ಗಂಗಾವತಿ ಎಸ್ ಎಸ್ ಎಲ್ ಸಿ (ಸಿಬಿಎಸ್ ಇ) ಪರೀಕ್ಷೆಯಲ್ಲಿ ಶೇ.95.8 ಅಂಕ ಗಳಿಸಿರುವ ನಗರದ ಪ್ರತಿಭಾವಂತ ವಿದ್ಯಾರ್ಥಿನಿ ಕುಮಾರಿ ಖುಷಿ ಆನಂದ್ ಅಕ್ಕಿಯನ್ನು ಹೆಬ್ಬಾಳ್ ಶ್ರೀ ನಾಗಭೂಷಣ ಶಿವಚಾರ್ಯ ಮಹಾಸ್ವಾಮಿಗಳಿಂದ ಆಶೀರ್ವಾದದ ಮೂಲಕ ಸನ್ಮಾನ ಮಾಡಿ, ಮುಂದಿನ ದಿನಮಾನ ಗಳಲ್ಲಿ ಖುಷಿ ಉನ್ನತ ವ್ಯಾಸಂಗಗ ಳಲ್ಲಿ ಇದೇ ರೀತಿ ಉನ್ನತ ಸ್ಥಾನವನ್ನು ಪಡೆದುಕೊಂಡು ನಾಡಿನ ಉದ್ದಾಗಲಕ್ಕೂ ಹೆಸರು ಹಬ್ಬಲಿ, ಅಕ್ಕಿ ಕುಟುಂಬದವರ ಜೀವನದಲ್ಲೂ ಖುಷಿ ಸದಾ ಖುಷಿ ತರಲಿ ಎಂದು ಹಾರೈಸಿದರು.
ಅದೇ ರೀತಿಯಾಗಿ ಕಾಂಗ್ರೆಸ್ ಮುಖಂಡರು ಹಾಗೂ ಮಾಜಿ ವಿದಾನ ಪರಿಷತ್ ಸದಸ್ಯರಾದ ಹೆಚ್. ಆರ್. ಶ್ರೀನಾಥ ಅವರು SSLC (ICSE ) ಸಿಲೆಬಸ್ ನಲ್ಲಿ ಉತ್ತಮ ಅಂಕಗಳಿಸಿದ ಖುಷಿಯನ್ನು ತಮ್ಮ ನಿವಾಸಕ್ಕೆ ಕರೆಯಿಸಿಕೊಂಡು ಗೌರವಿಸಿ ಆಶೀರ್ವದಿಸಿ ಮುಂದಿನ ದಿನಗಳಲ್ಲಿಯೂ ಸಹ ಇನ್ನು ಹೆಚ್ಚಿನ ಅಂಕಗಳಿಸಿ ದೊಡ್ಡ ಅಧಿಕಾರಿ ಯಾಗಿ ಬಂದು ಕುಟುಂಬಕ್ಕೆ ಹಾಗೂ ನಗರಕ್ಕೆ ಉತ್ತಮ ಹೆಸರು ತರುವಂತೆ ಆಶಿಸಿದ್ದು, ಅವರಿಗೆ ಅಕ್ಕಿ ಕುಟುಂಬದ ಪರವಾಗಿ ಅಭಿನಂದನೆಗಳು ತಿಳಿಸಿದ್ದರೂ ಇದೇ ಸಂದರ್ಭದಲ್ಲಿ ರಮೇಶ ಗೌಳಿಯವರು ಹಾಗೂ ಸುರೇಶ ಗೌರಪ್ಪನವರು ಉಪಸ್ಥಿತರಿದ್ದರು.
ಉದ್ಯಮಿ ಅಕ್ಕಿ ಆನಂದ ಅವರ ಪುತ್ರಿಯಾಗಿರುವ ಖುಷಿ ಅಕ್ಕಿ ಸಾಧನೆಗೆ ಇಸ್ಲಾಂಪೂರಿನ ಭಾವೈಕ್ಯತಾ ಸಮಿತಿಯ ಮುಸ್ಲಿಂ ಸದಸ್ಯರು ಸನ್ಮಾನಿಸಿ ಗೌರವಸಿಸುವ ಮೂಲಕ ಭಾವೈಕ್ಯತೆ ಮೆರೆದರು.
ಉದ್ಯಮಿ ಅಕ್ಕಿ ಆನಂದ ಅವರ ಪುತ್ರಿಯಾಗಿರುವ ಖುಷಿ ಅಕ್ಕಿ ಸಾಧನೆಗೆ ಈ ಸಂದರ್ಭದಲ್ಲಿ ವೀರೇಶ ಸಮಾಜದ ಹಿರಿಯ ಮುಖಂಡರಾದ ಕೋಟ್ರಪ್ಪ ಅಕ್ಕಿ, ಗುಂಡೇಶ ಬೆಣಕಲ್ಲ್.ಪ್ರಭಾಕರ್ಚಿ ನ್ನಪಾಟೀಲ್,ಮಲ್ಲಿಕಾರ್ಜುನ ಅಕ್ಕಿ,ಚಂದ್ರಶೇಖರ ಅಕ್ಕಿ,ಸೇರಿದಂತೆ ಇತರರು ಇದ್ದರು.
