ಪ್ರಭಾವ ಬೀರುವುದೇ: ಬೆಂಗಳೂರಿನ ಬಿಟಿಎಂ ಲೇ ಔಟ್ ನ ಶಾಸಕ ರಾಮಲಿಂಗಾ ರೆಡ್ಡಿ ಅವರು ಮೊದಲ ಹಂತದಲ್ಲಿಯೇ ಸಿಎಂ ಡಿಕೆಶಿ ಜೊತೆಗೆ ಸಚಿವರಾಗಿ ಬುಧವಾರ ಪ್ರಮಾಣ ವಚನ ಸ್ವೀಕರಿಸಿದ್ದರು. ಖಾತೆಗಾಗಿ ಕ್ಯಾತೆ ತೆಗೆದು ಸಚಿವರಾಗಿ 24 ಗಂಟೆಯಲ್ಲಿಯೇ ರಾಜೀನಾಮೆ ನೀಡಿದ್ದರು. ಸಿಎಂ ಡಿಕೆಶಿ ಯವರ ಆಪ್ತ ಸ್ನೇಹಿತರಾದ ರಾಮಲಿಂಗಾ ರೆಡ್ಡಿ ಯವರನ್ನು ಮನವೊಲಿಸಿ, ರಾಜೀನಾಮೆ ಹಿಂಪಡೆಯುವಂತೆ ಮಾಡುತ್ತಿದ್ದಾರೆ. ದಕ್ಷಿಣ ಭಾಗದವರಾದ ರಾಮಲಿಂಗಾ ರೆಡ್ಡಿ ಅವರು ಉತ್ತರ ಕರ್ನಾಟಕಕ್ಕೆ ಏನು ಪ್ರಭಾರ ಬಿರದಿದ್ದರೂ ಸಹ ರೆಡ್ಡಿ ಕೋಟಾದಡಿ ಸಚಿವ ಸ್ಥಾನ ಗಿಟ್ಟಿಸಿಕೊಂಡಿದಕ್ಕೆ ಮತ್ತಷ್ಟು ರಾಯರೆಡ್ಡಿಗೆ ಕಗ್ಗಂಟಾಗಿ ಮಾರ್ಪಡಲಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಗಳು ಶುರುವಾಗಿವೆ.
ಪಟ್ಟು: ಈಗಾಗಲೇ ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತ ಎಂ.ಬಿ.ಪಾಟೀಲ್ ರಿಗೆ ರೆಡ್ಡಿ ಕೋಟಾದಡಿ ಉತ್ತರ ಕರ್ನಾಟಕ ಕ್ಕೆ ಸಚಿವ ಸ್ಥಾನ ನೀಡಲಾಗಿದೆ. ಇದೇ ಕಾರಣವನ್ನು ಮುಂದಿಟ್ಟುಕೊಂಡು ಭೋವಿ ಸಮಾಜಕ್ಕೆ ಸಚಿವ ಸ್ಥಾನ ನೀಡಿ, ಸಾಮಾಜಿಕ ನ್ಯಾಯ ಒದಗಿಸಬೇಕೆಂದರೇ ನಿರ್ಗಮಿತ ಸಚಿವ ಶಿವರಾಜ ತಂಗಡಗಿ ಸಹ ತಮಗೆ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯ ಮಾಡುತ್ತಿದ್ದಾರೆ. ಇನ್ನೂ ಕೊಪ್ಪಳದಲ್ಲಿ ಹ್ಯಾಟ್ರಿಕ್ ಗೆಲವು ಸಾಧಿಸಿದ ಕುರುಬ ಸಮಾಜದ ಕೆ.ರಾಘವೇಂದ್ರ ಹಿಟ್ನಾಳ ಅವರು ಉತ್ತರ ಕರ್ನಾಟಕ್ಕೆ ಕುರುಬರಿಗೆ ಸಚಿವ ಸ್ಥಾನ ನೀಡುವುದಾದರೇ ಅದನ್ನು ತಮಗೆ ನೀಡಬೇಕೆಂದು ಎಲ್ಲಿಲ್ಲದ ಕಸರತ್ತು ನಡೆಸಿ, ಪಟ್ಟು ಹಿಡಿದಿದ್ದಾರೆಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
