ಭಾರತದ ಸಂವಿಧಾನದ ರಚನೆಯಲ್ಲಿ ಪ್ರಮುಖ ಪಾತ್ರವಹಿಸಿದ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಸಮಾನತೆ, ಸ್ವಾತಂತ್ರ್ಯ ಮತ್ತು ನ್ಯಾಯದ ಮೌಲ್ಯಗಳನ್ನು ನಮ್ಮ ದೇಶದ ಸಂವಿಧಾನದಲ್ಲಿ ಅಚ್ಚಳಿಯದಂತೆ ಮೂಡಿಸಿದ್ದಾರೆ. ಅವರ ದೂರದೃಷ್ಟಿ ಮತ್ತು ಬದ್ಧತೆಯ ಫಲವಾಗಿ ನಮ್ಮ ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ಹಕ್ಕುಗಳು ಮತ್ತು ಗೌರವಯುತ ಜೀವನದ ಭರವಸೆ ನೀಡುತ್ತದೆ ಶೋಷಿತರ ಹಾಗೂ ಹಿಂದುಳಿದವರ ಹಕ್ಕುಗಳಿಗಾಗಿ ಅವರು ನಡೆಸಿದ ಹೋರಾಟವು ಸದಾ ಪ್ರೇರಣೆಯಾಗಿ ಉಳಿದಿದೆ. ಅವರ ಆದರ್ಶಗಳು ಮತ್ತು ಸಂವಿಧಾನದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು, ಸಮಾನತೆ ಮತ್ತು ನ್ಯಾಯಪಾಲಿತ ಸಮಾಜ ನಿರ್ಮಾಣದ ದಿಸೆಯಲ್ಲಿ ನಾವು ಎಲ್ಲರೂ ಕೈಜೋಡಿಸೋಣ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮದ ದಳಪತಿ ಹನುಮಗೌಡ ಪೊಲೀಸ್ ಪಾಟೀಲ್,ಗ್ರಾಮದ ಯುವ ಮುಖಂಡರಾದ ವೀರೇಶ ಕಾಳಿ,ವಿಜಯಕುಮಾರ್ ದಾಸರ್, ಮಂಜುನಾಥ ಸಜ್ಜನ್,ದ್ಯಾಮಣ್ಣ ಉಚ್ಚಲಕುಂಟಿ,ಶ್ರೀಕಾಂತ್ ಸಜ್ಜನ್,ದುರಗೇಶ ಕಾಳಿ,ಮುತ್ತು ಕಾಳಿ,ಶರಣಪ್ಪ ಕಾಳಿ,ನಿಂಗಜ್ಜ ನಡಲರ್,ಧರ್ಮಣ್ಣ ಕಾಳಿ,ಉಮೇಶ ತಲ್ಲೂರು,ರೈತಪರ ಹೋರಾಟಗಾರ ಸುರೇಶ ಚೌಡ್ಕಿ,ಈಶಪ್ಪ ವಣಗೇರಿ, ಫಕೀರಪ್ಪ ಹನ್ಮಟ್ಟಿ,ಸೇರಿದಂತೆ ಇತರರು ಇದ್ದರು
