Web Stories
Desha Dootha
ePaper
| LIVE |ಅಂತಾರಾಷ್ಟ್ರೀಯ|ರಾಷ್ಟ್ರೀಯ|ರಾಜ್ಯ |ಕಲ್ಯಾಣ ಕರ್ನಾಟಕ|ಕೊಪ್ಪಳ|ಯಲಬುರ್ಗಾ|ಕುಕನೂರು|ಕುಷ್ಟಗಿ|ಗಂಗಾವತಿ |ಕಾರಟಗಿ |ಕನಕಗಿರಿ| ಕೊಪ್ಪಳ ಸ್ಥಳೀಯ|ಸುತ್ತ-ಮುತ್ತ|Feature|ಪಾಲಿಟಿಕ್ಸ್|ಕ್ಷೇತ್ರವಾರು |
| LIVE |ಅಂತಾರಾಷ್ಟ್ರೀಯ|ರಾಷ್ಟ್ರೀಯ|ರಾಜ್ಯ |ಕಲ್ಯಾಣ ಕರ್ನಾಟಕ|ಕೊಪ್ಪಳ
ಯಲಬುರ್ಗಾಕುಕನೂರುಕುಷ್ಟಗಿಗಂಗಾವತಿ ಕಾರಟಗಿ ಕನಕಗಿರಿ ಕೊಪ್ಪಳ ಸ್ಥಳೀಯಸುತ್ತ-ಮುತ್ತFeatureಪಾಲಿಟಿಕ್ಸ್ಕ್ಷೇತ್ರವಾರುಲೇಖನ

ಆಯುರ್ವೇದ ಜಾಗೃತಿ – ವಿಸ್ಟಾರ್ ವೆಲ್‌ನೆಸ್ ಸಂಸ್ಥೆಗೆ ಮಹನೀಯರ ಬೆಂಬಲ

ಡಿ.ಡಿ. ನ್ಯೂಸ್ : ಬೆಂಗಳೂರು

Advertisement

ಬೆಂಗಳೂರು ಆರೋಗ್ಯಕರ ಜೀವನಶೈಲಿಗೆ ಆಯುರ್ವೇದದ ಮಹತ್ವ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈ ದಿಸೆಯಲ್ಲಿ ವಿಸ್ಟಾರ್ ವೆಲ್‌ನೆಸ್ ಸಂಸ್ಥೆಯ ಕಾರ್ಯಕ್ಕೆ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಂಸ್ಥೆಯ ಟಾಪ್ ಲೀಡರ್ ಮಾಹಿ ಅವರ ನೇತೃತ್ವದಲ್ಲಿ ನಗರದ ಖಾಸಗಿ ಹೋಟೆಲ್‌ನಲ್ಲಿ ಇಂದು ಆಯೋಜಿಸಲಾದ ಆಯುರ್ವೇದ ಜನಜಾಗೃತಿ ಕಾರ್ಯಕ್ರಮದಲ್ಲಿ ಹಲವು ಗಣ್ಯರು ಭಾಗವಹಿಸಿ, ಆರೋಗ್ಯ ಮತ್ತು ಆಧ್ಯಾತ್ಮದ ಮಹತ್ವವನ್ನು ಒತ್ತಿ ಹೇಳಿದರು.news_1777871779_0_203.webpಪರಮ ಪೂಜ್ಯ ಶ್ರೀ ನರಸಿಂಹ ಸ್ವಾಮಿ ಮಹಾ ಸ್ವಾಮೀಜಿಗಳು ಮಾತನಾಡಿ,

“ಇಂದಿನ ಯುಗದಲ್ಲಿ ಮಾನವನು ಆರೋಗ್ಯ ಮತ್ತು ಆರ್ಥಿಕ ಒತ್ತಡಗಳ ನಡುವೆ ಬದುಕುತ್ತಿದ್ದಾನೆ. ಈ ಸಂದರ್ಭದಲ್ಲಿ ಗಿಡಮೂಲಿಕೆ ಆಧಾರಿತ ಆಯುರ್ವೇದ ಉತ್ಪನ್ನಗಳು ದೇಹಕ್ಕೆ ಸಹಜ ಶಕ್ತಿ ನೀಡುತ್ತವೆ.

ವಿಸ್ಟಾರ್ ವೆಲ್‌ನೆಸ್ ಸಂಸ್ಥೆ ಈ ದಿಕ್ಕಿನಲ್ಲಿ ಉತ್ತಮ ಪ್ರಯತ್ನ ಮಾಡುತ್ತಿದೆ. ದೇಶದ ಮೂಲೆಮೂಲೆಗಳಿಗೆ ಆರೋಗ್ಯಕರ ಉತ್ಪನ್ನಗಳನ್ನು ತಲುಪಿಸುವ ಕಾರ್ಯ ಶ್ಲಾಘನೀಯವಾಗಿದೆ.

ಆಧ್ಯಾತ್ಮ ಮತ್ತು ಆರೋಗ್ಯ ಜೊತೆಗೆ ಆರ್ಥಿಕ ಸ್ಥಿರತೆ ಕೂಡ ಮುಖ್ಯ. ಈ ರೀತಿಯ ಸಂಸ್ಥೆಗಳು ಸಮಾಜದ ಸಮತೋಲನಕ್ಕೆ ಸಹಕಾರಿಯಾಗುತ್ತವೆ” ಎಂದು ಅಭಿಪ್ರಾಯಪಟ್ಟರು.

