ಗಂಗಾವತಿ ತಾಲೂಕಿನ ಹೇರೂರು ಗ್ರಾಮದ ಮೊಬೈಲ್ ಟವರ್ ಸಮೀಪದ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ ಏಳು ಜನರನ್ನು ಗಂಗಾವತಿ ಗ್ರಾಮೀಣ ಠಾಣೆಯ ಸಿಪಿಐ ರಂಗಪ್ಪ ಹೆಚ್. ದೊಡ್ಡಮನಿ ನೇತೃತ್ವದ ತಂಡ ಸೋಮವಾರ ಸಂಜೆ ದಾಳಿ ನಡೆಸಿ 7 ಜನರನ್ನು ಬಂಧಿಸಿದ್ದಾರೆ.
ಬಂಧಿತರು ಹೇರೂರು ಗ್ರಾಮದ ವಿರೂಪಣ್ಣ (43), ಫಕೀರಪ್ಪ (41), ಮಲ್ಲಿಕಾರ್ಜುನ (52), ಯಮನೂರಪ್ಪ (55), ಬಸವರಾಜ (55), ಸಿದ್ದು (29) ಮತ್ತು ಹೆಚ್.ಎಂ. ರುದ್ರಯ್ಯ ಸ್ವಾಮಿ (63) ಎಂದು ಗುರುತಿಸಲಾಗಿದೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ಬಂಧಿತರಿಂದ ಒಟ್ಟು 6,150 ರೂ. ನಗದು ವಶಪಡಿಸಿಕೊಂಡಿದ್ದಾರೆ.
ಈ ಕುರಿತು ಗಂಗಾವತಿ ಗ್ರಾಮೀಣ ಠಾಣೆಯ ಸಿಪಿಐ ರಂಗಪ್ಪ ಹೆಚ್. ದೊಡ್ಡಮನಿ ಅವರು ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ವ್ಯಾಪ್ತಿಯಲ್ಲಿ ಕಾನೂನು ಬಾಹಿರ ಚಟುವಟಿಕೆಗೆ ಯಾವುದೇ ಆಸ್ಪದ ಕೊಡಲ್ಲ ಸಾರ್ವಜನಿಕರು ಇಂತಹ ಚಟುವಟಿಕೆ ನಡೆದರೆ ಕೂಡಲೇ 112 ಗೆ ಅಥವಾ ಗ್ರಾಮೀಣ ಠಾಣೆಯ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು ಮಾಧ್ಯಮಕ್ಕೆ ತಿಳಿಸಿದರು, ಸಧ್ಯಕ್ಕೆ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.
