ವಿರುಪಾಪೂರು ಸೀಮಾದ ನ್ಯಾಷನಲ್ ಲೇಔಟ್ ನ ಶೆಡ್ ವೊಂದರಲ್ಲಿ ವೇಶ್ಯವಾಟಿಕೆ ದಂಧೆ ನಡೆಯುತ್ತಿರುವ ಕುರಿತು ದೊರೆತ ಖಚಿತ ಮಾಹಿತಿ ಮೇರೆಗೆ ಎಸ್‌ಪಿ ಅರುಣಾಂಕ್ಷು ಗಿರಿ ಅವರ ಮಾರ್ಗದರ್ಶನದ ಮೇರೆಗೆ ಗ್ರಾಮೀಣ ಪೊಲೀಸ್ ಠಾಣೆಯ ಸಿಪಿಐ ವಿನಾಯಕ, ಪಿಎಸ್‌ಐ ಮೌನೇಶ ರಾಠೋಡ್ ನೇತೃತ್ವದ ತಂಡ ದಾಳಿ ನಡೆಸಿದ್ದು, ಈ ವೇಳೆ ಮಾಗಡಿ

ತಾಲ್ಲೂಕಿನ ಯುವತಿಯನ್ನು ರಕ್ಷಣೆ ಮಾಡಲಾಗಿ ದ್ದು, ಗಂಗಾನಗರದ ವಿಜಯಕುಮಾರ, ಗಂಗಾ ಧರ್ ಹಾಗೂ ಮಹಿಬೂಬಿಯಾ ಕಾಲೋನಿ ಶ್ಯಾಮಣ್ಣ ಎನ್ನುವವರನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ದಾಳಿಯಲ್ಲಿ ಸಿಕ್ಕ ಆರೋಪಿ ವಿಜಯ ಕುಮಾರ ಪಂಪಣ್ಣ ಎನ್ನುವ ವ್ಯಕ್ತಿ, ಸ್ವಂತ ವಾಸಕ್ಕೆಂದು ಶೆಡ್ ನ್ನು ಬಾಡಿಗೆ ಪಡೆದು, ಲಾಭಕ್ಕಾಗಿ ಬಡತನದಲ್ಲಿರುವ ಮಹಿಳೆಯರನ್ನು ಉದ್ಯೋಗ ಕೊಡಿಸುವುದಾಗಿ ಹೇಳಿ, ಹಣದ ಆಮಿಷ ತೋರಿಸಿ ವೇಶ್ಯಾವಾಟಿಕೆ ಬಯಸುವ ತನ್ನ ಪರಿಚಯದ ಪುರುಷರಿಗೆ ಮಹಿಳೆಯರ ಪೋಟೊಗಳನ್ನು ಕಳುಹಿಸಿ, ವೇಶ್ಯಾವಾಟಿಕೆ ನಡೆಸುತ್ತಿದ್ದ ಎಂದು ತಿಳಿದು ಬಂದಿದೆ.
