Web Stories
Desha Dootha
ePaper
| LIVE |ಅಂತಾರಾಷ್ಟ್ರೀಯ|ರಾಷ್ಟ್ರೀಯ|ರಾಜ್ಯ |ಕಲ್ಯಾಣ ಕರ್ನಾಟಕ|ಕೊಪ್ಪಳ|ಯಲಬುರ್ಗಾ|ಕುಕನೂರು|ಕುಷ್ಟಗಿ|ಗಂಗಾವತಿ |ಕಾರಟಗಿ |ಕನಕಗಿರಿ| ಕೊಪ್ಪಳ ಸ್ಥಳೀಯ|ಸುತ್ತ-ಮುತ್ತ|Feature|ಪಾಲಿಟಿಕ್ಸ್|ಕ್ಷೇತ್ರವಾರು |
| LIVE |ಅಂತಾರಾಷ್ಟ್ರೀಯ|ರಾಷ್ಟ್ರೀಯ|ರಾಜ್ಯ |ಕಲ್ಯಾಣ ಕರ್ನಾಟಕ|ಕೊಪ್ಪಳ
ಯಲಬುರ್ಗಾಕುಕನೂರುಕುಷ್ಟಗಿಗಂಗಾವತಿ ಕಾರಟಗಿ ಕನಕಗಿರಿ ಕೊಪ್ಪಳ ಸ್ಥಳೀಯಸುತ್ತ-ಮುತ್ತFeatureಪಾಲಿಟಿಕ್ಸ್ಕ್ಷೇತ್ರವಾರುಲೇಖನ

ಕುರಿಗಾಹಿಯ ಮಗನಿಂದ ಕಾನೂನು ಲೋಕದ ಗೆಲುವು

ಡಿ.ಡಿ. ನ್ಯೂಸ್ : ಬೆಳಗಾವಿ

Advertisement

ಸಾಧನೆಯ ಶಿಖರ ಏರಿದ ರೇವಣ್ಣ, ಎಲ್‌ಎಲ್‌ಬಿಯಲ್ಲಿ ದ್ವಿತೀಯ ಸ್ಥಾನ, ಗ್ರಾಮಕ್ಕೆ ಹೆಮ್ಮೆ

ಜಿಲ್ಲೆಯ ನಿಪ್ಪಾಣಿ ತಾಲೂಕಿನ ಗಳತಗಾ ಎಂಬ ಸಣ್ಣ ಗ್ರಾಮ. ಇಲ್ಲಿ ದಿನವೂ ಕುರಿಗಳನ್ನು ಮೇಯಿಸುವುದೇ ಜೀವನವಾದ ಒಂದು ಸಾಮಾನ್ಯ ಕುಟುಂಬ. ಅದೇ ಕುಟುಂಬದ ಮಗ ರೇವಣ್ಣ ಶಿವಪೂರೆ ಇಂದು ಎಲ್‌ಎಲ್‌ಬಿ ಪದವಿಯಲ್ಲಿ ದ್ವಿತೀಯ ಸ್ಥಾನ ಪಡೆದು ಸುವರ್ಣ ಪದಕ ಗೆದ್ದು ಎಲ್ಲರ ಗಮನ ಸೆಳೆದಿದ್ದಾನೆ.

ರೇವಣ್ಣನ ತಂದೆ ದೇವಪ್ಪ ಶಿವಪೂರೆ ಕುರಿಗಾಹಿ. ದಿನದ ಬಹುಭಾಗವನ್ನು ಕುರಿಗಳೊಂದಿಗೆ ಹೊಲಗಳಲ್ಲಿ ಕಳೆದರೂ, ಮಗನ ಶಿಕ್ಷಣಕ್ಕೆ ಯಾವತ್ತೂ ತಗ್ಗು ಬಾರದಂತೆ ನೋಡಿಕೊಂಡವರು. ಆರ್ಥಿಕ ಸವಾಲುಗಳು ಇದ್ದರೂ, “ಓದಿ ದೊಡ್ಡವನಾಗು” ಎಂಬ ತಂದೆಯ ಮಾತು ರೇವಣ್ಣನಿಗೆ ಸದಾ ಪ್ರೇರಣೆಯಾಯಿತು.news_1777206327_0_781.webp

ಗ್ರಾಮದ ಸರಳ ಪರಿಸರದಲ್ಲಿ ಬೆಳೆದ ರೇವಣ್ಣ, ಬಾಲ್ಯದಲ್ಲೇ ಓದಿನತ್ತ ಹೆಚ್ಚು ಆಸಕ್ತಿ ತೋರಿದ. ಬೆಳಗಿನ ಕೆಲಸಗಳಲ್ಲಿ ತಂದೆಗೆ ಸಹಾಯ ಮಾಡಿ, ಉಳಿದ ಸಮಯವನ್ನು ಪುಸ್ತಕಗಳೊಂದಿಗೆ ಕಳೆಯುತ್ತಿದ್ದ. ಶಾಲೆಯ ದಿನಗಳಿಂದಲೇ ಅವನ ಪರಿಶ್ರಮ ಮತ್ತು ಶಿಸ್ತು ಶಿಕ್ಷಕರ ಗಮನ ಸೆಳೆದಿತ್ತು.

