ಕುಕನೂರು: ಸಮೀಪದ ಕುದರಿಮೋತಿ ಬ್ರೈಟ್ ಫ್ಯೂಚರ್ ಪಬ್ಲಿಕ್ ಸ್ಕೂಲ್‌ಗೆ ಶಾಲೆಯ ಭದ್ರತೆ ಹಾಗೂ ವಿದ್ಯಾರ್ಥಿಗಳ ಸುರಕ್ಷತೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಸಿಸಿ ಕ್ಯಾಮರಾಗಳನ್ನು ವಿತರಿಸಲಾಯಿತು ಎಸ್.ಡಿ.ಎಂ.ಸಿ ಅಧ್ಯಕ್ಷರಾದ ವಿಜಯಕುಮಾರ್ ದಾಸರ ಅವರು ಮಾತನಾಡಿ, ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಯ ಜೊತೆಗೆ ಸುರಕ್ಷತೆಯೂ ಅತಿ ಮುಖ್ಯವಾಗಿದ್ದು, ಶಾಲೆಯ ಆವರಣದಲ್ಲಿ ಸಿಸಿ ಕ್ಯಾಮರಾ ಅಳವಡಿಕೆಯಿಂದ ಶಿಸ್ತು ಮತ್ತು ಭದ್ರತೆ ಹೆಚ್ಚಾಗಲಿದೆ ಎಂದು ತಿಳಿಸಿದರು.
ಶಾಲೆಯ ಅಭಿವೃದ್ಧಿಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದ ಅವರು, ಉತ್ತಮ ಶಿಕ್ಷಣದೊಂದಿಗೆ ಸುರಕ್ಷಿತ ವಾತಾವರಣ ನಿರ್ಮಾಣಕ್ಕೆ ಶಾಲಾ ಆಡಳಿತ ಮಂಡಳಿ ಮತ್ತು ಪೋಷಕರು ಕೈಜೋಡಿಸಬೇಕು ಹಾಗೂ ಸಂಸ್ಥೆಯ ಅಧ್ಯಕ್ಷ ಅಶೋಕ ಗಟ್ಟೆಪ್ಪನವರ್ ಹಾಗೂ ಮುಖ್ಯೋಪಾಧ್ಯಾರಾದ ಶಬೀರ್ ಲೇಕ್ಲಿ ಮತ್ತು ಸಿಬ್ಬಂದಿ ವರ್ಗದವರಿಗೆ ಧನ್ಯವಾದಗಳು ತಿಳಿಸುವ ಮೂಲಕ ಈ ಶಾಲೆಗೆ ಸಹಕಾರ ಮತ್ತು ಸಹಾಯ ಮಾಡುವ ಮೂಲಕ ನಮ್ಮ ಸಹಕಾರ ಇರುತ್ತದೆ ಎಂದು ಕರೆ ನೀಡಿದರು.
