ಕುಷ್ಟಗಿ : ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ,ಬಿಸಿಯೂಟ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ನೀಡಲಾಗಿದ್ದು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಂಡು ಗುಣಮಟ್ಟದ ಶಿಕ್ಷಣ ಪಡೆದುಕೊಳ್ಳಬೇಕೆಂದು ಎಸ್ಡಿಎಮ್ಸಿ ಅಧ್ಯಕ್ಷ ಬಸವರೆಡ್ಡೆಪ್ಪ ಹಾಲಕೇರಿ ಹೇಳಿದರು.
ಸೋಮವಾರ ಸಮೀಪದ ಕಂದಕೂರ ಗ್ರಾಮದ ಪಿ.ಎಮ್.ಶ್ರೀ ಸರಕಾರಿ ಪ್ರೌಢ ಶಾಲೆ (ಆರ್.ಎಮ್.ಎಸ್.ಎ) ನಡೆದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ಹಾಗೂ ಪಠ್ಯಪುಸ್ತಕ ವಿತರಿಸಿ ಮಾತನಾಡಿದರು.
ಶಾಲಾ ಆವರಣ ಶುಚಿಗೊಳಿಸಿ, ತರಗತಿ ಕೊಠಡಿಗಳನ್ನು ಕಲಿಕೆಗೆ ಸಿದ್ಧಪಡಿಸಲಾಗಿತ್ತು. ಅಲ್ಲದೆ ಶಾಲೆಯ ಪ್ರವೇಶ ದ್ವಾರ, ತರಗತಿ ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ಪಠ್ಯಪುಸ್ತಕ, ಸಮವಸ್ತ್ರ ವಿತರಣೆ ಮಾಡಿ ಸಿಹಿ ಊಟದ ವ್ಯವಸ್ಥೆ ಮಾಡಲಾಗಿತ್ತು.
ಪ್ರಭಾರಿ ಮುಖ್ಯಶಿಕ್ಷಕ ಬಸವರಾಜ ಗುರಿಕಾರ. ಸಹಶಿಕ್ಷಕರಾದ ಕಿಶನರಾವ್ ಕುಲಕರ್ಣಿ, ಶಿಲ್ಪಾ ಅಂಗಡಿ, ಶ್ರೀದೇವಿ ಕಟ್ಟಿಮನಿ, ಶಿವಲೀಲಾ ಮೇದಿನಾಪೂರ, ಮಹಾಂತೇಶ ಉಳ್ಳಾಗಡ್ಡಿ ಇದ್ದರು.