 ಶ್ರೀ ಶ್ರೀನಿವಾಸ್ ಗುರೂಜೀಗಳು ಮಾತನಾಡಿ,

“ಮಾನವನ ಜೀವನದಲ್ಲಿ ಆರೋಗ್ಯವೇ ಅತಿ ದೊಡ್ಡ ಸಂಪತ್ತು. ನೈಸರ್ಗಿಕ ಪದಾರ್ಥಗಳಿಂದ ತಯಾರಾದ ಆಯುರ್ವೇದ ಉತ್ಪನ್ನಗಳು ದೇಹ ಮತ್ತು ಮನಸ್ಸಿಗೆ ಶುದ್ಧತೆ ನೀಡುತ್ತವೆ.

ವಿಸ್ಟಾರ್ ವೆಲ್‌ನೆಸ್ ಸಂಸ್ಥೆ ಸಾವಿರಾರು ಜನರಿಗೆ ಆರೋಗ್ಯ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ.

‘ಜನರಿಗೆ ಒಳ್ಳೆಯದನ್ನು ತಲುಪಿಸುವುದು ಸೇವೆಯ ಶ್ರೇಷ್ಠ ರೂಪ’ — ಈ ತತ್ವವನ್ನು ಅನುಸರಿಸುತ್ತಿರುವ ಈ ಸಂಸ್ಥೆಯ ಕಾರ್ಯ ಇನ್ನಷ್ಟು ವಿಸ್ತರಿಸಲಿ” ಎಂದು ಆಶೀರ್ವದಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಡೈಮಂಡ್ ಡೈರೆಕ್ಟರ್ ಕನ್ಯಾಕುಮಾರಿ ಮಾತನಾಡಿ,

“ನಾವು ಬಳಸುವ ಉತ್ಪನ್ನಗಳನ್ನು ಜನರಿಗೂ ತಲುಪಿಸಿ, ಆರೋಗ್ಯಕರ ಸಮಾಜ ನಿರ್ಮಾಣ ಮಾಡುವುದೇ ನಮ್ಮ ಉದ್ದೇಶ”

ಒಟ್ಟಿನಲ್ಲಿ, ಆಧ್ಯಾತ್ಮ, ಆರೋಗ್ಯ ಮತ್ತು ಆಯುರ್ವೇದದ ಮಹತ್ವವನ್ನು ಜನರಿಗೆ ತಲುಪಿಸುವಲ್ಲಿ ಸಾವಿರಾರು ಜನರು ಕೆಲಸ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕರಾದ ಈಶ್ವರ, ದಯಾನಂದ, ಶೈಲಾ, ಸುನಿಲಾ, ಗೋವಿಂದ್ ರಾಜು, ಚಂದ್ರಶೇಖರ ಹಾಗೂ ರಾಜ್ಯ ಪ್ರಶಸ್ತಿ ವಿಜೇತ ಆನಂದ್ ಸಿ ತಿರುಮಲ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.

 

Author
Desha Dootha
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪತ್ರಿಕಾ ದಿನಾಚರಣೆ, ಜಿಲ್ಲಾ ಪತ್ರಕರ್ತರ ಸಮಾವೇಶದ ಭಿತ್ತಿಪತ್ರ ಬಿಡುಗಡೆಪ್ರಕಾಶ್ ಹಳ್ಳಿಗುಡಿ ಅವರಿಗೆ ಎಚ್ ಡಿ ಪದವಿ: ಹರ್ಷಹಿರೇಮನ್ನಾಪೂರದಲ್ಲಿ ಶನಿವಾರ ಆರಂಭವಾದ ೧೪ನೇ ಕೊಪ್ಪಳ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಲೇಖಕ ಕಿಶನರಾವ್ ಕುಲಕರ್ಣಿ ಸಮಕಾಲಿನ ಸವಾಲುಗಳು ವಿಷಯವಾಗಿ ಮಾತನಾಡಿದರು.ಊರು ಕೊಳ್ಳೆ ಹೊಡೆದ ನಂತರ, ಕೋಟೆ ಬಾಗಿಲು ಹಾಕಿದರೇನಂತೆ?ಹಣಕ್ಕಿಂತ ಜ್ಞಾನ ಸಂಪತ್ತು ಬಹಳ ಮುಖ್ಯ: ಡಾ. ಮಹಾದೇವ ದೇವರುVB-G RAM G ಯೋಜನೆಯ ಅನುಷ್ಠಾನಿಸುವ ಕುರಿತು ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ತರಬೇತಿಶಾಸಕ ಬಸವರಾಜ ರಾಯರಡ್ಡಿ ಬಂದರು ದಾರಿ ಬಿಡಿ ಪ್ಲೀಸ್..!ಯಲಬುರ್ಗಾ ದಲ್ಲಿ ಇಡ್ಲಿ ದೋಸೆ ಸಿಗವಲ್ಲವಂತೆ...!ರಾಯರಡ್ಡಿಯ ಗೌರವವನ್ನು ನಿರಾಕರಿಸಿದ ಸಿಎಂ ಡಿಕೆಶಿಭಾನಾಪುರದಲ್ಲಿ ಭೀಕರ ರಸ್ತೆ ದುರಂತ: ಡಿವೈಡರ್ ದಾಟಿ ಬಂದ ಲಾರಿ ಡಿಕ್ಕಿ, ಮೃತರ ಸಂಖ್ಯೆ ಐದಕ್ಕೆ ಏರಿಕೆ!