*ಸಂಗೀತಕ್ಕೆ ಸಪ್ತ ಸ್ವರಗಳು ಅತ್ಯಗತ್ಯ : ಆದಯ್ಯ ಅಜ್ಜನವರು*
ಕೊಪ್ಪಳ ಸಂಗೀತ ಇಂಪಾಗಿ ಕೇಳಲು ಸಪ್ತ ಸ್ವರಗಳು ಅತ್ಯಗತ್ಯ ಎಂದು ಆದಯ್ಯ ಅಜ್ಜನವರು
ಅವರು ಹೇಳಿದರು.
ಸಮೀಪದ ಕೊಪ್ಪಳ ತಾಲೂಕಿನ ಚಳ್ಳಾರಿ ಗ್ರಾಮದಲ್ಲಿ ಶ್ರೀ ದುರ್ಗಾ ದೇವಿ ದೇವಸ್ಥಾನ ಆವರಣದಲ್ಲಿ ಜಾನಪದ ಸಂಭ್ರಮ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.
ಡಾ, ರಾಜಕುಮಾರ್ ಸಾಂಸೃತಿಕ ಮತ್ತು ವಿವಿಧ ಕಲಾ ರಂಗ ಸಂಸ್ಥೆ (ರಿ) ಕುಷ್ಟಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಶ್ರೀ ಡಾ, ರಾಜಕುಮಾರ್ ಸಾಂಸೃತಿಕ ಮತ್ತು ವಿವಿಧ ಕಲಾ ರಂಗ ಸಂಸ್ಥೆ (ರಿ) ಕುಷ್ಟಗಿ ಜಾನಪದ ಸಂಭ್ರಮ ಸಂಗೀತ ಕಾರ್ಯಕ್ರಮ
ಉದ್ಗಾಟಿಸಿ ಅವರು ಮಾತನಾಡಿದರು.
ಮಕ್ಕಳು ಸಂಸ್ಕಾರವಂತರಾಗಲು ತಾಯಿಯ ಕೊಡುಗೆ ಎಷ್ಟು ಅಗತ್ಯವೋ ಹಾಗೆ ಸಂಗೀತ ನಮಗೆಲ್ಲ ಇಂಪಾಗಿ ಕೇಳಲು ಸಪ್ತ ಸ್ವರಗಳು ಅತ್ಯಗತ್ಯವಾಗಿದೆ. ಅರ್ಥವಿಲ್ಲದ ಪಾಶ್ಚಿಮಾತ್ಯ ಸಂಗೀತಕ್ಕೆ ಮಾರು ಹೋಗದೆ ನೋವು ನಿವಾರಕ ರಾಗಗಳುಳ್ಳ ನಮ್ಮ ದೇಶೀಯ ಸಂಗೀತಕ್ಕೆ ಹೆಚ್ಚು ಪ್ರಾಧಾನ್ಯತೆ ಕೊಡುವ ಮೂಲಕ ನೆಲದ ಸಾಹಿತ್ಯ, ಕಲೆ, ಸಾಂಸ್ಕೃತಿ ಉಳಿಸಿ ಬೆಳೆಸುವ ಕಾರ್ಯವಾಗಬೇಕು. ಸಂಗೀತ ಕಲಾವಿದರನ್ನು ಗೌರವಿಸಬೇಕು. ಈ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರೋತ್ಸಾಹಿಸುತ್ತಿರುವುದು ಪ್ರಶಂಸನೀಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಮುಖಂಡ ಹನಮಗೌಡ
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ಪುಟ್ಟರಾಜ ಕವಿ ಗವಾಯಿಗಳವರು ನಾಡಿನ ಅನೇಕ ಅಂಧ ಅನಾಥ ಮಕ್ಕಳ ಬಾಳಿಗೆ ಬೆಳಕಾಗಿದ್ದಾರೆ. ಜೊತೆಗೆ ನಾಡಿನ ಅನೇಕ ಊರುಗಳಲ್ಲಿ ಸಂಚರಿಸಿ ಬಡ ಮಕ್ಕಳಿಗೆ ವಿದ್ಯೆಯನ್ನು ಧಾರೆಎರೆದು ಸಂಗೀತ ಸಾಧಕರನ್ನಾಗಿ ಮಾಡಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ ಎಂದರು.
ಸಂಗೀತ ಶಿಕ್ಷಕ ದೆವೇಂದ್ರಗೌಡ ಪೂಜಾರ್ ಜಾನಪದ ಸಂಗೀತ ಗಾಯನ ಮೂಲಕ ಶ್ರೋತೃಗಳ ಗಮನ ಸೆಳೆದರು. ಬಸವರಾಜ ಮಹಾಂತ ನಿರೂಪಿಸಿದರು ಕುಮಾರಿ ಸಂಗೀತಾ ಬಸವಣ್ಣಪ್ರಾಥಿಸಿದರುಕ್ಯಾಂಪ್ ಪ್ರಾರ್ಥಿಸಿದರು.
ಕಲಾವಿದರಾದ ದೇವೇಂದ್ರಗೌಡ ಪೂಜಾರಿ .ಶರಣುಕುಮಾರ ಗಂಗಾವತಿ,ಕುಮಾರಿ
ಸಂಗೀತಾ, ಮರಿಯಪ್ಪ ಗಾಯಕರು, ಹೋನ್ನಪ್ಪ ಭರತಗಿ, ನಾಡಿನ ಖ್ಯಾತ ರಂಗಭೂಮಿ ಕಲಾವಿದ ಹಾಗೂ ಅನುಭವಿ ಕ್ಯಾಷಿಯೋ ವಾದಕ ಶಿವಮೂರ್ತಿ ದೊಡ್ಡಮನಿ,
