"ಮುಂದುವರೆಯುತ್ತಿರುವ ಇಂದಿನ ಆಧುನಿಕ ಶಿಕ್ಷಣದಲ್ಲಿ ಮೌಲ್ಯ ಶಿಕ್ಷಣ ಅತ್ಯಗತ್ಯವಾಗಿ ಬೇಕಾಗಿದೆ. ಅದರಲ್ಲೂ ಬಾಲ್ಯಾವಸ್ಥೆಯಲ್ಲಿಯೇ ಇಂತಹ ನೈತಿಕ ಶಿಕ್ಷಣವನ್ನು ಕೊಡುವಲ್ಲಿ ತಾಯಂದಿರ ಪಾತ್ರ ಹಿರಿದಾದದ್ದು"
ಎಂದು ಕುಷ್ಟಗಿಯ ಸಮಾಜಸೇವಕರಾದ ರವಿಕುಮಾರ್ ಹಿರೇಮಠ ಅವರು ಇತ್ತೀಚೆಗೆ ನಡೆದ NTC/ NTT 2025 ರ ಬ್ಯಾಚಿನ ಪ್ರಶಿಕ್ಷಣಾರ್ಥಿಗಳಿಗೆ ಬಹುಮಾನ ವಿತರಣೆಯ ಸನ್ಮಾನ ಕಾರ್ಯಕ್ರಮ ಹಾಗೂ 2026 ನೇ ಸಾಲಿನ ವಿದ್ಯಾರ್ಥಿಗಳಿಗೆ ನಡೆದ ಸ್ವಾಗತ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಕರೆ ನೀಡಿದರು.
ಕಾರ್ಯಕ್ರದ ಮೊದಲಿಗೆ ಪ್ರಶಿಕ್ಷಣಾರ್ಥಿಗಳಾದ ಕೀರ್ತಿ ಹಿರೇಮಠ ಪ್ರಾರ್ಥನೆಗೈದರು. ನಂತರ ಶರಣಪ್ಪ ಹವಾಲ್ದಾರ ಸ್ವಾಗತಿಸಿದರು. ಕೊರ್ಸಿನ ಮುಖ್ಯ ಸಂಚಾಲಕರಾದ ಚಂದ್ರಶೇಖರ ತುಮ್ಮರಗುದ್ದಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ NTT / NTC ಶಿಕ್ಷಣದ ಮಹತ್ವವನ್ನು ಮನದಟ್ಟು ಮಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸುರೇಶ ಬೇವಿನಕಟ್ಟಿ, ಶರಣಪ್ಪ ಕಟ್ಟಿಮನಿ, ಧಾರವಾಡದ ಸಚಿನ್, ಬೆಳಗಾವಿಯ ಸುಶಿಲಾ ಗುರುವರ, ಸುನೀಲಕುಮಾರ್ ದೇಸಾಯಿ, ಶ್ರೀ ಶರಣಪ್ಪ ಹೆಬ್ಬುಲಿ ಕಾರ್ಯಕ್ರಮ ಕುರಿತು ಅರ್ಥಪೂರ್ಣವಾಗಿ ಮಾತನಾಡಿದರು.
ನಂತರ 2025 ರಲ್ಲಿ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ನಂತರ ವಿಜೇತರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಪ್ರಥಮ ವರ್ಷದ ವಿದ್ಯಾರ್ಥಿಗಳನ್ನು ಹೂಗುಚ್ಛದೊಂದಿಗೆ ಸ್ವಾಗತಿಸಲಾಯಿತು. ಮರಿಯಮ್ಮ ಹಿರೇಮನಿ ಅಧ್ಯಕ್ಷೀಯ ನುಡಿಗನ್ನಾಡಿದರು.
ಶಿಕ್ಷಕರಾದ ಶ್ರೀನಿವಾಸ ದೇಸಾಯಿ ಕಾರ್ಯಕ್ರಮದ ನಿರೂಪಣೆಗೈದು ವಂದಿಸಿದರು.
