Web Stories
Desha Dootha
ePaper
| LIVE |ಅಂತಾರಾಷ್ಟ್ರೀಯ|ರಾಷ್ಟ್ರೀಯ|ರಾಜ್ಯ |ಕಲ್ಯಾಣ ಕರ್ನಾಟಕ|ಕೊಪ್ಪಳ|ಯಲಬುರ್ಗಾ|ಕುಕನೂರು|ಕುಷ್ಟಗಿ|ಗಂಗಾವತಿ |ಕಾರಟಗಿ |ಕನಕಗಿರಿ| ಕೊಪ್ಪಳ ಸ್ಥಳೀಯ|ಸುತ್ತ-ಮುತ್ತ|Feature|ಪಾಲಿಟಿಕ್ಸ್|ಕ್ಷೇತ್ರವಾರು |
| LIVE |ಅಂತಾರಾಷ್ಟ್ರೀಯ|ರಾಷ್ಟ್ರೀಯ|ರಾಜ್ಯ |ಕಲ್ಯಾಣ ಕರ್ನಾಟಕ|ಕೊಪ್ಪಳ
ಯಲಬುರ್ಗಾಕುಕನೂರುಕುಷ್ಟಗಿಗಂಗಾವತಿ ಕಾರಟಗಿ ಕನಕಗಿರಿ ಕೊಪ್ಪಳ ಸ್ಥಳೀಯಸುತ್ತ-ಮುತ್ತFeatureಪಾಲಿಟಿಕ್ಸ್ಕ್ಷೇತ್ರವಾರುಲೇಖನ

ಕೇರಳದ ಕನ್ನಡ ಪತ್ರಕರ್ತರ ಸಂಘದಿಂದ ಮೇ. 16ಕ್ಕೆ ಪ್ರಧಾನ

ಡಿ.ಡಿ. ನ್ಯೂಸ್ : ಗಂಗಾವತಿ

Advertisement

ಚಿತ್ರ: ವಿಶ್ವನಾಥ ಬೆಳಗಲ್ಮಠ

ಜೆಎಂಡಿ ದತ್ತಿನಿಧಿ ಪ್ರಶಸ್ತಿಗೆ ವಿಶ್ವನಾಥ ಬೆಳಗಲ್ಮಠ ಆಯ್ಕೆ

ಗಂಗಾವತಿ ಕೇರಳದ ಕಾಸರಗೋಡಿನ ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘವು ಇತರ ಕನ್ನಡಪರ ಸಂಘಟನೆಗಳೊಂದಿಗೆ ಸೇರಿ ನೀಡುವ ಪ್ರಸಕ್ತ ಸಾಲಿನ ಸಮಾಜಸೇವಕ ಕಲಾಪೋಷಕ ಜೋಸೆಫ್ ಮಾಥಾಯಸ್ ದುಬ್ಬಾ ಪ್ರಾಯೋಜಕತ್ವದ ದತ್ತಿನಿಧಿ ಪ್ರಶಸ್ತಿಗೆ ಗಂಗಾವತಿಯ ಹಿರಿಯ ಪತ್ರಕರ್ತ ವಿಶ್ವನಾಥ ಬೆಳಗಲ್ಮಠ ಅವರನ್ನು ಆಯ್ಕೆ ಮಾಡಲಾಗಿದೆ.

ಈ ಬಗ್ಗೆ ಸಂಘದ ಅಧ್ಯಕ್ಷ ರವಿ ನಾಯ್ಕಪು ಅಧಿಕೃತ ಮಾಹಿತಿ ನೀಡಿದ್ದು, ಬುಧವಾರ ನಡೆದ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಜೋಸೆಫ್ ಮಾಥಾಯಸ್ ದುಬ್ಬಾ ಪ್ರಾಯೋಜಕತ್ವದ ದತ್ತಿನಿಧಿ ಪ್ರಶಸ್ತಿಗೆ ವಿಶ್ವನಾಥ ಅವರನ್ನು ಆಯ್ಕೆ ಮಾಡಲಾಗಿದೆ. ಕಳೆದ 20 ವರ್ಷದಿಂದ ಪತ್ರಿಕಾ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವೆ ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.news_1777562186_0_310.webp

ಮೇ.16ರಂದು ಪ್ರಧಾನ:

ದತ್ತಿನಿಧಿ ಪ್ರಶಸ್ತಿಯು ನಗದು ಮೊತ್ತ, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆ ಹೊಂದಿರುತ್ತದೆ. 2026ನೇ ಮೇ 16 ರಂದು ಬೆಳಗ್ಗೆ 11 ಗಂಟೆಗೆ ಕಾಸರಗೋಡು ಜಿಲ್ಲೆಯ, ಸುಬ್ಬಯ್ಯಕಟ್ಟೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ. ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅಧ್ಯಕ್ಷತೆ ವಹಿಸಲಿದ್ದಾರೆ.

