ರಾಯಚೂರು ಇ. ಎಂ. ಆರ್. ಐ 108 ಜಿ. ಎಚ್. ಎಸ್. ವತಿಯಿಂದ ಜಿಲ್ಲಾ ಮುಖ್ಯ ಕಚೇರಿ ಮುಂಭಾಗ ಇಂದು ನ್ಯಾಷನಲ್ ಪೈಲೇಟ್ ದಿನಾಚರಣೆಯನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು. 108 ಆಂಬುಲೆನ್ಸ್ ಚಾಲಕರ ನ್ಯಾಷನಲ್ ದಿನಾಚರಣೆಯನ್ನು ಉದ್ದೇಶಿಸಿ 108 ಆರೋಗ್ಯ ಕವಚ ಆಂಬುಲೆನ್ಸ್ ಜಿಲ್ಲಾ ಅಧಿಕಾರಿಗಳಾದ, ಗಣಪತಿ ಮಾತನಾಡುತ್ತಾ ಆಂಬುಲೆನ್ಸ್ ಚಾಲಕರ ಸೇವೆ ಅತ್ಯಂತ ಪ್ರಮುವಾದದ್ದು ತುರ್ತು ಪರಿಸ್ಥಿತಿ ಗಳಲ್ಲಿ ಹಗಲು ರಾತ್ರಿ ಸೇವೆ ಸಲ್ಲಿಸಿ ತಮ್ಮಪ್ರಾಣವನ್ನು ಬದಿಗಿಟ್ಟು ಅನೇಕ ಅಮೂಲ್ಯ ಜೀವಗಳನ್ನು ಉಳಿಸುವಲ್ಲಿ ಮಹತ್ವದ ಪಾತ್ರವಹಿಸಿರುವ 108 ಪೈಲೇಟ್ ಗಳು ಸಮರ್ಪಣೆ, ಸಮಯ ಪ್ರಜ್ಞೆ ಹಾಗೂ ರೋಗಿಯ ಜೀವ ಉಳಿಸಲು ನಿಸ್ವಾರ್ಥ ಸೇವೆಗೆ ಶ್ಲಾಘನೀವಾದದ್ದು ಎಂದು ಅಭಿನಂದನೆಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಸುವರ್ಣ ಕರ್ನಾಟಕ ಆರೋಗ್ಯ ಕವಚ ರಾಜ್ಯ ಸಂಚಾಲಕರಾದ ಯಾಸೀನ್ ಬಿ. ಗಣೇಕಲ್ಸ್ ಜಿಲ್ಲೆಯ ಪೈಲೇಟ್ ಗಳಿಗೆ ಜಾಗ್ರತೆಯಾಗಿ ವಾಹನ ಚಾಲನೆ ಮಾಡಿ ನಿಮ್ಮ ಜೀವ ರೋಗಿಯ ಜೀವ ಸುರಕ್ಷತವಾಗಿ ಮುಂಜಾಗ್ರತವಾಗಿ ವಹಿಸಿಕೊಂಡು ಚಾಲನೆ ಮಾಡಿ, ಈ ಒಂದು ಪೈಲೇಟ್ ದಿನದಂದು ರಾಜ್ಯದ ಪೈಲೇಟ್ ಗಳಿಗೆ ಶುಭಾಶಯಗಳು ತಿಳಿಸಿದರು, ಈ ಸಂದರ್ಭದಲ್ಲಿ ಜಿಲ್ಲೆಯ ಸಿಬ್ಬಂದಿಗಳಾದ, ಇಸಾಕ್, ಜಯರಾಜ್, ಛತ್ರಪ್ಪ, ಕಾಸಿಂ ಅಲಿ, ಗೋವಿಂದ, ಇಬ್ರಾಹಿಂ ಖಾದ್ರಿ,ರೆಡ್ಡಿ,ಜ್ಞಾನ ಸುಂದರ, ಅಮೀರ್ ಪಾಷ, ಮುಸ್ತಾಕ್ ಬೈ, ಇರೇಶ, ಮದ್ಲು ಹಟ್ಟಿ,ಹಾಗೂ ಜಿಲ್ಲಾ ಸಿಬ್ಬಂದಿಗಳು ಇದ್ದರು.
