ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷನಾಗಿದ್ದ ಕುರುಬರ ವೆಂಕಟೇಶ ಅಲಿಯಾಸ್ ಜೆಎನ್‌ಎನ್ ವೆಂಕಿ ಕೊಲೆ ಪ್ರಕರಣದಲ್ಲಿನ ಆರೋಪಿಗಳಿಗೆ ಇಲ್ಲಿನ ಹೆಚ್ಚುವರಿ ಜಿಲ್ಲಾ ನ್ಯಾಯಾಲಯವು ಶಿಕ್ಷೆ ಕಾರಾರು ಮಾಡಿ ಗುರುವಾರ ಆದೇಶ ಪ್ರಕಟಿಸಿದೆ.
2025ರ ಡಿಸೆಂಬರ್‌ನಲ್ಲಿ ನಡೆದಿದ್ದ ಕೊಲೆ ಪ್ರಕರಣದ ಮಹತ್ವದ ತೀರ್ಪು ಹೊರ ಬೀಳುವ ಹಿನ್ನೆಲೆ ಇಲ್ಲಿನ ಜಿಲ್ಲಾ ಹೆಚ್ಚುವರಿ ನ್ಯಾಯಾಲಯದ ಆವರಣದಲ್ಲಿ ಜನ ಕಿಕ್ಕಿರಿದು ತುಂಬಿದ್ದರು. ಪ್ರಕರಣ ಕೈಗೆತ್ತಿಕೊಂಡ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಡ್ ಪ್ರಕರಣದಲ್ಲಿನ ಒಟ್ಟು 12 ಜನರ ಪೈಕಿ ಆರು ಜನರಿಗೆ ಶಿಕ್ಷೆ ಕರಾರು ಮಾಡಿದರು.
ಪ್ರಕರಣದಲ್ಲಿನ ಆರೋಪಿ ನಂಬರ್ 1 ಆಗಿರುವ ರವಿ ಪತ್ನಿ ಚೈತ್ರಾ ಸೇರಿದಂತೆ ಮಿಕ್ಕ ಆರು ಜನ ಆರೋಪಿಗಳನ್ನು ನಿರುಪರಾಧಿಗಳು ಎಂದು ಕೋರ್ಟ್ ತೀರ್ಪು ನೀಡಿದೆ. ಶಿಕ್ಷೆಯ ಪ್ರಮಾಣವನ್ನು ಏ.27ರಂದು ಪ್ರಕಟಿಸುವುದಾಗಿ ನ್ಯಾಯಾಧೀಶ ಪ್ರಕಟಿಸಿದರು.
