ನಗರದ ಉಪವಿಭಾಗ ಆಸ್ಪತ್ರೆ ಮುಂಭಾಗದಲ್ಲಿ ರೋಟರಿ ವುಮೆನ್ಸ್ ಕ್ಲಬ್ ಆಫ್ ರೈಸ್ ಬಾಲ್ ವತಿಯಿಂದ ಪ್ರತಿವರ್ಷದಂತೆ ಈ ವರ್ಷ ಬೇಸಿಗೆಯ ಸಂದರ್ಭದಲ್ಲಿ ಸಾರ್ವಜನಿಕರಿಗೆ ಮಜ್ಜಿಗೆ ವಿತರಿಸುವ ಸೇವಾ ಕಾರ್ಯವು ಗಂಗಾವತಿ ನಗರದಲ್ಲಿ ಸಾವಿರಾರು ಭಕ್ತರಿಗೆ ಮಜ್ಜಿಗೆ ಮತ್ತು ತಂಪು ಪಾನೀಯಗಳನ್ನು ವಿತರಿಸುವ ಸಂಪ್ರದಾಯವನ್ನು ರೋಟರಿ ಕ್ಲಬ್ ಮತ್ತು ರೋಟರಿ ವುಮೆನ್ಸ್ ಕ್ಲಬ್ ಪಾಲಿಸುತ್ತಾ ಬಂದಿದೆ ನಗರದಲ್ಲಿ ಪೊಲೀಸರಿಗೆ ಮತ್ತು ಬಿಸಿಲಿನಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಹಾಗೂ ಸಾರ್ವಜನಿಕರಿಗೆ ಮಜ್ಜಿಗೆ ವಿತರಿಸುವ ಮೂಲಕ ಸಮಾಜ ಸೇವೆ ಮಾಡುತ್ತಿದ್ದಾರೆ ಸಾಮಾನ್ಯವಾಗಿ ಮಾರ್ಚ್‌ನಿಂದ ಮೇ ತಿಂಗಳವರೆಗಿನ ಬೇಸಿಗೆ ಸಮಯದಲ್ಲಿ ರಸ್ತೆಯಲ್ಲಿ ಸಂಚರಿಸುವ ಜನರಿಗೆ ಅನುಕೂಲವಾಗುವಂತೆ ಪೊಲೀಸ್ ಠಾಣೆ ಮತ್ತು ಸರ್ಕಾರಿ ಆಸ್ಪತ್ರೆ ಬಸ್ ನಿಲ್ದಾಣಗಳು ಅಥವಾ ಪ್ರಮುಖ ವೃತ್ತಗಳಲ್ಲಿ ಇಂತಹ ಮಜ್ಜಿಗೆ ಕೇಂದ್ರಗಳನ್ನು ತೆರೆಯಲಾಗುತ್ತದೆ ಎಂದು ರೋಟರಿ ರೈಸ್ ಕ್ಲಬ್ ಅಧ್ಯಕ್ಷರಾದ ಗೀತಾ ಚೌದ್ರಿ ಹೇಳಿದರು.
ನಂತರ ಮಾತನಾಡಿದ ಎಸ್.ಎಸ್.ಪಿ.ಲೈಪ್ ಮಿಷನ್ ಮ್ಯಾನೇಜ್ಮೆಂಟ್ ನಿರ್ದೇಶಕರಾದ ಸೋಫಿಯಾರಾಣಿ ಇವರು ನಮ್ಮ ರೋಟರಿ ರೈಸ್ ಕ್ಲಬ್ ವತಿಯಿಂದ ಪ್ರತಿವರ್ಷ ಸಮಾಜಕ್ಕೆ ಒಳ್ಳಯದಾಗಬೇಕೆಂದು ಹೊಸ ಹೊಸ ಕಾರ್ಯಕ್ರಮಗಳನ್ನು ಮಾಡುವ ಮೂಲಕ ನಮ್ಮ ಕೈಯಲ್ಲಿ ಏನು ಸಾದ್ಯ ಅದನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾ ಬಂದಿದ್ದೇವೆ ರಕ್ತದಾನ ಶಿಬಿರ ಮತ್ತು ಆರೋಗ್ಯ ತಪಾಸಣಾ ಶಿಬಿರಗಳನ್ನು ಮಾಡಿದ್ದೇವೆ ಇನ್ನೂ ಆ ದೇವರು ನಮ್ಮ ಶಕ್ತಿ ಕೊಟ್ಟರೆ ದೊಡ್ಡ ದೊಡ್ಡ ಪ್ರಮಾಣದಲ್ಲಿ ಸಮಾಜ ಸೇವೆಯನ್ನು ನಮ್ಮ ರೋಟರಿ ರೈಸ್ ಕ್ಲಬ್ ವತಿಯಿಂದ ಮಾಡುತ್ತೇವೆ ಎಂದು ಭರವಸೆಯನ್ನು ನೀಡಿದರು.
ಈ ಸಂದರ್ಭದಲ್ಲಿ ರೋಟರಿ ರೈಸ್ ಕ್ಲಬ್ ಕಾರ್ಯದರ್ಶಿ ಬಿ.ಶ್ರೀದೇವಿ, ರೋಟರಿ ಕ್ಲಬ್ ರೈಸ್ ಸದಸ್ಯರಾದ ಲಲಿತಾ ನಾಗರಾಜ,ಶಾಹಿನ್ ಕೌಸರ್,ಗಂಗಾವತಿ ಸಂಚಾರಿ ಪೊಲೀಸ್ ಠಾಣೆ ಎ.ಎಸ್.ಐ ರೇವಪ್ಪ, ಕಲಾವತಿ,ಪೊಲೀಸ್ ಸಿಬ್ಬಂದಿ ಪರಶುರಾಮ, ಮಲ್ಲಪ್ಪ, ವಿಜಯಕುಮಾರ್ ಗದ್ದಿ,ಸೇರಿದಂತೆ ಇತರರು ಇದ್ದರು
