ಗಂಗಾವತಿ ನಗರದ ಪ್ರಸಿದ್ದ ಕಲ್ಮಠದ ಅಧ್ಯಕ್ಷರಾದ ಶ್ರೀ ಡಾ. ಕೊಟ್ಟೂರು ಮಹಾ ಸ್ವಾಮಿಗಳು ಅವರ 31ನೇ ವರ್ಷದ ಪಟ್ಟಾಭಿಷೇಕ ಮಹೋತ್ಸವವು ಮಂಗ ಳವಾರ ನಗರದಲ್ಲಿ ಭಕ್ತಿ, ಭಾವ ಮತ್ತು ಸಂಭ್ರಮದ ವಾತಾವರಣದಲ್ಲಿ ವಿಜೃಂ ಭಣೆಯಿಂದ ಜರುಗಿತು.
ಈ ಶುಭ ಸಂದರ್ಭದಲ್ಲಿ ಗಂಗಾ ವತಿ ತಾಲೂಕು ವಾಲ್ಮೀಕಿ ಸಮುದಾ ಯದ ಅಧ್ಯಕ್ಷರಾದ ವಿ. ವೀರಭದ್ರಪ್ಪ ನಾಯಕ ಅವರ ನೇತೃತ್ವದಲ್ಲಿ ಸಮಾ ಜದ ಹಿರಿಯ ಮುಖಂಡರು ಮಹಾ ಸ್ವಾಮಿಗಳನ್ನು ಸನ್ಮಾನಿಸಿ ಹಾರ್ದಿಕ ಶುಭಾಶಯಗಳನ್ನು ಸಲ್ಲಿಸಿದರು.
ಈ ವೇಳೆ ಮಾತನಾಡಿದ ವೀರಭದ್ರಪ್ಪ ನಾಯಕ ಅವರು, "ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಅಪಾರ ಸೇವೆ ಸಲ್ಲಿಸುತ್ತಾ ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಿ ರುವ ಪೂಜ್ಯಶ್ರೀ ಡಾ. ಕೊಟ್ಟೂರು ಮಹಾಸ್ವಾಮಿಗಳು ಅವರು ಪಟ್ಟಾಭಿಷೇಕಗೊಂಡು 31 ವರ್ಷ ಪೂರೈಸಿರುವುದು ಸಮಾ ಜದ ಎಲ್ಲರಿಗೂ ಹೆಮ್ಮೆಯ ಸಂಗತಿ. ಶ್ರೀಗಳ ಆಶೀರ್ವಾದ ಸದಾ ಸಮಾ ಜದ ಮೇಲೆ ಇರಲಿ. ಭಗವಂತನು ಅವರಿಗೆ ಆಯುರಾರೋಗ್ಯ ನೀಡಿ ಕಾಪಾಡಲಿ,” ಎಂದು ಪ್ರಾರ್ಥಿಸಿದರು.
ಮಹೋತ್ಸವದ ಅಂಗವಾಗಿ ಕಲ್ಮ ಠದಲ್ಲಿ ವಿವಿಧ ಧಾರ್ಮಿಕ ಕಾರ್ಯ ಕ್ರಮಗಳು, ಪೂಜೆ ಹಾಗೂ ಆಶೀರ್ವ ಚನ ಕಾರ್ಯಕ್ರಮಗಳು ದಿನವಿಡೀ ಜರುಗಲಿದ್ದು, ಭಕ್ತರು ಹಾಗೂ ನಗರದ ಗಣ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಂತಸ ವ್ಯಕ್ತಪಡಿಸಿದರು.