ಕನರ್ಾಟಕ ವಿಧಾನಸಭೆಯ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ, ಸಚಿವ ಎನ್.ಎಸ್. ಭೋಸರಾಜ್, ಮಂಜೇಶ್ವರದ ಶಾಸಕ ಎ.ಕೆ.ಎಂ. ಅಶ್ರಫ್, ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್, ಕನರ್ಾಟಕ ಗಡಿಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ, ಕಲ್ಯಾಣ ಕನರ್ಾಟಕದ ಸದಸ್ಯ ಶಿವಾರೆಡ್ಡಿ ನವಲಿ ಇತರು ಭಾಗಿಯಾಗಲಿದ್ದಾರೆ.

ಪತ್ರಕರ್ತರ ಸಂಪರ್ಕಸೇತು:

ಕಾಸರಗೋಡಿನ ಕನ್ನಡ ಪತ್ರಕರ್ತರ ಕ್ಷೇಮಾಭೀವೃದ್ಧಿ ಸಂಘವು ಕಳೆದ ಎರಡು ದಶಕದಿಂದ ಕೇರಳದಲ್ಲಿ ಜನಮನ್ನಣೆಗೆ ಪಾತ್ರವಾಗಿದೆ. ಸಂಘವು ಕೇರಳದಲ್ಲಿ ಕನ್ನಡ ಭಾಷೆ, ಸಂಸ್ಕೃತಿ, ಕಲೆಗಳ ಉಳಿವಿಗಾಗಿ ಇತರ ಕನ್ನಡಪರ ಸಂಘ ಸಂಸ್ಥೆಗಳೊಂದಿಗೆ ಸೇರಿ ಶ್ರಮಿಸುತ್ತಿದೆ. ಕನ್ನಡ ಮತ್ತು ಮಲೆಯಾಳ ಪತ್ರಕರ್ತರ ಸ್ನೇಹಸೇತುವಾಗಿ ಈ ಸಂಘವು ಕಾಯರ್ಾಚರಿಸುತ್ತಿದೆ.

ಕನರ್ಾಟಕದ ನಾನಾ ಜಿಲ್ಲೆಗಳಲ್ಲಿ ಅನುಪಮ ಸೇವೆ ಸಲ್ಲಿಸುತ್ತಿರುವ ಹಿರಿಯ ಮತ್ತು ಪ್ರತಿಭಾವಂತ ಪತ್ರಕರ್ತರನ್ನು ಸ್ವತಃ ಸಂಘ ಗುರುತಿಸಿ ವಾಷರ್ಿಕ ದತ್ತಿನಿಧಿ ನೀಡುವ ಮೂಲಕ ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದೆ ಎಂದು ಅಧ್ಯಕ್ಷ ರವಿ ನಾಯ್ಕಾಪು, ಕಾರ್ಯದಶರ್ಿ ಗಂಗಾಧರ ಕೆ. ತಿಳಿಸಿದ್ದಾರೆ.

Author
Desha Dootha
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪತ್ರಿಕಾ ದಿನಾಚರಣೆ, ಜಿಲ್ಲಾ ಪತ್ರಕರ್ತರ ಸಮಾವೇಶದ ಭಿತ್ತಿಪತ್ರ ಬಿಡುಗಡೆಪ್ರಕಾಶ್ ಹಳ್ಳಿಗುಡಿ ಅವರಿಗೆ ಎಚ್ ಡಿ ಪದವಿ: ಹರ್ಷಹಿರೇಮನ್ನಾಪೂರದಲ್ಲಿ ಶನಿವಾರ ಆರಂಭವಾದ ೧೪ನೇ ಕೊಪ್ಪಳ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಲೇಖಕ ಕಿಶನರಾವ್ ಕುಲಕರ್ಣಿ ಸಮಕಾಲಿನ ಸವಾಲುಗಳು ವಿಷಯವಾಗಿ ಮಾತನಾಡಿದರು.ಊರು ಕೊಳ್ಳೆ ಹೊಡೆದ ನಂತರ, ಕೋಟೆ ಬಾಗಿಲು ಹಾಕಿದರೇನಂತೆ?ಹಣಕ್ಕಿಂತ ಜ್ಞಾನ ಸಂಪತ್ತು ಬಹಳ ಮುಖ್ಯ: ಡಾ. ಮಹಾದೇವ ದೇವರುVB-G RAM G ಯೋಜನೆಯ ಅನುಷ್ಠಾನಿಸುವ ಕುರಿತು ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ತರಬೇತಿಶಾಸಕ ಬಸವರಾಜ ರಾಯರಡ್ಡಿ ಬಂದರು ದಾರಿ ಬಿಡಿ ಪ್ಲೀಸ್..!ಯಲಬುರ್ಗಾ ದಲ್ಲಿ ಇಡ್ಲಿ ದೋಸೆ ಸಿಗವಲ್ಲವಂತೆ...!ರಾಯರಡ್ಡಿಯ ಗೌರವವನ್ನು ನಿರಾಕರಿಸಿದ ಸಿಎಂ ಡಿಕೆಶಿಭಾನಾಪುರದಲ್ಲಿ ಭೀಕರ ರಸ್ತೆ ದುರಂತ: ಡಿವೈಡರ್ ದಾಟಿ ಬಂದ ಲಾರಿ ಡಿಕ್ಕಿ, ಮೃತರ ಸಂಖ್ಯೆ ಐದಕ್ಕೆ ಏರಿಕೆ!