ಮುಂದೆ ಕಾನೂನು ಪದವಿಯನ್ನು ಆಯ್ಕೆ ಮಾಡಿಕೊಂಡ ರೇವಣ್ಣ, ತನ್ನ ಗುರಿಯತ್ತ ಅಚಲವಾಗಿ ಸಾಗಿದ. ಕಾಲೇಜಿನಲ್ಲಿಯೂ ನಿರಂತರ ಪರಿಶ್ರಮ, ಉಪನ್ಯಾಸಕರ ಮಾರ್ಗದರ್ಶನ ಮತ್ತು ಆತ್ಮವಿಶ್ವಾಸದಿಂದ ಎಲ್‌ಎಲ್‌ಬಿ ಪದವಿಯಲ್ಲಿ ದ್ವಿತೀಯ ಸ್ಥಾನ ಗಳಿಸಿ, ಕರ್ನಾಟಕ ವಿಶ್ವವಿದ್ಯಾಲಯದ 75ನೇ ಘಟಿಕೋತ್ಸವದಲ್ಲಿ ಸುವರ್ಣ ಪದಕ ಪಡೆದುಕೊಂಡನು.

ರೇವಣ್ಣನ ಈ ಸಾಧನೆ ಕೇವಲ ಅವನ ಕುಟುಂಬಕ್ಕಷ್ಟೇ ಅಲ್ಲ, ಸಂಪೂರ್ಣ ಗ್ರಾಮದ ಹೆಮ್ಮೆ. ಕುರಿಗಾಹಿಯ ಮಗನೊಬ್ಬ ಕಾನೂನು ಕ್ಷೇತ್ರದಲ್ಲಿ ಮೆರೆದಿರುವುದು ಅನೇಕ ಗ್ರಾಮೀಣ ವಿದ್ಯಾರ್ಥಿಗಳಿಗೆ ಹೊಸ ಭರವಸೆ ಮೂಡಿಸಿದೆ.

ಸರಳ ಜೀವನದಿಂದ ಉನ್ನತ ಸಾಧನೆಗೆ ತಲುಪಿದ ರೇವಣ್ಣನ ಕಥೆ, ಪರಿಶ್ರಮ ಮತ್ತು ಸಂಕಲ್ಪ ಇದ್ದರೆ ಯಾವುದೇ ಅಡೆತಡೆಗಳನ್ನೂ ಜಯಿಸಬಹುದು ಎಂಬುದಕ್ಕೆ ಜೀವಂತ ಸಾಕ್ಷಿಯಾಗಿದೆ.

*ಕೋಟ್ -1* 

ನನ್ನ ಸಾಧನೆಗೆ ಉಪನ್ಯಾಸಕರ ಪ್ರೋತ್ಸಾಹವೇ ಪ್ರಮುಖ ಕಾರಣ, ಮುಂದೆ ನ್ಯಾಯಾಧೀಶನಾಗುವ ಬಯಕೆ ಇದೆ.

 *ರೇವಣ್ಣ ಶಿವಪೂರೆ* 

 *ಕೋಟ್-2* 

ಗ್ರಾಮೀಣ ಹಿನ್ನೆಲೆಯ ವಿದ್ಯಾರ್ಥಿ ಇಂತಹ ಸಾಧನೆ ಮಾಡಿರುವುದು ಹೆಮ್ಮೆಯ ಸಂಗತಿ, ರೇವಣ್ಣ ಅವರ ಮುಂದಿನ ಕಾನೂನು ಹೋರಾಟ ಜೀವನ ಯಶಸ್ವಿಯಾಗಲಿ

 *ಹನುಮಗೌಡ ನಿಡಗುಂದಿ,* ಹೈಕೋರ್ಟ್ ವಕೀಲರು

Author
Desha Dootha
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪತ್ರಿಕಾ ದಿನಾಚರಣೆ, ಜಿಲ್ಲಾ ಪತ್ರಕರ್ತರ ಸಮಾವೇಶದ ಭಿತ್ತಿಪತ್ರ ಬಿಡುಗಡೆಪ್ರಕಾಶ್ ಹಳ್ಳಿಗುಡಿ ಅವರಿಗೆ ಎಚ್ ಡಿ ಪದವಿ: ಹರ್ಷಹಿರೇಮನ್ನಾಪೂರದಲ್ಲಿ ಶನಿವಾರ ಆರಂಭವಾದ ೧೪ನೇ ಕೊಪ್ಪಳ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಲೇಖಕ ಕಿಶನರಾವ್ ಕುಲಕರ್ಣಿ ಸಮಕಾಲಿನ ಸವಾಲುಗಳು ವಿಷಯವಾಗಿ ಮಾತನಾಡಿದರು.ಊರು ಕೊಳ್ಳೆ ಹೊಡೆದ ನಂತರ, ಕೋಟೆ ಬಾಗಿಲು ಹಾಕಿದರೇನಂತೆ?ಹಣಕ್ಕಿಂತ ಜ್ಞಾನ ಸಂಪತ್ತು ಬಹಳ ಮುಖ್ಯ: ಡಾ. ಮಹಾದೇವ ದೇವರುVB-G RAM G ಯೋಜನೆಯ ಅನುಷ್ಠಾನಿಸುವ ಕುರಿತು ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ತರಬೇತಿಶಾಸಕ ಬಸವರಾಜ ರಾಯರಡ್ಡಿ ಬಂದರು ದಾರಿ ಬಿಡಿ ಪ್ಲೀಸ್..!ಯಲಬುರ್ಗಾ ದಲ್ಲಿ ಇಡ್ಲಿ ದೋಸೆ ಸಿಗವಲ್ಲವಂತೆ...!ರಾಯರಡ್ಡಿಯ ಗೌರವವನ್ನು ನಿರಾಕರಿಸಿದ ಸಿಎಂ ಡಿಕೆಶಿಭಾನಾಪುರದಲ್ಲಿ ಭೀಕರ ರಸ್ತೆ ದುರಂತ: ಡಿವೈಡರ್ ದಾಟಿ ಬಂದ ಲಾರಿ ಡಿಕ್ಕಿ, ಮೃತರ ಸಂಖ್ಯೆ ಐದಕ್ಕೆ ಏರಿಕೆ!