ಸಿದ್ದರಾಮಯ್ಯ ರಾಜೀನಾಮೆ ಹಿನ್ನೆಲೆ ಸಂಭ್ರಮಾಚರಣೆ?
ಲಿಂಗಸಗೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆ ವಿಚಾರವನ್ನು ಹಿನ್ನೆಲೆಯಾಗಿ ಮಾಡಿಕೊಂಡು ಕಾಂಗ್ರೆಸ್ ಕಾರ್ಯಕರ್ತರೆಂದು ಹೇಳಲಾಗುತ್ತಿರುವ ಕೆಲವರು ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದ್ದಾರೆ ಎನ್ನುವ ಆರೋಪ ಲಿಂಗಸಗೂರು ತಾಲೂಕಿನ ಈಚನಾಳ ಗ್ರಾಮದಲ್ಲಿ ಕೇಳಿಬಂದಿದ್ದು, ಸ್ಥಳೀಯ ಕಾಂಗ್ರೇಸ್ ಪಕ್ಷದಲ್ಲಿ ಅಸಮದಾನ ಮಾತುಗಳು ಕೇಳಿಬರುತ್ತಿವೆ.!!
ಗ್ರಾಮದ ನಿವಾಸಿಗಳ ಮಾಹಿತಿಯ ಪ್ರಕಾರ, ಮೇ. 28 ಸಿದ್ದರಾಮಯ್ಯನವರು ಸಿಎಂ.ಸ್ಥಾನಕ್ಕೆ ರಾಜಿನಾಮೆ ಸಲ್ಲಿಸುತಿದ್ದಂತೆ ಕೆಲ ಯುವಕರು ಸಂಗೊಳ್ಳಿ ರಾಯಣ್ಣ ಪ್ರತಿಮೆ ಸಮೀಪ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದ್ದಾರೆ ಎನ್ನಲಾಗಿದೆ. ಪಟಾಕಿಗಳು ಸುತ್ತಮುತ್ತಲಿನ ಮನೆಗಳತ್ತ ಹಾರಿದ ಪರಿಣಾಮ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡ ಬಳಿಕ ಕಾಂಗ್ರೆಸ್ ಪಕ್ಷದ ಡಿಎಸ್.ಹೂಲಗೇರಿ ಯವರ ಗುಂಪಿನಲ್ಲಿ ಗುರ್ತಿಸಿಕೊಂಡಿದ್ದ ಈಚನಾಳ ಗ್ರಾಮದ ಆನಂದ ಕುಂಬಾರ ಎನ್ನುವಾತ ಮತ್ತು ಆತನ ಸಹಜರರು ಸ್ಥಳದಿಂದ ಕಾಲ್ಕಿತ್ತಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಗೆ ಸಂಬಂಧಿಸಿದಂತೆ ವಿವಿಧ ಹಿಂದುಳಿದ ವರ್ಗಗಳ ಸಂಘಟನೆಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಸಮಾಜದಲ್ಲಿ ಹಾಗೂ ಒಂದೆ ಪಕ್ಷದಲ್ಲಿ ಸೌಹಾರ್ದತೆ ಮತ್ತು ಸಹೋದರತ್ವಕ್ಕೆ ಧಕ್ಕೆ ಉಂಟುಮಾಡುವ ರೀತಿಯ ನಡೆಗಳನ್ನು ಖಂಡಿಸಿವೆ. ಜನಪರ ಆಡಳಿತ ನೀಡಿದ ನಾಯಕರ ರಾಜೀನಾಮೆಯನ್ನು ಸಂಭ್ರಮದ ವಿಷಯವನ್ನಾಗಿ ಮಾಡಿರುವುದು ಸಿದ್ದರಾಮಯ್ಯ ಅವರ ಬೆಂಬಲಿಗರು ಹಾಗೂ ಹಲವು ರಾಜಕೀಯ ಕಾರ್ಯಕರ್ತರು, ಹಾಗೂ ಕುರುಬ ಸಮುದಾಯದವರಿಗೆ ನೋವುಂಟುಮಾಡಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಇದೇ ವೇಳೆ, ಪಕ್ಷದ ನಾಯಕರಾದವರು ಇಂತಹ ಬೆಳವಣಿಗೆಗೆ ಕಾರಣರಾದವರನ್ನು ಪಕ್ಕದಲ್ಲಿಯೇ ಇಟ್ಟಕೊಂಡಿರುವದು ಸಿದ್ದರಾಮಯ್ಯನವರ ಅಭಿಮಾನಿಗಳಲ್ಲಿ ಬೇಸರಕ್ಕೆ ಕಾರಣವಾಗಿದ್ದಲ್ಲದೆ ಮುಂದಿನ ವಿಧಾನಸಭೆ,ಜಿಲ್ಲಾ ,ತಾಲೂಕ ಪಂಚಾಯತಿ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗುವ ಸಾಧ್ಯತೆ ಇದೆ ಎಂದು ಕೆಲ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ.
ಆರೋಪಿತ ವ್ಯಕ್ತಿಗಳ ವಿರುದ್ಧ ಪಕ್ಷದ ಮಟ್ಟದಲ್ಲಿ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹವೂ ಕೇಳಿಬಂದಿದೆ.
ಆದರೆ, ಈ ಆರೋಪಗಳಿಗೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ಪೊಲೀಸ್ ದೂರು ದಾಖಲಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಘಟನೆ ಕುರಿತು ಸ್ಪಷ್ಟ ತನಿಖೆ ನಡೆದ ಬಳಿಕವೇ ವಾಸ್ತವಾಂಶ ಹೊರಬೀಳಬೇಕಿದೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.
ಯಾರೀತ ಆನಂದ ಕುಂಬಾರ.?
ಈಚನಾಳ ಗ್ರಾಮದಲ್ಲಿಯೇ ವಾಸವಾಗಿರುವ ಆನಂದ ಕುಂಬಾರ ಸಧ್ಯ ಡಿಎಸ್.ಹೂಲಗೇರಿ ಬಣದ ಕಾಂಗ್ರೇಸ್ ಪಕ್ಷದಲ್ಲಿ ಗುರ್ತಿಸಿಕೊಂಡಿರುವ ಯುವಕ.!
ಆದರೆ ಇದಕ್ಕೂ ಮುಂಚೆ ಬಿಜೆಪಿ,ಜೆಡಿಎಸ್ ಪಕ್ಷದ ನಾಯಕರ ಚುನಾವಣೆಯಲ್ಲಿ ಸುತ್ತಾಡಿಕೊಂಡಿದ್ದಾತ. ಸಧ್ಯ ಕುರುಬ ಸಮುದಾಯ ಸೇರಿ ಹಿಂದುಳಿದ ವರ್ಗದ ಮುಖಂಡರ ಹಾಗೂ ಸಿದ್ದರಾಮಯ್ಯನವರ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾನೆ.!
